alex Certify BIG NEWS: ಡ್ರಗ್​ ಸೇವನೆ ಸಾಬೀತು ಪ್ರಕರಣ ಸಂಬಂಧ ಕೊನೆಗೂ ಮೌನ ಮುರಿದ ನಟಿ ರಾಗಿಣಿ ದ್ವಿವೇದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಡ್ರಗ್​ ಸೇವನೆ ಸಾಬೀತು ಪ್ರಕರಣ ಸಂಬಂಧ ಕೊನೆಗೂ ಮೌನ ಮುರಿದ ನಟಿ ರಾಗಿಣಿ ದ್ವಿವೇದಿ

ಮಾದಕ ದ್ರವ್ಯ ಸೇವನೆ ಹಾಗೂ ಮಾರಾಟ ಪ್ರಕರಣದಲ್ಲಿ ನಟಿ ಸಂಜನಾ ಗಲ್ರಾನಿ ಹಾಗೂ ರಾಗಿಣಿ ದ್ವಿವೇದಿ ಸೇರಿದಂತೆ 12 ಮಂದಿಗೆ ಮತ್ತೆ ಸಂಕಷ್ಟ ಎದುರಾಗಿದೆ. ಜಾಮೀನಿನ ಮೇಲೆ ಹೊರಬಂದಿದ್ದ ನಟಿಯರು ಮಾದಕ ದ್ರವ್ಯ ಸೇವನೆ ಮಾಡಿರೋದು ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ಬಯಲಾಗಿದೆ.
ಇನ್ನು ಡ್ರಗ್​ ಸೇವನೆ ಖಚಿತವಾಗುತ್ತಿದ್ದಂತೆಯೇ ನಟಿ ಸಂಜನಾ ಗಲ್ರಾನಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮಗಳು ಡಿಪ್ರೆಷನ್​ಗೆ ಹೋಗಿದ್ದಾಳೆ ಎಂದು ಸಂಜನಾ ತಾಯಿ ರೇಷ್ಮಾ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಈ ನಡುವೆ ಡ್ರಗ್​ ಸೇವನೆ ವಿಚಾರ ಸಾಬೀತಾದ ಬಳಿಕ ಮೌನಕ್ಕೆ ಜಾರಿದ್ದ ನಟಿ ರಾಗಿಣಿ ದ್ವಿವೇದಿ ಕೂಡ ಮೌನ ಮುರಿದಿದ್ದಾರೆ.

ಇನ್​ಸ್ಟಾಗ್ರಾಂನಲ್ಲಿ ನಟಿ ರಾಗಿಣಿ ದ್ವಿವೇದಿ ಸ್ಟೇಟಸ್​ನ್ನು ಪೋಸ್ಟ್​ ಮಾಡಿದ್ದಾರೆ. ಇದರಲ್ಲಿ ಅವರು ದೇವರ ಪ್ಲಾನ್​ ಬಗ್ಗೆ ಭರವಸೆ ಎಷ್ಟಿರಬೇಕು ಅಂದರೆ ನೀವೆಂದುಕೊಂಡಿದ್ದು ನಡೆಯದೇ ಹೋದರೂ ಸಹ ಆತ್ಮವಿಶ್ವಾಸ ಕಳೆದುಕೊಳ್ಳಬಾರದು ಎಂದು ಬರೆಯಲಾಗಿದೆ.

ಸಾಮಾನ್ಯವಾಗಿ ಡ್ರಗ್​ ಸೇವನೆ ಪ್ರಕರಣಗಳಲ್ಲಿ ಆರೋಪಿಯ ರಕ್ತ ಹಾಗೂ ಮೂತ್ರದ ಸ್ಯಾಂಪಲ್​ಗಳನ್ನು ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಆದರೆ ತಿಂಗಳ ಬಳಿಕ ಆರೋಪಿಗಳನ್ನು ಬಂಧನ ಮಾಡಿದಲ್ಲಿ ರಕ್ತ ಹಾಗೂ ಮೂತ್ರದಲ್ಲಿ ಡ್ರಗ್​ ಅಂಶ ಪತ್ತೆ ಮಾಡುವುದು ಕಷ್ಟಕರ. ಹೀಗಾಗಿ ಈ ಆರೋಪಿಗಳ ತಲೆಗೂದಲುಗಳನ್ನು ಪರೀಕ್ಷೆಗೆ ರವಾನೆ ಮಾಡಲಾಗಿತ್ತು. ಡ್ರಗ್​ ಸೇವನೆ ಮಾಡಿ ವರ್ಷ ಕಳೆದರೂ ಸಹ ಕೂದಲಿನಲ್ಲಿ ಅದರ ಅಂಶ ಇರುತ್ತದೆ. ಹೀಗಾಗಿಯೇ ಕರ್ನಾಟಕದಲ್ಲಿ ಡ್ರಗ್​ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊಟ್ಟ ಮೊದಲ ಬಾರಿಗೆ ಆರೋಪಿಗಳ ಕೂದಲನ್ನು ಸಿಎಫ್​ಎಸ್​ಎಲ್​ ಪರೀಕ್ಷೆಗೆ ಕಳುಹಿಸಲಾಗಿತ್ತು.

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...