alex Certify ʼಓಮಿಕ್ರಾನ್ ರೂಪಾಂತರಕ್ಕಿದೆ​​ ಡೆಲ್ಟಾಗಿಂತ ಮೂರು ಪಟ್ಟು ಹೆಚ್ಚಿನ ವೇಗದಲ್ಲಿ ಸೋಂಕು ಹರಡುವ ಸಾಮರ್ಥ್ಯʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಓಮಿಕ್ರಾನ್ ರೂಪಾಂತರಕ್ಕಿದೆ​​ ಡೆಲ್ಟಾಗಿಂತ ಮೂರು ಪಟ್ಟು ಹೆಚ್ಚಿನ ವೇಗದಲ್ಲಿ ಸೋಂಕು ಹರಡುವ ಸಾಮರ್ಥ್ಯʼ

ಕೊರೊನಾ ವೈರಸ್​ನ ಹೊಸ ರೂಪಾಂತರಿಯಾದ ಓಮಿಕ್ರಾನ್​​ ಡೆಲ್ಟಾ ರೂಪಾಂತರಿಗಿಂತ ಮೂರು ಪಟ್ಟು ಹೆಚ್ಚಿನ ವೇಗದಲ್ಲಿ ಸೋಂಕನ್ನು ಹರಡುವ ಸಾಮರ್ಥ್ಯ ಹೊಂದಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮುಖ್ಯ ವಿಜ್ಞಾನಿ ಸೌಮ್ಯ ಸ್ವಾಮಿನಾಥನ್​ ಹೇಳಿದ್ದಾರೆ.

ಪ್ರಕರಣಗಳ ಹೆಚ್ಚಳ ಹಾಗೂ ಆಸ್ಪತ್ರೆಗೆ ದಾಖಲಾಗುವ ಸಂಖ್ಯೆಯಲ್ಲಿ ಹೆಚ್ಚಳ ಈ ಎರಡರ ನಡುವೆ ವಿಳಂಬವಿದೆ ಎಂದು ಸ್ವಾಮಿನಾಥನ್​ ಹೇಳಿದರು. ಸೋಂಕು ಹರಡಿದ ಎರಡು ಮೂರು ವಾರಗಳ ಬಳಿಕ ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆಯಲ್ಲಿ ಏರಿಕೆ ಕಂಡಿದ್ದು ಇದರಿಂದಲೇ ನೀವು ರೋಗದ ತೀವ್ರತೆಯನ್ನು ಕಂಡುಹಿಡಿಯಬಹುದಾಗಿದೆ ಎಂದು ಹೇಳಿದ್ರು.

ದಕ್ಷಿಣ ಆಫ್ರಿಕಾದಲ್ಲಿ ಓಮಿಕ್ರಾನ್​ ಕಾಲಿಟ್ಟಾಗಿನಿಂದ ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡುಬಂದಿದೆ. ಅಲ್ಲದೆ ದಕ್ಷಿಣ ಆಫ್ರಿಕಾದಲ್ಲಿ ಹೆಚ್ಚಾಗಿ ಮಕ್ಕಳಿಗೆ ಈ ರೂಪಾಂತರಿಯಿಂದ ಸೋಂಕು ಬರುತ್ತಿದೆ ಎಂದು ಸೌಮ್ಯ ಸ್ವಾಮಿನಾಥನ್​ ಹೇಳಿದರು.

ಮಕ್ಕಳು ಹಾಗೂ ಲಸಿಕೆ ಹಾಕಿಸಿಕೊಳ್ಳದೇ ಇರುವವರೇ ಹೆಚ್ಚಾಗಿ ಸೋಂಕಿಗೆ ಒಳಗಾಗುತ್ತಿದ್ದು ಈ ವಿಚಾರದ ಬಗ್ಗೆ ಹೆಚ್ಚಿನ ಗಮನ ನೀಡಬೇಕಿದೆ ಎಂದು ಹೇಳಿದ್ರು. ಈ ನಡುವೆ ಸಿಂಗಾಪುರದ ಆರೋಗ್ಯ ಸಚಿವಾಲಯವು ಜಾಗತಿಕವಾಗಿ ಆರಂಭಿಕ ಹಂತದಲ್ಲಿ ಮಾಡಲಾದ ವೈದ್ಯಕೀಯ ಅವಲೋಕನವು ಕೋವಿಡ್​ 19 ಓಮಿಕ್ರಾನ್​ ರೂಪಾಂತರವು ಹೆಚ್ಚಾಗಿ ಹರಡುತ್ತದೆ ಹಾಗೂ ಡೆಲ್ಟಾ ಹಾಗೂ ಬೀಟಾ ರೂಪಾಂತರಿಗಳಿಗೆ ಹೋಲಿಕೆ ಮಾಡಿದರೆ ಮರು ಸೋಂಕಿನ ಅಪಾಯವನ್ನು ಹೆಚ್ಚಾಗಿ ಹೊಂದಿದೆ ಎಂದು ಹೇಳಿದೆ.

ಅಂದರೆ ಇದರರ್ಥ ಕೋವಿಡ್​ 19ನಿಂದ ಚೇತರಿಸಿಕೊಂಡವರೂ ಸಹ ಒಮಿಕ್ರಾನ್​ ರೂಪಾಂತರದಿಂದ ಮರುಸೋಂಕಿಗೆ ಒಳಗಾಗುವ ಸಂಭಾವ್ಯತೆ ಹೆಚ್ಚಿನ ಪ್ರಮಾಣದಲ್ಲಿ ಇದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...