alex Certify ಅಪ್ರಾಪ್ತೆ ಮೇಲೆ 8 ದಿನಗಳ ಕಾಲ 9 ಮಂದಿಯಿಂದ ನಿರಂತರ ಅತ್ಯಾಚಾರ..! ಆರೋಪಿಗಳು ಅಂದರ್​​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಪ್ರಾಪ್ತೆ ಮೇಲೆ 8 ದಿನಗಳ ಕಾಲ 9 ಮಂದಿಯಿಂದ ನಿರಂತರ ಅತ್ಯಾಚಾರ..! ಆರೋಪಿಗಳು ಅಂದರ್​​

15 ವರ್ಷದ ಅಪ್ರಾಪ್ತೆಯನ್ನ 9 ಮಂದಿ ವಿವಿಧ ಸ್ಥಳಗಳಲ್ಲಿ 8 ದಿನಗಳ ನಿರಂತರ ಅತ್ಯಾಚಾರಗೈದ ದಾರುಣ ಘಟನೆ ರಾಜಸ್ಥಾನದ ಜವಹರಲಾಲ್​ ಜಿಲ್ಲೆಯಲ್ಲಿ ನಡೆದಿದೆ.
ಬಾಲಕಿ ಕಾಣೆ ಬಗ್ಗೆ ದೂರನ್ನು ದಾಖಲಿಸಿದ ಬಳಿಕ ಬಾಲಕಿಯನ್ನ ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರಕರಣ ಸಂಬಂಧ ಇಬ್ಬರು ಅಪ್ರಾಪ್ತರು ಸೇರಿದಂತೆ ನಾಲ್ವರನ್ನ ಪೊಲೀಸರು ಬಂಧಿಸಿದ್ದಾರೆ.

ಇನ್ನು ಈ ಸಂಬಂಧ ಡಿಸಿಪಿ ಮಂಜೀತ್​ ಸಿಂಗ್​ ಮಾಹಿತಿ ನೀಡಿದ್ದು, ಅಪ್ರಾಪ್ತೆಗೆ ಬ್ಯಾಗ್​ ಕೊಡಿಸೋದಾಗಿ ಆಮಿಷವೊಡ್ಡಿದ ಬುಲ್​ಬುಲ್​ ಹಾಗೂ ಇನ್ನೊಬ್ಬ ಯುವಕ ಆಕೆಯನ್ನ ಜವಹರಲಾಲ್​ ನಗರಕ್ಕೆ ಕರೆದುಕೊಂಡು ಹೋಗಿದ್ರು ಎಂದು ಹೇಳಿದ್ದಾರೆ.

ಪಾರ್ಕ್​ನಲ್ಲಿ ಇನ್ನೊಂದಿಷ್ಟು ಮಂದಿ ಯುವಕರು ಸೇರಿದ್ದು ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ಜವಹರಲಾಲ್​ನ ವಿವಿಧ ಏರಿಯಾದಲ್ಲಿ ಬಾಲಕಿಯನ್ನ ಕೊಂಡೊಯ್ದು 8 ದಿನಗಳ ಕಾಲ ನಿರಂತರ ಅತ್ಯಾಚಾರ ನಡೆಸಿದ್ದಾರೆ. ಬಾಲಕಿಯನ್ನ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಉಳಿದ ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರಿದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...