alex Certify BIG NEWS: ಆಫ್ಲೈನ್ ಡಿಜಿಟಲ್ ಪಾವತಿಗಳಿಗೆ RBI ಅನುಮತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಆಫ್ಲೈನ್ ಡಿಜಿಟಲ್ ಪಾವತಿಗಳಿಗೆ RBI ಅನುಮತಿ

ಆಫ್ಲೈನ್ ಪಾವತಿಗಳಿಗೆ ಚೌಕಟ್ಟೊಂದನ್ನು ಬಿಡುಗಡೆ ಮಾಡಿರುವ ರಿಸರ್ವ್ ಬ್ಯಾಂಕ್ (ಆರ್‌.ಬಿ.ಐ.), ಗ್ರಾಮೀಣ ಹಾಗೂ ಅರೆ-ನಗರ ಪ್ರದೇಶಗಳಲ್ಲಿ ಡಿಜಿಟಲ್ ಪಾವತಿಗೆ ಪ್ರೇರಣೆ ನೀಡಲು ಮುಂದಾಗಿದೆ.

ಅಂತರ್ಜಾಲ ಅಥವಾ ಟೆಲಿಕಾಂ ಸಂಪರ್ಕದ ಅಗತ್ಯವಿಲ್ಲದೇ, ಪ್ರತಿ ವ್ಯವಹಾರದಲ್ಲೂ 200 ರೂ.ಗಳು ವಹಿವಾಟಿನಂತೆ ಗರಿಷ್ಠ 2,000 ರೂ.ಗಳವರೆಗೂ ಆಫ್ಲೈನ್ ಪಾವತಿ ಮಾಡುವ ಆಫ್ಲೈನ್ ಡಿಜಿಟಲ್ ಪೇಮೆಂಟ್‌‌‌ಗೆ ಈ ಚೌಕಟ್ಟನ್ನು ತರಲಾಗಿದೆ.

ಗ್ರಾಮೀಣ ಜನತೆಗೆ ಮತ್ತೊಂದು ಗುಡ್ ನ್ಯೂಸ್: ಇಂಟರ್ನೆಟ್ ಇಲ್ಲದೆ ಹಣ ವರ್ಗಾವಣೆಗೆ RBI ಒಪ್ಪಿಗೆ; ದಿನಕ್ಕೆ 2 ಸಾವಿರ ರೂ. ಮಿತಿ

ಕಾರ್ಡ್‌ಗಳು, ವಾಲೆಟ್‌ಗಳು ಹಾಗೂ ಮೊಬೈಲ್ ಡಿವೈಸ್‌ಗಳಂಥ ಪೂರ್ವನಿಗದಿ ಆಫ್ಲೈನ್ ಮೋಡ್‌ಗಳ ಮೂಲಕ ಫೇಸ್-ಟೂ-ಫೇಸ್‌ ಆಗಿ ಈ ಪಾವತಿಗಳನ್ನು ಮಾಡಬಹುದಾಗಿದೆ ಎಂದು ಕೇಂದ್ರ ಬ್ಯಾಂಕ್ ತಿಳಿಸಿದೆ.

ಈ ವಹಿವಾಟುಗಳಿಗೆ ಹೆಚ್ಚುವರಿ ಫ್ಯಾಕ್ಟರ್‌ ಖಾತ್ರೀಕರಣದ (ಎಎಫ್‌ಎ) ಅಗತ್ಯವಿರೋದಿಲ್ಲ. ಈ ವಹಿವಾಟುಗಳ ಅಲರ್ಟ್‌ಗಳನ್ನು ಎಸ್‌ಎಂಎಸ್‌ ಮತ್ತು/ಅಥವಾ ಇ-ಮೇಲ್ ಮೂಲಕ ಗ್ರಾಹಕರಿಗೆ ಕಳುಹಿಸಲಾಗುವುದು.

ಸೆಪ್ಟೆಂಬರ್‌ 2020ರಿಂದ ಜೂನ್ 2021ರವರೆಗೆ ದೇಶದ ಅನೇಕ ಭಾಗಗಗಳಲ್ಲಿ ನಡೆಸಲಾದ ಆಫ್ಲೈನ್ ವಹಿವಾಟುಗಳ ಪೈಲಟ್‌‌ ಪ್ರಯೋಗಗಳ ಮೂಲಕ ಸ್ವೀಕರಿಸಲಾದ ಫೀಡ್‌‌ಬ್ಯಾಕ್‌ಗಳನ್ನು ಈ ಚೌಕಟ್ಟು ಪರಿಗಣನೆಗೆ ತೆಗೆದುಕೊಂಡಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...