alex Certify ಮನೆಗೆ ತಂದ ಶ್ವಾನಕ್ಕೆ ಆರತಿ ಬೆಳಗಿ ಅದ್ದೂರಿ ಸ್ವಾಗತ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆಗೆ ತಂದ ಶ್ವಾನಕ್ಕೆ ಆರತಿ ಬೆಳಗಿ ಅದ್ದೂರಿ ಸ್ವಾಗತ…!

ಮದುವೆಯಾಗಿ ಗಂಡನ ಮನೆಗೆ ಬಂದ ಹೆಣ್ಮಕ್ಕಗಳಿಗೆ ಆರತಿಯೆತ್ತಿ ಸ್ವಾಗತಿಸುತ್ತಾರೆ. ಅಲ್ಲದೆ ಆಸ್ಪತ್ರೆಯಲ್ಲಿ ಹೆರಿಗೆಯಾದ ಬಳಿಕ ಮನೆಗೆ ಬಂದ ಮಗುವಿಗೆ ಕೂಡ ಆರತಿ ಎತ್ತಿ ಸ್ವಾಗತಿಸುವುದು ನಮ್ಮ ಭಾರತೀಯರ ಸಂಪ್ರದಾಯ. ಹಾಗೆಯೇ ಇಲ್ಲೊಂದೆಡೆ ನಾಯಿಮರಿಗೆ ತನ್ನ ಹೊಸ ಮನೆಯಲ್ಲಿ ಸಿಕ್ಕ ದೇಸಿ ಸ್ವಾಗತದ ವಿಡಿಯೋ ನೋಡಿ ನೆಟ್ಟಿಗರ ಹೃದಯ ಕರಗಿದೆ.

ರಿಯೋ ನಿಮೇಶ್ ಎಂಬ ಖಾತೆಯಿಂದ ಈ ಕ್ಲಿಪ್ ಅನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಲಾಗಿದೆ. ಅದರಲ್ಲಿ, ಹುಡುಗಿಯೊಬ್ಬಳು ತನ್ನ ತೋಳುಗಳಲ್ಲಿ ಮುದ್ದಾದ ಗೋಲ್ಡನ್ ರಿಟ್ರೈವರ್ ನಾಯಿಯನ್ನು ಹಿಡಿದಿದ್ದಾಳೆ. ಅವಳು ನಾಯಿಮರಿಯನ್ನು ಹಿಡಿದುಕೊಂಡು ನಿಂತರೆ ಅವಳ ತಂದೆ, ನಾಯಿಗೆ ಆರತಿ ಬೆಳಗಿದ್ದಾರೆ. ನಂತರ ಆಕೆ ನಾಯಿಮರಿಯನ್ನು ಮನೆಯೊಳಗೆ ಹೆಜ್ಜೆಯಿರಸಲು ಹೊಸಿಲಿನ ಬಳಿ ಇಟ್ಟಿದ್ದಾಳೆ. ಪುಟ್ಟ ನಾಯಿಮರಿ ಹೊಸಿಲು ದಾಟಿ ಮನೆಯೊಳಗೆ ಹೋಗಿದೆ.

ಇಲ್ಲಿದೆ ಡಿಸೆಂಬರ್‌ ತಿಂಗಳ ಬ್ಯಾಂಕ್‌ ರಜಾದಿನಗಳ ಪಟ್ಟಿ

ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ ನಂತರ ಈ ವಿಡಿಯೋ 1.1 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ. ನೆಟ್ಟಿಗರಂತೂ ಈ ವಿಡಿಯೋ ನೋಡಿ ಬಹಳ ಸಂತಸ ಪಟ್ಟಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...