alex Certify ನೋಡುಗರನ್ನು ಬೆಚ್ಚಿಬೀಳಿಸುವಂತಿದೆ ಹೆಬ್ಬಾವಿನ ಈ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೋಡುಗರನ್ನು ಬೆಚ್ಚಿಬೀಳಿಸುವಂತಿದೆ ಹೆಬ್ಬಾವಿನ ಈ ವಿಡಿಯೋ

ಬೃಹತ್ ಹೆಬ್ಬಾವೊಂದು ಕರುವಿನ ಮೇಲೆ ದಾಳಿ ಮಾಡಿರುವ ಆಘಾತಕಾರಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಕರು ಹೆಬ್ಬಾವಿನಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ರೂ ಹೇಗೆ ಗಟ್ಟಿಯಾಗಿ ಹಿಡಿದುಕೊಂಡು, ನುಂಗಲು ಯತ್ನಿಸುತ್ತಿದೆ ಎಂಬುದನ್ನು ವಿಡಿಯೋದಲ್ಲಿ ನೋಡಬಹುದು.

ಸುಮಾರು 10 ಅಡಿ ಉದ್ದದ ಹೆಬ್ಬಾವು ಹಸುಗಳ ಆವರಣವನ್ನು ಪ್ರವೇಶಿಸಿದೆ. ಇದನ್ನು ಕಂಡ ಅಲ್ಲಿದ್ದ ಕರುಗಳ ಹಿಂಡು ಭಯದಿಂದ ಓಡಿಹೋಗಲು ಪ್ರಾರಂಭಿಸಿವೆ. ಆದರೆ, ಕರುವೊಂದು ಹೆಬ್ಬಾವಿನ ಬಾಯಿಗೆ ಸಿಲುಕಿದ್ದು, ಅದರ ಕಾಲುಗಳನ್ನು ಹಾವು ಕಚ್ಚಿ ಹಿಡಿದಿದೆ. ಆದರೂ ಕೂಡ ಪ್ರಯತ್ನ ಬಿಡದ ಕರು ತಪ್ಪಿಸಿಕೊಳ್ಳಲು ಪರದಾಡುತ್ತದೆ.

ಆದರೆ ಹೆಬ್ಬಾವು ಗಟ್ಟಿಯಾಗಿ ಅದನ್ನು ಹಿಡಿದಿಟ್ಟುಕೊಂಡಿದೆ. ಹೆಬ್ಬಾವಿನ ಹಿಡಿತ ಎಷ್ಟು ಬಲವಾಗಿದೆ ಎಂದರೆ ಕರುವನ್ನು ಬಿಡಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದರೆ, ಮುಂದೆ ಏನಾಯಿತು ಎಂಬ ಬಗ್ಗೆ ತಿಳಿದಿಲ್ಲ. ಕರು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆಯೇ ಅಥವಾ ಹೆಬ್ಬಾವಿಗೆ ಆಹಾರವಾಗಿದೆಯೇ ಎಂಬುದು ಗೊತ್ತಾಗಿಲ್ಲ.

ಈ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ವೈಲ್ಡ್‌ಲೈಫ್‌ ಅನಿಮಲ್ ಎಂಬ ಹೆಸರಿನ ಖಾತೆಯಿಂದ ಅಪ್‌ಲೋಡ್ ಮಾಡಲಾಗಿದೆ. ಈ ವಿಡಿಯೋ ವೈರಲ್ ಆಗಿದ್ದು, ಕರುವಿಗೆ ಸಹಾಯ ಮಾಡದೆ ದೃಶ್ಯ ಚಿತ್ರೀಕರಿಸಿದವರ ವಿರುದ್ಧ ನೆಟ್ಟಿಗರು ಗರಂ ಆಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...