alex Certify ಮಕ್ಕಳನ್ನು ಸರಪಳಿ ಕಟ್ಟಿ ಉಲ್ಟಾ ನೇತು ಹಾಕಿ ಕ್ರೌರ್ಯ ಮೆರೆದ ಪಾಪಿ ಪೋಷಕರು…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಕ್ಕಳನ್ನು ಸರಪಳಿ ಕಟ್ಟಿ ಉಲ್ಟಾ ನೇತು ಹಾಕಿ ಕ್ರೌರ್ಯ ಮೆರೆದ ಪಾಪಿ ಪೋಷಕರು…..!

ರಾಜಸ್ಥಾನ ರಾಜಧಾನಿ ಜೈಪುರದಲ್ಲಿ ಪೋಷಕರೇ ಮಕ್ಕಳ ಮೇಲೆ ದೌರ್ಜನ್ಯ ನಡೆಸಿದ ಅಮಾನುಷ ಘಟನೆಯೊಂದು ವರದಿಯಾಗಿದೆ. ಈ ಪಾಪಿ ದಂಪತಿ ತಮ್ಮ 6 ಹಾಗೂ 10 ವರ್ಷದ ಮಕ್ಕಳನ್ನು ತಲೆ ಕೆಳಗು ಮಾಡಿ ಕಾಲಿಗೆ ಸರಪಳಿ ಬಿಗಿದು ನೇತು ಹಾಕುವ ಮೂಲಕ ಕೌರ್ಯ ಮೆರೆದಿದ್ದಾರೆ.

ಕೊರೊನಾ ಬೂಸ್ಟರ್ ಡೋಸ್ ಪಡೆಯುತ್ತಿದ್ದಾರೆ ವೈದ್ಯರು….!

ಮಕ್ಕಳನ್ನು ಈ ರೀತಿಯಾಗಿ ನೇತು ಹಾಕಿದ್ದು ಮಾತ್ರವಲ್ಲದೇ ಮನೆಗೆ ಬೀಗ ಹಾಕಿ ಕೆಲಸಕ್ಕೆ ತೆರಳಿದ್ದರು ಎನ್ನಲಾಗಿದೆ.

ಪದವೀಧರರಿಗೆ ಗುಡ್ ನ್ಯೂಸ್: 2,000 ಪ್ರೊಬೇಷನರಿ ಆಫೀಸರ್ ಹುದ್ದೆಗಳಿಗೆ SBI ಅರ್ಜಿ

ಮನೆಯಿಂದ ಮಕ್ಕಳು ಕೂಗುತ್ತಿರುವ ಶಬ್ದ ಕೇಳಿ ಬಂದ ಹಿನ್ನೆಲೆಯಲ್ಲಿ ಪೋಷಕರು ಈ ಮನೆಯ ಸಮೀಪ ಬಂದ ವೇಳೆಯಲ್ಲಿ ಪ್ರಕರಣ ಬೆಳಕಿಗೆ ಬಂದಿದೆ. ನೆರೆಹೊರೆಯವರು ತಕ್ಷಣವೇ ಎನ್​ಜಿಓ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೋಷಕರನ್ನೂ ಮನೆಗೆ ಕರೆಸಿದ ಪೊಲೀಸರು ತರಾಟೆಗೆ ತೆಗೆದುಕೊಂಡಿದ್ದಾರೆ. ನೆರೆಹೊರೆಯವರು ಹಾಗೂ ಪೊಲೀಸರ ಬೈಗುಳದಿಂದ ಸಿಟ್ಟಿಗೆದ್ದ ಮಕ್ಕಳ ತಾಯಿ ನೀವು ಕಿಡಿಗೇಡಿತನ ಮಾಡಿದರೆ ನಿಮಗೂ ಇದೇ ರೀತಿ ಮಾಡಲಾಗುತ್ತೆ ಎಂದು ಬೆದರಿಕೆ ಹಾಕಿದ್ದಾಳೆ.

ಅವರು ನನ್ನ ಮಕ್ಕಳು. ನನಗೆ ಬೇಕಾದ್ದನ್ನು ಮಾಡುತ್ತೇನೆ ಎಂದು ಮಕ್ಕಳ ತಾಯಿ ಎಲ್ಲರೆದರು ಆವಾಜ್​ ಹಾಕಿದ್ದಾಳೆ. ಸದ್ಯ ಮಕ್ಕಳನ್ನು ಎನ್​ಜಿಓ ರಕ್ಷಿಸಿದೆ. ಪೋಷಕರನ್ನು ಪೊಲೀಸರು ಕಸ್ಟಡಿಗೆ ಪಡೆದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...