alex Certify BREAKING: ರಾಜಸ್ಥಾನದಲ್ಲಿ ಒಮಿಕ್ರಾನ್ ದಾಳಿ: 21 ಹೊಸ ಕೇಸ್, ಸೋಂಕು ನಿಯಂತ್ರಣಕ್ಕೆ ಕೇಂದ್ರದಿಂದ ಮಹತ್ವದ ಕ್ರಮ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: ರಾಜಸ್ಥಾನದಲ್ಲಿ ಒಮಿಕ್ರಾನ್ ದಾಳಿ: 21 ಹೊಸ ಕೇಸ್, ಸೋಂಕು ನಿಯಂತ್ರಣಕ್ಕೆ ಕೇಂದ್ರದಿಂದ ಮಹತ್ವದ ಕ್ರಮ

ಜೈಪುರ್: ರಾಜಸ್ಥಾನದಲ್ಲಿ ಇವತ್ತು ಒಂದೇ ದಿನ 21 ಕೊರೋನಾ ವೈರಸ್‌ನ ರೂಪಾಂತರಿ ಒಮಿಕ್ರಾನ್ ಹೊಸ ಪ್ರಕರಣಗಳನ್ನು ವರದಿ ಮಾಡಲಾಗಿದೆ. ಇದರೊಂದಿಗೆ ರಾಜ್ಯದಲ್ಲಿ ಒಮಿಕ್ರಾನ್ ಸೋಂಕಿತರ ಒಟ್ಟು ಸಂಖ್ಯೆ 43 ಕ್ಕೆ ತಲುಪಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವರದಿಯಾದ ಹೊಸ ಪ್ರಕರಣಗಳಲ್ಲಿ ಅಧಿಕಾರಿಗಳ ಪ್ರಕಾರ, 11 ಜೈಪುರದಿಂದ, 6 ಅಜ್ಮೀರ್‌ನಿಂದ ಮತ್ತು 3 ಪ್ರಕರಣ ಉದಯಪುರದಿಂದ ಬಂದಿವೆ. ರೋಗಿಗಳಲ್ಲಿ ಒಬ್ಬರು ಮಹಾರಾಷ್ಟ್ರದವರಾಗಿದ್ದಾರೆ.

ಪುಣೆಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿಯ ಫಲಿತಾಂಶಗಳು ಒಮಿಕ್ರಾನ್‌ ಪಾಸಿಟಿವ್ ವರದಿ ತೋರಿಸಿದೆ. ಈ ಸೋಂಕಿತರಲ್ಲಿ ಐವರು ವಿದೇಶದಿಂದ ಮರಳಿದ್ದರೆ, ಮೂವರು ವಿದೇಶಿ ಪ್ರಯಾಣಿಕರೊಂದಿಗೆ ಸಂಪರ್ಕಕ್ಕೆ ಬಂದಿದ್ದಾರೆ.

ಏತನ್ಮಧ್ಯೆ, ಕೇಂದ್ರ ಆರೋಗ್ಯ ಸಚಿವಾಲಯದ ಕಚೇರಿಯ ಜ್ಞಾಪಕ ಪತ್ರದ ಪ್ರಕಾರ, 10 ರಾಜ್ಯಗಳಲ್ಲಿ ಬಹು ಶಿಸ್ತಿನ ಕೇಂದ್ರ ತಂಡಗಳನ್ನು ನಿಯೋಜಿಸಲಾಗಿದೆ, ಅವುಗಳು ಹೆಚ್ಚುತ್ತಿರುವ ಸಂಖ್ಯೆಯ ಓಮಿಕ್ರಾನ್ ಮತ್ತು COVID-19 ಪ್ರಕರಣಗಳು ಅಥವಾ ನಿಧಾನವಾದ ವ್ಯಾಕ್ಸಿನೇಷನ್ ವೇಗವನ್ನು ವರದಿ ಮಾಡುತ್ತಿವೆ. ದಾಖಲೆಯ ಪ್ರಕಾರ, ಕೇರಳ, ಮಹಾರಾಷ್ಟ್ರ, ತಮಿಳುನಾಡು, ಪಶ್ಚಿಮ ಬಂಗಾಳ, ಮಿಜೋರಾಂ, ಕರ್ನಾಟಕ, ಬಿಹಾರ, ಉತ್ತರ ಪ್ರದೇಶ, ಜಾರ್ಖಂಡ್ ಮತ್ತು ಪಂಜಾಬ್ ಈ 10 ರಾಜ್ಯಗಳಾಗಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...