alex Certify ತನಗೆ ನಾಲ್ಕು ಮಕ್ಕಳಾಗಲು ಕಾಂಗ್ರೆಸ್‌ ಪಕ್ಷವೇ ಕಾರಣ ಎಂದು ದೂರಿದ ಬಿಜೆಪಿ ಸಂಸದ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತನಗೆ ನಾಲ್ಕು ಮಕ್ಕಳಾಗಲು ಕಾಂಗ್ರೆಸ್‌ ಪಕ್ಷವೇ ಕಾರಣ ಎಂದು ದೂರಿದ ಬಿಜೆಪಿ ಸಂಸದ…!

ಶುಕ್ರವಾರ ಬಿಜೆಪಿ ಸಂಸದ ರವಿ ಕಿಶನ್ ಅವರು ಭಾರತದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆಯನ್ನು ನಿಯಂತ್ರಿಸುವ ಉದ್ದೇಶದಿಂದ ಲೋಕಸಭೆಯಲ್ಲಿ ಮಸೂದೆಯನ್ನು ಮಂಡಿಸಿದರು. ನಾಲ್ಕು ಮಕ್ಕಳ ತಂದೆಯಾಗಿರುವ ರವಿ ಕಿಶನ್ ಇಂಥದ್ದೊಂದು ಮಸೂದೆಯನ್ನು ಜಾರಿಗೆ ತರಬಹುದಾ ಎಂದು ಪತ್ರಕರ್ತೆಯೊಬ್ಬರು ಪ್ರಶ್ನಿಸಿದ್ದಕ್ಕೆ ಅವರು ಕೊಟ್ಟ ಉತ್ತರ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್​ ಆಗುತ್ತಿದೆ.

‘ಕಾಂಗ್ರೆಸ್ ಈ ಹಿಂದೆಯೇ ಮಸೂದೆ (ಜನಸಂಖ್ಯೆ ನಿಯಂತ್ರಣ ಮಸೂದೆ) ತಂದಿದ್ದರೆ ನಮಗೆ ಇಷ್ಟು ಮಕ್ಕಳು ಆಗುತ್ತಿರಲಿಲ್ಲ ಎಂದರು ! ತಮಗೆ ಮಕ್ಕಳಾಗುತ್ತಿದ್ದಂತೆಯೇ ತಾನು ಪತ್ನಿಯ ದೇಹದಲ್ಲಿ ಆಗುತ್ತಿರುವ ಬದಲಾವಣೆ ಗಮನಿಸಿದೆ. ಇದರಿಂದ ನನಗೆ ತುಂಬಾ ಬೇಸರವಾಗುತ್ತಿದೆ ಎಂದು ರವಿ ಕಿಶನ್​ ಹೇಳಿದರು.

ಆದರೆ ಕಾಂಗ್ರೆಸ್​ ಅನ್ನು ಇವರು ತಮ್ಮ ಪ್ರತಿಕ್ರಿಯೆಯಲ್ಲಿ ಎಳೆದು ತಂದಿದ್ದರಿಂದ ಕಾಂಗ್ರೆಸ್​ ಅಭಿಮಾನಿಗಳು ರವಿ ಕಿಶನ್​ ಅವರನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಇವರು ನೀಡುತ್ತಿರುವ ಹೇಳಿಕೆಗಳು ಟ್ರೋಲ್​ ಕೂಡ ಆಗುತ್ತಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...