alex Certify 2023ರವರೆಗೂ ಈ ರಾಶಿ ಕೈ ಹಿಡಿಯಲಿದ್ದಾನೆ ರಾಹು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

2023ರವರೆಗೂ ಈ ರಾಶಿ ಕೈ ಹಿಡಿಯಲಿದ್ದಾನೆ ರಾಹು

ಒಂಭತ್ತು ಗ್ರಹಗಳಲ್ಲಿ ರಾಹು ಕೂಡ ಒಂದು. ಆದರೆ ಇದು ಇತರ ಗ್ರಹಗಳಂತೆ ಯಾವುದೇ ಭೌತಿಕ ರೂಪವನ್ನು ಹೊಂದಿಲ್ಲ. ಆದರೆ ಧರ್ಮಶಾಸ್ತ್ರಗಳಲ್ಲಿ  ಈ ಗ್ರಹಕ್ಕೆ ವಿಶೇಷ ಪ್ರಾಮುಖ್ಯತೆ ನೀಡಲಾಗಿದೆ. ರಾಹುವನ್ನು ಭ್ರಮೆಯ ಗ್ರಹ ಎಂದು ಹೇಳಲಾಗುತ್ತದೆ. ಇದು ಮಸುಕಾದ ದೃಷ್ಟಿ, ಸುಳ್ಳು ಭರವಸೆಗಳು ಮತ್ತು ಮೂಢನಂಬಿಕೆ ಹೆಚ್ಚು ಮಾಡುತ್ತದೆ. ರಾಹು ಪ್ರಭಾವಶಾಲಿ ಗ್ರಹವಾಗಿದೆ. ರಾಹು, ಶುಭ ಗ್ರಹಗಳ ಪ್ರಭಾವಕ್ಕೆ ಒಳಗಾದಾಗ ಉತ್ತಮ ಮತ್ತು ಅಶುಭ ಗ್ರಹಗಳ ಪ್ರಭಾವಕ್ಕೆ ಒಳಗಾದಾಗ ಕೆಟ್ಟ ಫಲಿತಾಂಶಗಳನ್ನು ನೀಡುತ್ತದೆ. ರಾಹು ಪ್ರಸ್ತುತ ಮೇಷ ರಾಶಿಯಲ್ಲಿ ಸಾಗುತ್ತಿದ್ದು, ಅಕ್ಟೋಬರ್ 30, 2023 ರವರೆಗೆ ಈ ರಾಶಿಯಲ್ಲಿ ಇರುತ್ತಾನೆ. ಅಕ್ಟೋಬರ್ 30, 2023ರವರೆಗೆ ಕೆಲ ಗ್ರಹಗಳಿಗೆ ಮಂಗಳಕರ ಲಾಭ ಸಿಗಲಿದೆ.

ಮೇಷ : ಈ ರಾಶಿಯವರಿಗೆ ರಾಹು ಶುಭ ಫಲ ನೀಡಲಿದ್ದಾನೆ. ಈ ಸಮಯದಲ್ಲಿ ಮೇಷ ರಾಶಿಯವರಿಗೆ ಹೆಚ್ಚು ಲಾಭ ಸಿಗಲಿದೆ. ಆದಾಯದಲ್ಲಿ ಹೆಚ್ಚಳವಾಗಲಿದೆ. ವ್ಯಾಪಾರಿಗಳು ಹೆಚ್ಚಿನ ಲಾಭ ಪಡೆಯಲಿದ್ದಾರೆ. ಷೇರು ಮಾರುಕಟ್ಟೆಯಲ್ಲಿ ಯಶಸ್ಸು ಸಿಗಲಿದೆ. ಪ್ರಯಾಣ ಉತ್ತಮವಾಗಿರಲಿದೆ. ಉತ್ತಮ ಲಾಭ ಕೂಡ ಸಿಗಲಿದೆ.

ಕರ್ಕ : ಕರ್ಕ ರಾಶಿಯವರಿಗೂ ರಾಹು ಉತ್ತಮ ಫಲ ನೀಡಲಿದ್ದಾನೆ. ಉತ್ತಮ ಉದ್ಯೋಗ ಸಿಗಲಿದೆ. ಸಂಬಳದಲ್ಲಿ ಗಣನೀಯ ಏರಿಕೆಯಾಗಲಿದೆ. ಹೊಸ ಕೆಲಸ ಅಥವಾ ವ್ಯಾಪಾರ ಶುರು ಮಾಡುವವರಿಗೆ ಇದು ಒಳ್ಳೆಯ ಸಮಯ. 2023ರ ಅಕ್ಟೋಬರ್ ವರೆಗೆ ಈ ರಾಶಿಯವರಿಗೆ ರಾಹುವಿನ ವಿಶೇಷ ಆಶೀರ್ವಾದ ಇರಲಿದೆ.

ಮೀನ : ಮೀನ ರಾಶಿಯವರಿಗೂ ರಾಹು ಒಳ್ಳೆ ಫಲ ನೀಡಲಿದ್ದಾನೆ. ವೃತ್ತಿ ಜೀವನದಲ್ಲಿ ಯಶಸ್ಸು ಸಿಗಲಿದೆ. ವಿತ್ತೀಯ ಲಾಭ ನಿಮ್ಮದಾಗಲಿದೆ. ಹೂಡಿಕೆಯಲ್ಲೂ ಲಾಭ ಸಿಗಲಿದೆ. ಕಟುಂಬದ ಸಹಕಾರವಿರಲಿದೆ. ವ್ಯಾಪಾರದಲ್ಲಿ ಪ್ರಗತಿಯಾಗಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...