alex Certify ಬಿಜೆಪಿ ಸೇರಿದ ವಾರದಲ್ಲೇ ಕಾಂಗ್ರೆಸ್ ಗೆ ಮರಳಿದ ಶಾಸಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಜೆಪಿ ಸೇರಿದ ವಾರದಲ್ಲೇ ಕಾಂಗ್ರೆಸ್ ಗೆ ಮರಳಿದ ಶಾಸಕ

ಚಂಡಿಗಢ: ಪಂಜಾಬ್ ನಲ್ಲಿ ಪಕ್ಷಾಂತರ ಪರ್ವ ಮುಂದುವರೆದಿದೆ. ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವಂತೆಯೇ ಇಂತಹ ಬೆಳವಣಿಗೆಗಳು ಕಂಡುಬಂದಿವೆ. ಹರಗೋವಿಂದಪುರ್ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಲವೀರ್ ಸಿಂಗ್ ಬಡ್ಡಿ ಅವರು ಬಿಜೆಪಿ ಸೇರಿದ 6 ದಿನದಲ್ಲಿ ಮಾತೃ ಪಕ್ಷಕ್ಕೆ ಮರಳಿದ್ದಾರೆ.

ಮುಖ್ಯಮಂತ್ರಿ ಚರನ್ ಜಿತ್ ಸಿಂಗ್ ಚನ್ನಿ ಹಾಗೂ ಎಐಸಿಸಿ ಉಸ್ತುವಾರಿ ಹರೀಶ್ ಚೌಧರಿ ಸಮ್ಮುಖದಲ್ಲಿ ಬಲವೀಂದರ್ ಸಿಂಗ್ ಕಾಂಗ್ರೆಸ್ ಪಕ್ಷಕ್ಕೆ ಮರಳಿದ್ದಾರೆ. ಬಲವೀಂದರ್ ಸಿಂಗ್ ಆರು ದಿನಗಳ ಹಿಂದೆಯಷ್ಟೇ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಅವರು ಮರಳಿ ಕಾಂಗ್ರೆಸ್ ಗೆ ಮರಳಿದ್ದಾರೆ. ಕಾಂಗ್ರೆಸ್ ನ ಮತ್ತೊಬ್ಬ ಶಾಸಕ ಫತೇ ಜಂಗ್ ಸಿಂಗ್ ಬಾಜ್ವಾ ಬಿಜೆಪಿ ಸೇರಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...