ಬಾಲಿವುಡ್‌ನ ಜೋಡಿ ಹಕ್ಕಿಗಳಾದ ರಕುಲ್ ಪ್ರೀತ್ ಸಿಂಗ್ ಹಾಗೂ ಜಾಕಿ ಭಗ್ನಾನಿ ಅವರು ಆಗ್ರಾದ ತಾಜ್‌ಮಹಲ್‌ಗೆ ಭೇಟಿ ನೀಡಿದ್ದು, ಅಭಿಮಾನಿಗಳು ಪ್ರೀತಿಯಿಂದ ಕಾಲೆಳೆದಿದ್ದಾರೆ.
ಕಳೆದ ವರ್ಷವಷ್ಟೇ ತಾರಾ ಜೋಡಿಯು ತಮ್ಮಿಬ್ಬರ ನಡುವಿನ ಪ್ರೀತಿಯನ್ನು ಘೋಷಿಸಿದ್ದು, ಈಗ ತಾಜ್‌ಮಹಲ್‌ಗೆ ಭೇಟಿ ನೀಡಿರುವ ಫೋಟೊಗಳು ಹಾಗೂ ವಿಡಿಯೊಗಳು ವೈರಲ್ ಆಗಿವೆ.
ಒಬ್ಬ ಅಭಿಮಾನಿಯಂತೂ ಜಾಕಿ ಭಗ್ನಾನಿ ಅಭಿನಯದ ’’ಸುನೋನ ಸಂಗ್ ಮರ್ಮರ್’’ ಹಾಡು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಅಭಿಯಾನಿಯು ರಕುಲ್ ಪ್ರೀತ್ ಸಿಂಗ್ ಅವರು ಆಲಿಯಾ ಭಟ್ ಅವರಂತೆಯೇ ಕಾಣಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ರಕುಲ್ ಪ್ರೀತ್ ಸಿಂಗ್ ಅವರು ತಿಳಿ ಹಸಿರು ಬಣ್ಣದ ಕುರ್ತಾ, ಜೀನ್ಸ್ ಹಾಗೂ ಶೂ ಹಾಕಿ ಮಿಂಚಿದರೆ, ಜಾಕಿ ಭಗ್ನಾನಿ ಅವರು ಬಿಳಿ ಕುರ್ತಾ ಹಾಗೂ ಕಪ್ಪು ಬಣ್ಣದ ಪ್ಯಾಂಟ್ ಧರಿಸಿ ರಕುಲ್ ಜತೆ ಹೆಜ್ಜೆ ಹಾಕಿದರು.
ವಿಕೆಟ್ ಕಿತ್ತ ಸಂಭ್ರಮದಲ್ಲಿದ್ದ ಬೌಲರ್ ಜೊತೆ ಅಂಪೈರ್ ತಮಾಷೆ..! ವೈರಲ್ ಆಯ್ತು ವಿಡಿಯೋ
ಇಬ್ಬರೂ ತಮ್ಮ ಪ್ರೀತಿಯನ್ನು ಘೋಷಣೆ ಮಾಡುವ ಮೊದಲು ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂಬ ಕುರಿತು ವದಂತಿಗಳು ಕೇಳಿಬಂದಿದ್ದವು. ಆದರೆ ಕಳೆದ ವರ್ಷ 31ನೇ ವರ್ಷಕ್ಕೆ ಕಾಲಿಟ್ಟ ಭಗ್ನಾನಿ, ನಾನು ಹಾಗೂ ರಕುಲ್ ಪ್ರೀತಿಸುತ್ತಿದ್ದೇವೆ ಎಂದು ಜನ್ಮದಿನದಂದೇ ಘೋಷಿಸಿದ್ದರು. ಇದನ್ನು ರಕುಲ್ ಪ್ರೀತ್ ಸಿಂಗ್ ಅನುಮೋದಿಸಿದ್ದರು.
ಸಿನಿಮಾ ನಿರ್ದೇಶಕ ಲವ್ ರಂಜನ್ ಅವರ ಮದುವೆ ಹಿನ್ನೆಲೆಯಲ್ಲಿ ಆಗ್ರಾಗೆ ತೆರಳಿದ್ದ ಅವರು, ಮದುವೆ ಸಮಾರಂಭದ ಮಧ್ಯದಲ್ಲಿಯೇ ಪ್ರೇಮಸೌಧವಾದ ತಾಜ್‌ಮಹಲ್‌ಗೆ ಭೇಟಿ ನೀಡಿದ್ದಾರೆ ಎಂದು ತಿಳಿದುಬಂದಿದೆ. ಮೂಲಗಳ ಪ್ರಕಾರ ಇಬ್ಬರೂ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂದು ಹೇಳಲಾಗಿದೆ.
https://youtu.be/__upQhh5WX4