alex Certify ರಾಷ್ಟ್ರಪತಿಗಳ ಪಾದ ಸ್ಪರ್ಶಿಸಲು ಹೋಗಿ ಕೆಲಸ ಕಳೆದುಕೊಂಡ ಮಹಿಳಾ ಉದ್ಯೋಗಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಷ್ಟ್ರಪತಿಗಳ ಪಾದ ಸ್ಪರ್ಶಿಸಲು ಹೋಗಿ ಕೆಲಸ ಕಳೆದುಕೊಂಡ ಮಹಿಳಾ ಉದ್ಯೋಗಿ

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪಾಲ್ಗೊಂಡಿದ್ದ ಕಾರ್ಯಕ್ರಮದಲ್ಲಿ ಭದ್ರತಾ ನಿಯಮಗಳನ್ನು ಉಲ್ಲಂಘಿಸಿ ಅವರ ಪಾದ ಸ್ಪರ್ಶಿಸಲು ಮುಂದಾಗಿದ್ದ ಉದ್ಯೋಗಿಯೊಬ್ಬರು ಈಗ ಅಮಾನತ್ತಾಗಿದ್ದಾನೆ.

ರಾಜಸ್ಥಾನದಲ್ಲಿ ಜನವರಿ 4ರಂದು ಈ ಘಟನೆ ನಡೆದಿದ್ದು, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರೋಹಟ್ ನಲ್ಲಿ ಹಮ್ಮಿಕೊಳ್ಳಲಾಗಿದ್ದ ಸ್ಕೌಟ್ಸ್, ಗೈಡ್ ಜಾಂಬೋರೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಈ ಸಂದರ್ಭದಲ್ಲಿ ಸರ್ಕಾರಿ ಇಂಜಿನಿಯರ್ ಅಂಬಾ ಸಿಯೋಲ್ ಎಂಬವರು ಭದ್ರತಾ ನಿಯಮಗಳನ್ನು ಉಲ್ಲಂಘಿಸಿ ಮುರ್ಮು ಅವರ ಪಾದಸ್ಪರ್ಶಕ್ಕೆ ಮುಂದಾಗಿದ್ದರು. ಅನುಮತಿ ಇಲ್ಲದಿದ್ದರೂ ರಾಷ್ಟ್ರಪತಿಯವರ ಬಳಿ ಬಂದಿದ್ದು ಭದ್ರತಾ ಲೋಪ ಎಂದು ಪರಿಗಣಿಸಿ ಅವರನ್ನು ಈಗ ಅಮಾನತು ಮಾಡಲಾಗಿದೆ.

— The Summer News (@TheSummerNews2) January 14, 2023

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...