alex Certify ಪತ್ನಿ ಕೊಂದ ʼಆರೋಪʼ ದಲ್ಲಿ ಜೈಲಿನಲ್ಲಿದ್ದ ಪತಿ; ಆರು ವರ್ಷಗಳಿಂದ ಪರಪುರುಷನ ಜೊತೆಯಲ್ಲಿದ್ದಳು ಆಕೆ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪತ್ನಿ ಕೊಂದ ʼಆರೋಪʼ ದಲ್ಲಿ ಜೈಲಿನಲ್ಲಿದ್ದ ಪತಿ; ಆರು ವರ್ಷಗಳಿಂದ ಪರಪುರುಷನ ಜೊತೆಯಲ್ಲಿದ್ದಳು ಆಕೆ….!

ಮಥುರಾ: ಮೊದಲ ಪತಿ ಜೈಲಿನಲ್ಲಿರುವಾಗಲೇ ರಾಜಸ್ಥಾನದಲ್ಲಿ ಎರಡನೇ ಪತಿಯೊಂದಿಗೆ ವಾಸಿಸುತ್ತಿದ್ದ ಮಹಿಳೆಯೊಬ್ಬರು ಜೀವಂತವಾಗಿ ಪತ್ತೆಯಾಗಿದ್ದಾರೆ. ಜೀವಂತವಾಗಿ ಪತ್ತೆ ಏಕೆಂದರೆ, ಈಕೆಯ ಕೊಲೆ ಕೇಸ್‌ನಲ್ಲಿ ಮೊದಲ ಪತಿ ಜೈಲು ಸೇರಿದ್ದರು!

ಆರತಿ ದೇವಿಯ ಕೊಲೆ ಆಪಾದನೆ ಮೇರೆಗೆ ಈಕೆಯ ಪತಿ ಸೋನು ಸೈನಿ, 18 ತಿಂಗಳುಗಳನ್ನು ಜೈಲಿನಲ್ಲಿ ಕಳೆದಿದ್ದಾರೆ. ಇದೇ ಕೊಲೆ ಕೇಸ್‌ನಲ್ಲಿ ಅವರ ಸ್ನೇಹಿತ ಗೋಪಾಲ್ ಸೈನಿ ಒಂಬತ್ತು ತಿಂಗಳ ಕಾಲ ಜೈಲಿನಲ್ಲಿದ್ದಾರೆ. ಆದರೆ ಇದೇ ಮಹಿಳೆ ಮತ್ತೊಬ್ಬನ ಜತೆ ಪತ್ತೆಯಾಗಿದ್ದಾಳೆ. ಆರು ವರ್ಷದಿಂದ ಆತನ ಜತೆ ಇರುವುದು ತಿಳಿದು ಬಂದಿದೆ!

ಪೊಲೀಸ್ ದಾಖಲೆಗಳ ಪ್ರಕಾರ, ಆರತಿ 2015 ರಲ್ಲಿ ನಾಪತ್ತೆಯಾಗಿದ್ದರು. ತಂದೆ ದೂರು ದಾಖಲಿಸಿದ್ದರು. ಅಪರಿಚಿತ ಮಹಿಳೆಯ ಶವ ದೊರಕಿತ್ತು. ಇದು ಆರತಿಯದ್ದೇ ಎಂದು ಭಾವಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಆಕೆಯ ತಂದೆ ಅಳಿಯನ ವಿರುದ್ಧ ಕೊಲೆ ಕೇಸ್‌ ದಾಖಲಿಸಿದ್ದರು.

ಈ ಹಿನ್ನೆಲೆಯಲ್ಲಿ ಆರತಿ ಪತಿ ಹಾಗೂ ಅವರ ಸ್ನೇಹಿತ ಜೈಲಿನಲ್ಲಿದ್ದರು. ನಂತರ ಅಲಹಾಬಾದ್ ಹೈಕೋರ್ಟ್ ಜಾಮೀನು ನೀಡಿತ್ತು. ಈಗ ಪೊಲೀಸರು ಮಹಿಳೆಯನ್ನು ಪತ್ತೆ ಹಚ್ಚಿದ್ದು, ತನಿಖೆ ನಡೆಸುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...