alex Certify ಬಿಪಿಎಲ್, ಅಂತ್ಯೋದಯ ಕಾರ್ಡ್ ಹೊಂದಿದವರಿಗೆ ಗುಡ್ ನ್ಯೂಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಪಿಎಲ್, ಅಂತ್ಯೋದಯ ಕಾರ್ಡ್ ಹೊಂದಿದವರಿಗೆ ಗುಡ್ ನ್ಯೂಸ್

ಧಾರವಾಡ: ರಾಷ್ಟೀಯ ಆಹಾರ ಭದ್ರತಾ ಕಾಯ್ದೆ ಅನ್ನಭಾಗ್ಯ ಯೋಜನೆಯಡಿ ಜಿಲ್ಲೆಯಲ್ಲಿ ಪಡಿತರ ಫಲಾನುಭವಿಗಳಿಗೆ ಮಾರ್ಚ್-2023ನೇ ಮಾಹೆಯಲ್ಲಿ ಆಹಾರಧಾನ್ಯ ವಿತರಣೆಯನ್ನು ಮಾಡಲಾಗುತ್ತಿದೆ.

ಎನ್‍ಎಫ್‍ಎಸ್‍ಎ ಅಡಿ ಪ್ರತಿ ಅಂತ್ಯೋದಯ ಪಡಿತರ ಚೀಟಿಗೆ 35 ಕೆಜಿ ಅಕ್ಕಿ ಮತ್ತು ಬಿಪಿಎಲ್ ಪಡಿತರ ಚೀಟಿ ಪ್ರತಿ ಸದಸ್ಯರಿಗೆ 6 ಕೆಜಿಯಂತೆ ಅಕ್ಕಿಯನ್ನು ಉಚಿತವಾಗಿ ವಿತರಣೆ ಮಾಡಲಾಗುತ್ತಿದೆ. ಪಡಿತರ ಚೀಟಿದಾರರು ತಮ್ಮ ಪಡಿತರ ಚೀಟಿಗೆ ಅನುಗುಣವಾಗಿ ಹಂಚಿಕೆಯಾಗಿರುವ ಆಹಾರಧಾನ್ಯದ ಪ್ರಮಾಣವನ್ನು ನ್ಯಾಯಬೆಲೆ ಅಂಗಡಿಗಳಿಂದ ಪಡೆದುಕೊಳ್ಳಬೇಕು.

ವಿತರಣೆಯಾಗುವ ಆಹಾರಧಾನ್ಯ ಕಡಿಮೆ ಪ್ರಮಾಣವನ್ನು ನ್ಯಾಯಬೆಲೆ ಅಂಗಡಿಕಾರರು ನೀಡಿದಲ್ಲಿ ಧಾರವಾಡ ಪಡಿತರ ಪ್ರದೇಶ-ಸಹಾಯಕ ನಿರ್ದೇಶಕರು-ಮೊ.ಸಂ-9880725639, ಆಹಾರ ನಿರೀಕ್ಷಕರ-ಮೊ.ಸಂ-8088737170, ಧಾರವಾಡ ತಾಲ್ಲೂಕು-ಆಹಾರ ಶಿರಸ್ತೇದಾರ-ಮೊ.ಸಂ-9845202400, ಆಹಾರ ನಿರೀಕ್ಷಕರ-ಮೊ.ಸಂ-8310109795 ಹಾಗೂ ಅಳ್ನಾವರ ಆಹಾರ ನಿರೀಕ್ಷಕರ ಮೊ.ಸಂ-9448221892, ಹುಬ್ಬಳ್ಳಿ ಪಡಿತರ ಪ್ರದೇಶ-ಸಹಾಯಕ ನಿರ್ದೇಶಕರು-ಮೊ.ಸಂ-9611123128, ಆಹಾರ ನಿರೀಕ್ಷಕರ-ಮೊ.ಸಂ-8310490713, ಆಹಾರ ನಿರೀಕ್ಷಕರ-ಮೊ.ಸಂ-9886320360, ಹುಬ್ಬಳ್ಳಿ ತಾಲ್ಲೂಕು-ಆಹಾರ ನಿರೀಕ್ಷಕರ-ಮೊ.ಸಂ-9482532326, ಕಲಘಟಗಿ ತಾಲ್ಲೂಕ-ಆಹಾರ ನಿರೀಕ್ಷಕರ-ಮೊ.ಸಂ-9741304522, ಕುಂದಗೋಳ ತಾಲ್ಲೂಕ-ಆಹಾರ ನಿರೀಕ್ಷಕರ-ಮೊ.ಸಂ-8618525185, ನವಲಗುಂದ ತಾಲ್ಲೂಕ-ಆಹಾರ ನಿರೀಕ್ಷಕರ-ಮೊ.ಸಂ-9902142458, ಜಿಲ್ಲಾಧಿಕಾರಿಗಳ ಕಾರ್ಯಾಲಯದ ಆಹಾರ ಶಾಖೆ ದೂ.ಸಂ-0836 2444594 ದೂರವಾಣಿಗಳಿಗೆ ದೂರು ಸಲ್ಲಿಸಿದಲ್ಲಿ ಅಂತವರ ವಿರುದ್ಧ ನಿಯಮಾನುಸಾರ ಕ್ರಮಕೈಗೊಳ್ಳಲಾಗುವುದೆಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...