alex Certify ಇಲ್ಲಿದೆ ಡಿಸೆಂಬರ್‌ ತಿಂಗಳ ಬ್ಯಾಂಕ್‌ ರಜಾದಿನಗಳ ಪಟ್ಟಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿದೆ ಡಿಸೆಂಬರ್‌ ತಿಂಗಳ ಬ್ಯಾಂಕ್‌ ರಜಾದಿನಗಳ ಪಟ್ಟಿ

ಕ್ಯಾಲೆಂಡರ್‌ ವರ್ಷದ ಕೊನೆಯ ತಿಂಗಳಿಗೆ ಬ್ಯಾಂಕುಗಳ ರಜೆಗಳ ಪಟ್ಟಿಯನ್ನು ರಿಸರ್ವ್ ಬ್ಯಾಂಕ್ ಬಿಡುಗಡೆ ಮಾಡಿದೆ. ದೇಶದ ಸಾರ್ವಜನಿಕ ಹಾಗೂ ಖಾಸಗಿ ಕ್ಷೇತ್ರದ ಎಲ್ಲಾ ಬ್ಯಾಂಕುಗಳು ಡಿಸೆಂಬರ್‌ನಲ್ಲಿ 12 ದಿನಗಳ ಕಾಲ ಕೆಲಸ ಮಾಡುತ್ತಿಲ್ಲ. ವಾರಾಂತ್ಯಗಳು ಸೇರಿದಂತೆ ಈ ಲೆಕ್ಕಾಚಾರ.

ಕ್ರಿಸ್ಮಸ್ ಸೇರಿದಂತೆ ಏಳು ರಜೆಗಳು ಈ ತಿಂಗಳಿನಲ್ಲಿ ಬ್ಯಾಂಕುಗಳಿಗೆ ಇವೆ. ರಾಜ್ಯ ನಿರ್ದಿಷ್ಟ, ಧಾರ್ಮಿಕ ಹಾಗೂ ಹಬ್ಬಗಳೆಂಬ ಮೂರು ವರ್ಗಗಳಾಗಿ ರಜೆಗಳನ್ನು ನಿಗದಿಪಡಿಸಲಾಗಿದೆ.

ಆದರೆ ಈ ರಜೆಗಳು ಆಯಾ ರಾಜ್ಯಗಳ ಪರಿಸ್ಥಿತಿಗಳನ್ನು ಆಧರಿಸಿ ಇರುವುದರಿಂದ ನೀವು ಅಷ್ಟಾಗಿ ಚಿಂತಿಸಬೇಕಿಲ್ಲ.

ಡಿಸೆಂಬರ್‌ ತಿಂಗಳ ರಜೆಗಳ ಸಂಪೂರ್ಣ ಪಟ್ಟಿ ಇಂತಿದೆ:

ಡಿಸೆಂಬರ್‌ 3: ಫೀಸ್ಟ್ ಆಫ್ ಸೇಂಟ್ ಫ್ರಾನ್ಸಿಸ್‌ ಕ್ಸೇವಿಯರ್‌ – ಗೋವಾ

ಡಿಸೆಂಬರ್‌ 18: ಯೂ ಸೋಸೋ ಥಾಮ್‌ನ ಪುಣ್ಯತಿಥಿ – ಶಿಲ್ಲಾಂಗ್

ಡಿಸೆಂಬರ್‌ 24: ಕ್ರಿಸ್ಮಸ್‌ ಹಿಂದಿನ ದಿನ – ಐಜ಼ಾಲ್, ಶಿಲ್ಲಾಂಗ್

ಡಿಸೆಂಬರ್‌ 25: ಕ್ರಿಸ್ಮಸ್‌

ಡಿಸೆಂಬರ್‌ 27: ಕ್ರಿಸ್ಮಸ್ – ಐಜ಼ಾಲ್

ಡಿಸೆಂಬರ್‌ 30: ಯೂ ಕಿಯಾಂಗ್ ನಂಗ್‌ಬಾಗ್ – ಶಿಲ್ಲಾಂಗ್

ಡಿಸೆಂಬರ್‌ 31: ಹೊಸ ವರ್ಷದ ಹಿಂದಿನ ದಿನ – ಐಜ಼ಾಲ್

ಇನ್ನುಳಿದಂತೆ ಭಾನುವಾರಗಳು ಹಾಗೂ ಎರಡನೇ ಶನಿವಾರದಂದು ಬ್ಯಾಂಕುಗಳು ರಜೆ ಇರಲಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...