alex Certify ಧಮಾಲ್ ಮಾಡಿದ ಜಿಯೋ…..! ಕೇವಲ 1 ರೂ. ಪ್ಲಾನ್ ಬಿಡುಗಡೆ ಮಾಡಿದ ಕಂಪನಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಧಮಾಲ್ ಮಾಡಿದ ಜಿಯೋ…..! ಕೇವಲ 1 ರೂ. ಪ್ಲಾನ್ ಬಿಡುಗಡೆ ಮಾಡಿದ ಕಂಪನಿ

ರಿಲಯನ್ಸ್ ಜಿಯೋ ಗ್ರಾಹಕರಿಗೆ ಖುಷಿ ಸುದ್ದಿಯೊಂದಿದೆ. ಜಿಯೋ ಅತ್ಯಂತ ಅಗ್ಗದ ಯೋಜನೆಯನ್ನು ಬಿಡುಗಡೆ ಮಾಡಿದೆ. ಯೋಜನೆಯ ಬೆಲೆ ಕೇವಲ 1 ರೂಪಾಯಿ. ಹೌದು, ಮೈ ಜಿಯೋ ಅಪ್ಲಿಕೇಷನ್ ನಲ್ಲಿ ಒಂದು ರೂಪಾಯಿ ಯೋಜನೆಯನ್ನು ನೀವು ನೋಡಬಹುದು.

ಸಿಮ್ ಸಕ್ರಿಯವಾಗಿಡಲು ಬಯಸುವವರಿಗೆ ಈ ಯೋಜನೆ ಉತ್ತಮವಾಗಿದೆ. ಈ ಯೋಜನೆಯಲ್ಲಿ ಕರೆ ಮತ್ತು ಎಸ್ ಎಂ ಸ್  ಸೌಲಭ್ಯವಿಲ್ಲ. ಒಂದು ರೂಪಾಯಿ  ಯೋಜನೆಯು 30 ದಿನಗಳ ಮಾನ್ಯತೆ ಹೊಂದಿರುತ್ತದೆ. ಈ ಯೋಜನೆಯು ಕೇವಲ 100ಎಂಬಿ ಡೇಟಾವನ್ನು ನೀಡುತ್ತದೆ. ಡೇಟಾ ಮುಗಿದ ನಂತರ ಇಂಟರ್ನೆಟ್ ವೇಗವು 60ಕೆಬಿಪಿಎಸ್ ಗೆ  ಇಳಿಯುತ್ತದೆ.

ಜಿಯೋದ ಒಂದು ರೂಪಾಯಿ ಯೋಜನೆಯು ದೇಶದ ಅತ್ಯಂತ ಅಗ್ಗದ ಯೋಜನೆಯಾಗಿದೆ. ಜಿಯೋ ಹೊರತುಪಡಿಸಿ, ಯಾವುದೇ ಟೆಲಿಕಾಂ ಕಂಪನಿಯು ಇಷ್ಟು ಕಡಿಮೆ ಪ್ಲಾನ್ ನೀಡಿಲ್ಲ.

ಜಿಯೋದ ಅಗ್ಗದ ಯೋಜನೆಯಲ್ಲಿ 10 ರೂಪಾಯಿ ಯೋಜನೆಯೂ ಸೇರಿದೆ. ಇದ್ರಲ್ಲಿ  7.47 ರೂಪಾಯಿ ಟಾಕ್-ಟೈಮ್  ಸಿಗಲಿದೆ. ಇನ್ನು 20  ರೂಪಾಯಿ ಯೋಜನೆಯಲ್ಲಿ 14.95 ರೂಪಾಯಿವರೆಗೆ ಟಾಕ್ ಟೈಮ್  ಸಿಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...