alex Certify ವಿವಾಹೇತರ ಸಂಬಂಧ ಬೆಳೆಸಲು ಪತ್ನಿಗೆ ಒಪ್ಪಿಗೆ ನೀಡಿ ಈಗ ಪಶ್ಚಾತಾಪ ಪಡ್ತಿದ್ದಾನೆ ಪತಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿವಾಹೇತರ ಸಂಬಂಧ ಬೆಳೆಸಲು ಪತ್ನಿಗೆ ಒಪ್ಪಿಗೆ ನೀಡಿ ಈಗ ಪಶ್ಚಾತಾಪ ಪಡ್ತಿದ್ದಾನೆ ಪತಿ…!

ಮದುವೆಯಾದ್ಮೇಲೆ ಸಂಬಂಧವನ್ನು ಉಳಿಸಿಕೊಳ್ಳುವುದು ಸವಾಲಿನ ಕೆಲಸ. ಇಬ್ಬರ ಮಧ್ಯೆ, ಪ್ರೀತಿ, ಗೌರವ, ವಿಶ್ವಾಸ, ನಂಬಿಕೆ ಎಲ್ಲವೂ ಇರಬೇಕು. ಸಂಬಂಧ ಹಾಳಾಗ್ತಿದೆ ಎಂಬುದು ಗೊತ್ತಾದಾಗ ಅದನ್ನು ಉಳಿಸಿಕೊಳ್ಳಲು ಕೆಲವರು ಅನೇಕ ಪ್ರಯತ್ನ ನಡೆಸ್ತಾರೆ. ವ್ಯಕ್ತಿಯೊಬ್ಬ ಸಂಬಂಧ ಉಳಿಸಿಕೊಳ್ಳಲು ಮಾಡಿದ ಕೆಲಸ ಈಗ ಅವನನ್ನೇ ನೋವಿಗೆ ನೂಕಿದೆ.

ರಿಲೇಷನ್ಶಿಪ್ ಪೋರ್ಟಲ್ ನಲ್ಲಿ ವ್ಯಕ್ತಿಯೊಬ್ಬ ತನ್ನ ನೋವನ್ನು ತೋಡಿಕೊಂಡಿದ್ದಾನೆ. ಕೆಲಸದಲ್ಲಿ ಬ್ಯುಸಿಯಿದ್ದ ವ್ಯಕ್ತಿ, ಪತ್ನಿಗೆ ಸಮಯ ನೀಡಲು ಸಾಧ್ಯವಾಗ್ತಿರಲಿಲ್ಲವಂತೆ. ಸದಾ ಕೆಲಸದಲ್ಲಿರುತ್ತಿದ್ದ ವ್ಯಕ್ತಿ, ಪತ್ನಿ ಸದಾ ಖುಷಿಯಾಗಿರಲೆಂದು ಆಕೆಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದನಂತೆ. ದಿನೇ ದಿನೇ ಇಬ್ಬರ ಸಂಬಂಧ ಹಾಳಾಗುತ್ತ ಬಂದಿತ್ತಂತೆ. ಇದ್ರಿಂದ ಕೋಪಗೊಂಡ ವ್ಯಕ್ತಿ ಬೇರೆ ಯಾವುದೇ ವ್ಯಕ್ತಿ ಜೊತೆ ಸಂಬಂಧದಲ್ಲಿರಬಹುದು. ಇದ್ರ ಬಗ್ಗೆ ನನಗೆ ಹೇಳಬೇಕಾಗಿಲ್ಲ ಎಂದಿದ್ದನಂತೆ.

ಆರ್.​​ಎಸ್.​ಎಸ್. ನ್ನು ತಾಲಿಬಾನ್‌ ಗೆ​ ಹೋಲಿಕೆ ಮಾಡಿದ ಜಾವೇದ್‌ ಅಖ್ತರ್‌ ಗೆ ಕೋರ್ಟ್‌ ನೋಟಿಸ್

ಈ ಘಟನೆ ನಡೆದು ಸ್ವಲ್ಪ ದಿನದ ನಂತ್ರ ಪತ್ನಿ ಆತನಿಗೆ ವಿಷ್ಯವೊಂದನ್ನು ಹೇಳಿದ್ದಳಂತೆ. ಕಚೇರಿಯಲ್ಲಿರುವ ವ್ಯಕ್ತಿಯೊಬ್ಬ ಫ್ಲರ್ಟ್ ಮಾಡ್ತಿದ್ದಾನೆ. ತಾನೂ ಆತನ ಜೊತೆ ಫ್ಲರ್ಟ್ ಮಾಡ್ತಿದ್ದೆ. ಇಬ್ಬರ ಮಧ್ಯೆ ಪ್ರೀತಿ ಬೆಳೆದಿದೆ. ಶಾರೀರಿಕ ಸಂಬಂಧ ಬೆಳೆಸಿದ್ದೇವೆಂದು ಆಕೆ ಹೇಳಿದ್ದಳಂತೆ. ಇದನ್ನು ಕೇಳಿ ಸ್ವಲ್ಪ ಕಂಗಾಲಾಗಿದ್ದ ವ್ಯಕ್ತಿ, ತನ್ನನ್ನು ಸುಧಾರಿಸಿಕೊಳ್ಳುವ ಕೆಲಸಕ್ಕೆ ಇಳಿದಿದ್ದನಂತೆ.

ಮನೆಯಲ್ಲಿ ಹೆಚ್ಚಿನ ಸಮಯ ಕಳೆಯಲು ಶುರು ಮಾಡಿದ್ದ ವ್ಯಕ್ತಿ, ಪತ್ನಿಗೆ ಇಷ್ಟವಾದ ತಿಂಡಿಗಳನ್ನು ಮಾಡ್ತಿದ್ದನಂತೆ. ಒಂದು ದಿನ ಸ್ನೇಹಿತೆಯರ ಜೊತೆ ಹೊರಗೆ ಹೋಗ್ತೇನೆಂದು ಪತ್ನಿ ಹೇಳಿದ್ದಳಂತೆ. ಇದನ್ನು ಕೇಳಿ ಖುಷಿಯಾಗಿದ್ದ ಪತಿಗೆ, ಪತ್ನಿ ಕೆಲವೇ ಸಮಯದಲ್ಲಿ ಶಾಕ್ ನೀಡಿದ್ದಳಂತೆ. ಆಫೀಸ್ ಬಾಯ್ ಫ್ರೆಂಡ್ ಜೊತೆ ಹೊರಗೆ ಹೋಗ್ತಿದ್ದೇನೆ. ಪರಸ್ಪರ ಬಿಟ್ಟಿರಲು ಸಾಧ್ಯವಿಲ್ಲ ಎಂದಿದ್ದಳಂತೆ. ಆಕೆಗೆ ಹೋಗ್ಬೇಡ ಎಂದು ಎಷ್ಟೇ ಹೇಳಿದ್ರೂ ಆಕೆ ಉಳಿಯಲಿಲ್ಲವಂತೆ. ಮನೆಗೆ ಬರ್ತಿದ್ದಂತೆ, ಆತನ ಜೊತೆ ಸಂಬಂಧ ಬಿಡುವಂತೆ ಪತಿ ಹೇಳಿದ್ದನಂತೆ. ಯೋಚನೆ ಮಾಡ್ತೇನೆಂದಿದ್ದ ಪತ್ನಿ, ಈಗ್ಲೂ ತಡವಾಗಿ ಮನೆಗೆ ಬರ್ತಾಳೆ. ಮನೆಯಲ್ಲಿ ಊಟ ಮಾಡುವುದಿಲ್ಲ. ಇಬ್ಬರ ಸಂಬಂಧ ಈಗ್ಲೂ ಸರಿಯಿಲ್ಲ. ನಾನು ಖಿನ್ನತೆಗೊಳಗಾಗ್ತಿದ್ದೇನೆಂದು ಆತ ಹೇಳಿದ್ದಾನೆ. ಆತನ ಈ ಪೋಸ್ಟ್ ಗೆ ಸಾಕಷ್ಟು ಕಮೆಂಟ್ಸ್ ಬರ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...