alex Certify ಅಂತ್ಯೋದಯ, ಬಿಪಿಎಲ್ ಪಡಿತರ ಚೀಟಿದಾರರಿಗೆ ಇಲ್ಲಿದೆ ಗುಡ್ ನ್ಯೂಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಂತ್ಯೋದಯ, ಬಿಪಿಎಲ್ ಪಡಿತರ ಚೀಟಿದಾರರಿಗೆ ಇಲ್ಲಿದೆ ಗುಡ್ ನ್ಯೂಸ್

ಧಾರವಾಡ: ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ, ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯಡಿ ಆಹಾರ ಧಾನ್ಯ ವಿತರಿಸಲಾಗುತ್ತಿದೆ. ಜುಲೈ ತಿಂಗಳಲ್ಲಿ ಅಂತ್ಯೋದಯ ಪಡಿತರ ಚೀಟಿದಾರರಿಗೆ 15 ಕೆಜಿ ಅಕ್ಕಿ, 20 ಕೆಜಿ ಜೋಳ, ಬಿಪಿಎಲ್ ಕಾರ್ಡಿನ ಕುಟುಂಬದ ಪ್ರತಿ ಸದಸ್ಯರಿಗೆ ತಲಾ 3 ಕೆಜಿ ಅಕ್ಕಿ ಹಾಗೂ 2 ಕೆಜಿ ಜೋಳ ಉಚಿತವಾಗಿ ವಿತರಿಸಲಾಗುತ್ತದೆ.

ಗ್ರಾಹಕರು ಹಂಚಿಕೆಯಾಗಿರುವ ಪಡಿತರವನ್ನು ನಿಗದಿತ ಸರಿಯಾದ ಪ್ರಮಾಣದಲ್ಲಿ ಪಡೆಯಬೇಕು. ನ್ಯಾಯಬೆಲೆ ಅಂಗಡಿಕಾರರು ಕಡಿಮೆ ಪ್ರಮಾಣದ ಆಹಾರ ಧಾನ್ಯ ನೀಡಿದರೆ ಜಿಲ್ಲಾಧಿಕಾರಿಗಳ ಕಚೇರಿಯ ಆಹಾರ ಶಾಖೆ  ದೂರವಾಣಿ ಸಂಖ್ಯೆ  0836-2444594 ಗೆ ಮಾಹಿತಿ ನೀಡಬಹುದು.

ಅದೇ ರೀತಿ, ಧಾರವಾಡ ಪಡಿತರ ಪ್ರದೇಶ ಆಹಾರ ನಿರೀಕ್ಷಕರು-8088737170, ಧಾರವಾಡ ತಾಲ್ಲೂಕು-ಆಹಾರ ಶಿರಸ್ತೇದಾರರು-9845059245, ಆಹಾರ ನಿರೀಕ್ಷಕರು-8310109795, ಅಳ್ನಾವರ-9448221892, ಹುಬ್ಬಳ್ಳಿ ಪಡಿತರ ಪ್ರದೇಶ-ಸಹಾಯಕ ನಿರ್ದೇಶಕರು-9611123128, ಆಹಾರ ನಿರೀಕ್ಷಕರು-8310490713, ಆಹಾರ ನಿರೀಕ್ಷಕರು-9886320360, ಹುಬ್ಬಳ್ಳಿ ತಾಲ್ಲೂಕು ಆಹಾರ ಶಿರಸ್ತೇದಾರರು-9035074105, ಆಹಾರ ನಿರೀಕ್ಷಕರು-9482532326, ಕಲಘಟಗಿ ತಾಲ್ಲೂಕು ಆಹಾರ ನಿರೀಕ್ಷಕರು-ಮೊ.ಸಂ.-9741304522, ಕುಂದಗೋಳ ತಾಲ್ಲೂಕು ಆಹಾರ ನಿರೀಕ್ಷಕರು-8618525185, ನವಲಗುಂದ ತಾಲ್ಲೂಕು-ಆಹಾರ ನಿರೀಕ್ಷಕರು-9902142458 ಮಾಹಿತಿ ನೀಡಿದರೆ ನಿಯಮಾನುಸಾರ ಕ್ರಮವಹಿಸಲಾಗುವುದು ಎಂದು ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...