alex Certify ಸೆರೆಯಾಯ್ತು ಸರ್ಕಾರಿ ಆಸ್ಪತ್ರೆಯಲ್ಲಿನ ಶಾಕಿಂಗ್ ದೃಶ್ಯ: ರೋಗಿಯ ಡ್ರಿಪ್ ಪೈಪ್ ನಿಂದ ಗ್ಲೂಕೋಸ್ ಕುಡಿದ ಇಲಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೆರೆಯಾಯ್ತು ಸರ್ಕಾರಿ ಆಸ್ಪತ್ರೆಯಲ್ಲಿನ ಶಾಕಿಂಗ್ ದೃಶ್ಯ: ರೋಗಿಯ ಡ್ರಿಪ್ ಪೈಪ್ ನಿಂದ ಗ್ಲೂಕೋಸ್ ಕುಡಿದ ಇಲಿ

ಬಸ್ತಾರ್: ಛತ್ತೀಸ್‌ ಗಢದ ಸರ್ಕಾರಿ ಆಸ್ಪತ್ರೆಯಲ್ಲಿ ಇಲಿಯೊಂದು ರೋಗಿಯ ಡ್ರಿಪ್ ಅಗೆದು ಅದರಿಂದ ಗ್ಲೂಕೋಸ್ ಕುಡಿದಿದೆ.

ಛತ್ತೀಸ್‌ ಗಢದ ಬಸ್ತಾರ್ ಜಿಲ್ಲೆಯ ಜಗದಲ್‌ ಪುರ ನಗರದ ವೈದ್ಯಕೀಯ ಕಾಲೇಜ್ ಆಸ್ಪತ್ರೆಯಲ್ಲಿ ನಡೆದ ನಿರ್ಲಕ್ಷ್ಯದ ಆಘಾತಕಾರಿ ವಿಡಿಯೋ ಹೊರಬಿದ್ದಿದೆ. ಬಲಿರಾಮ್ ಕಶ್ಯಪ್ ಸ್ಮಾರಕ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಇಲಿಗಳು ರೋಗಿಗಳ ಡ್ರಿಪ್ ಪೈಪ್‌ಗಳನ್ನು ಅಗಿಯುವುದು ಮತ್ತು ಅವುಗಳಿಂದ ಗ್ಲೂಕೋಸ್ ಕುಡಿಯುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಸರ್ಕಾರಿ ವೈದ್ಯಕೀಯ ಕಾಲೇಜಿನ ಅಧೀಕ್ಷಕರು, ಆಸ್ಪತ್ರೆ ಆವರಣದಲ್ಲಿ ಇಲಿಗಳ ಸಮಸ್ಯೆ ಹೆಚ್ಚಿದೆ ಎಂದು ಒಪ್ಪಿಕೊಂಡಿದ್ದಾರೆ. ವೈದ್ಯಕೀಯ ಸಂಸ್ಥೆಯಲ್ಲಿ ಇಲ್ಲಿಯವರೆಗೆ 1200 ಇಲಿಗಳನ್ನು ಕೊಲ್ಲಲಾಗಿದೆ ಎಂದು ಹೇಳಲಾಗಿದೆ.

ವೈದ್ಯಕೀಯ ಕಾಲೇಜಿನ ಡೀನ್ ಡಾ.ಯು.ಎಸ್. ಪೈಂಕಾರ ಅವರು ಘಟನೆಯ ಸೂಕ್ತ ತನಿಖೆಯ ನಂತರವಷ್ಟೇ ಪ್ರತಿಕ್ರಿಯೆ ನೀಡುವುದಾಗಿ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...