alex Certify ವಿಕೆಟ್​ ಕಿತ್ತ ಸಂಭ್ರಮದಲ್ಲಿದ್ದ ಬೌಲರ್​ ಜೊತೆ ಅಂಪೈರ್​ ತಮಾಷೆ..! ವೈರಲ್​ ಆಯ್ತು ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಕೆಟ್​ ಕಿತ್ತ ಸಂಭ್ರಮದಲ್ಲಿದ್ದ ಬೌಲರ್​ ಜೊತೆ ಅಂಪೈರ್​ ತಮಾಷೆ..! ವೈರಲ್​ ಆಯ್ತು ವಿಡಿಯೋ

ಪಾಕಿಸ್ತಾನ ಸೂಪರ್​ ಲೀಗ್​ ಅಂತಿಮ ಹಂತವನ್ನು ಸಮೀಪಿಸುತ್ತಿದ್ದು ಮೊಹಮ್ಮದ್​ ರಿಜ್ವಾನ್​ ನಾಯಕತ್ವದ ಮುಲ್ತಾನ್​ ಸುಲ್ತಾನ್ಸ್​ ತಂಡವು ಆಡಿದ 9 ಪಂದ್ಯಗಳಲ್ಲಿ 11 ಅಂಕಗಳನ್ನು ಸಂಪಾದಿಸುವ ಮೂಲಕ ಪ್ರಸ್ತುತ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ.

ಶನಿವಾರದಂದು ಇಸ್ಲಾಮಾಬಾದ್​​ ಯುನೈಟೆಡ್​ ತಂಡವನ್ನು ಸೋಲಿಸಿದ ಬಳಿಕ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಲಾಹೋರ್​ ಕಾಂಡರ್ಸ್​ಗಿಂತ ಮುಲ್ತಾನ್​ ಸುಲ್ತಾನ್ಸ್​ ನಾಲ್ಕು ಹೆಚ್ಚುವರಿ ಅಂಕಗಳನ್ನು ಸಂಪಾದಿಸಿದೆ.

ಶುಕ್ರವಾರದು ಕ್ವೆಟ್ಟಾ ಗ್ಲಾಡಿಯೇಟರ್ಸ್​ ತಂಡದ ವಿರುದ್ಧ ಮುಲ್ತಾನ್​ ಸುಲ್ತಾನ್​ ಪಂದ್ಯವಾಡುತ್ತಿದ್ದ ಸಂದರ್ಭದಲ್ಲಿ ಮೋಜಿನ ಘಟನೆಯೊಂದು ಜರುಗಿದ್ದು, ಇದರ ವಿಡಿಯೋ ಇದೀಗ ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​ ಆಗಿದೆ.

​ಇನ್ನಿಂಗ್ಸ್ ನ​ 14ನೇ ಓವರ್​ನಲ್ಲಿ ಮುಲ್ತಾನ್​​ ತಂಡದ ವೇಗಿ ಶಹನವಾಜ್​ ದಗಾನಿ ಗ್ಲಾಡಿಯೇಟರ್ಸ್​ ತಂಡದ ನಸೀಮ್​ ಶಾರ್​ನ್ನು ತಮ್ಮ ನಾಲ್ಕನೇ ಎಸೆತದಲ್ಲಿ ಔಟ್​ ಮಾಡಿದರು.

ವಿಕೆಟ್​ ಉರುಳಿಸಿದ ಸಂಭ್ರಮದಲ್ಲಿದ್ದ ದಹಾನಿ ಹಿಂತಿರುಗಿ ಪ್ರೇಕ್ಷಕರ ಕಡೆಗೆ ಸಂಭ್ರಮಿಸುತ್ತಾ ಓಡಿದರು. ಈ ವೇಳೆಯಲ್ಲಿ ಅಂಪೈರ್​ ಅಲೀಂ ದಾರ್​ ದಹಾನಿಗೆ ಓಡಲು ಕೊಡದೆ ತಮಾಷೆಯಿಂದ ಅಡ್ಡಗಟ್ಟಲು ಯತ್ನಿಸಿದರು. ಆದರೆ ಅದು ಸಾಧ್ಯವಾಗಲಿಲ್ಲ.

ದಹಾನಿಯನ್ನು ತಡೆಯಲು ಅಂಪೈರ್​ ಅಲೀಂ ದಾರ್​ ಯತ್ನಿಸುತ್ತಿರುವ ವಿಡಿಯೋವನ್ನು ಪಿಎಸ್​ಎಲ್​ ಟ್ವಿಟರ್​ ಖಾತೆಯಲ್ಲಿ ಶೇರ್​ ಮಾಡಿದ್ದು ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​ ಆಗಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...