alex Certify BIG NEWS: ತಾಜ್​ಮಹಲ್​​ನ ʼನೋ ಫ್ಲೈಯಿಂಗ್ʼ​ ವಲಯದಲ್ಲಿ ವಿಮಾನ ಹಾರಾಟ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ತಾಜ್​ಮಹಲ್​​ನ ʼನೋ ಫ್ಲೈಯಿಂಗ್ʼ​ ವಲಯದಲ್ಲಿ ವಿಮಾನ ಹಾರಾಟ…!

ತಾಜ್​ಮಹಲ್​ನಲ್ಲಿ ಹೆಚ್ಚಿನ ಭದ್ರತೆಯ ನಡುವೆಯೂ ನೋ ಫ್ಲೈಯಿಂಗ್​ ವಲಯದಲ್ಲಿ ವಿಮಾನವೊಂದು ಹಾರಾಟ ನಡೆಸಿದ ಘಟನೆಯು ಸೋಮವಾರ ಮಧ್ಯಾಹ್ನ ವರದಿಯಾಗಿದೆ. ಈ ಬಗ್ಗೆ ಸಿಐಎಸ್​ಎಫ್​ ಅಧಿಕಾರಿಗಳಿಂದ ವರದಿಯನ್ನು ಕೇಳಿದ್ದೇವೆ ಎಂದು ಎಎಸ್​ಐ ಅಧೀಕ್ಷಕ ಪುರಾತತ್ವ ಶಾಸ್ತ್ರಜ್ಞ ರಾಜ್​ಕುಮಾರ್​ ಪಟೇಲ್​ ಹೇಳಿದ್ದಾರೆ.

ತಾಜ್​ಮಹಲ್​ನ ಒಂದು ಮಿನಾರ್​ನ ಮೇಲೆ ವಿಮಾನ ಹಾದು ಹೋಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಆದರೆ ಈ ಬಗ್ಗೆ ಈ ಬಗ್ಗೆ ಭದ್ರತಾ ಸಿಬ್ಬಂದಿಯು ವರದಿ ಸಲ್ಲಿಸಿದ ಬಳಿಕವಷ್ಟೇ ನಾವು ವಾಸ್ತವ ಸ್ಥಿತಿಯನ್ನು ಅರಿತುಕೊಳ್ಳಬಹುದು ಎಂದು ರಾಜ್​ಕುಮಾರ್ ಪಟೇಲ್​ ಹೇಳಿದ್ದಾರೆ.

ಸೋಮವಾರ ಮಧ್ಯಾಹ್ನ 2:50 ರ ಸುಮಾರಿಗೆ ವಿಮಾನವೊಂದು ಕಾಣಿಸಿಕೊಂಡಿತ್ತು ಎಂದು ಸಿಐಎಸ್​ಎಫ್​ ಸಿಬ್ಬಂದಿ ದೃಢಪಡಿಸಿದ್ದರೂ ಸಹ ಅದು ಸ್ಮಾರಕಕ್ಕೆ ಹತ್ತಿರದಲ್ಲಿ ಇರಲಿಲ್ಲ ಎಂದು ಹೇಳಿದ್ದಾರೆ.

ವಿಮಾನ ತಾಜ್​ಮಹಲ್​ನಿಂದ ಎಷ್ಟು ಎತ್ತರ ಹಾಗೂ ದೂರದಲ್ಲಿತ್ತು ಎಂಬುದನ್ನು ನಿರ್ಣಯಿಸಲು ಸಾಧ್ಯವಿಲ್ಲ ಮತ್ತು ಏರ್​ ಟ್ರಾಫಿಕ್​ ಕಂಟ್ರೋಲ್​​ನ್ನು ವಾಯುಪಡೆಯ ಅಧಿಕಾರಿಗಳು ನಿರ್ವಹಿಸೋದ್ರಿಂದ ಈ ಬಗ್ಗೆ ಅವರಿಂದಲೇ ನಿಖರವಾದ ವರದಿಯನ್ನು ಪಡೆದುಕೊಳ್ಳುತ್ತೇವೆ ಎಂದು ಸಿಐಎಸ್​ಎಫ್​ ಸಿಬ್ಬಂದಿ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...