alex Certify ಪಕ್ಷ ಸೇರಿದ ಬೆನ್ನಲ್ಲೇ ಸೋನು ಸೂದ್ ಸೋದರಿಗೆ ಟಿಕೆಟ್, ಕಾಂಗ್ರೆಸ್ ಗೆ ಶಾಸಕ ಕಮಲ್ ಗುಡ್ ಬೈ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಕ್ಷ ಸೇರಿದ ಬೆನ್ನಲ್ಲೇ ಸೋನು ಸೂದ್ ಸೋದರಿಗೆ ಟಿಕೆಟ್, ಕಾಂಗ್ರೆಸ್ ಗೆ ಶಾಸಕ ಕಮಲ್ ಗುಡ್ ಬೈ

ಚಂಡಿಗಢ: ಖ್ಯಾತ ನಟ ಸೋನು ಸೂದ್ ಸಹೋದರಿ ಕಾಂಗ್ರೆಸ್ ಸೇರ್ಪಡೆಯಾದ ಬೆನ್ನಲ್ಲೇ ಅವರಿಗೆ ಪಕ್ಷದ ಟಿಕೆಟ್ ನೀಡಲಾಗಿದೆ.

ಪಂಜಾಬ್ ರಾಜ್ಯದ ಮೊಗಾ ಕ್ಷೇತ್ರದಿಂದ ಅವರು ಕಾಂಗ್ರೆಸ್ ಪಕ್ಷದ ಟಿಕೆಟ್ ಪಡೆದಿದ್ದಾರೆ. ಮೊಗಾ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಅವರ ಕೈತಪ್ಪಿದ್ದರಿಂದ ಕಾಂಗ್ರೆಸ್ ಶಾಸಕ ಹರಜೋತ್ ಕಮಲ್ ಬಿಜೆಪಿ ಸೇರ್ಪಡೆಯಾಗಿ ಸ್ಪರ್ಧಿಸಲು ಮುಂದಾಗಿದ್ದಾರೆ.

ಮೊಗಾ ಕ್ಷೇತ್ರದಿಂದ ಸೋನು ಸಹೋದರಿ ಮಾಳವಿಕಾಗೆ ಟಿಕೆಟ್ ನೀಡಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಕಮಲ್ ಗುಡ್ ಬೈ ಹೇಳಿದ್ದಾರೆ. ಕಾಂಗ್ರೆಸ್ ಶಾಸಕ ಹರ್ಜೋತ್ ಕಮಲ್, ಮಾಳವಿಕಾ ಸೂದ್‌ಗೆ ತಮ್ಮ ಸ್ಥಾನವನ್ನು ನೀಡಿದ್ದರಿಂದ ಅಸಮಾಧಾನಗೊಂಡಿದ್ದಾರೆ ಎಂದು ಹೇಳಲಾಗಿದ್ದು, ಶೀಘ್ರದಲ್ಲೇ ಬಿಜೆಪಿ ಸೇರುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಕಮಲ್ ಚಂಡೀಗಢದ ಬಿಜೆಪಿ ಕಚೇರಿಗೆ ಆಗಮಿಸಿ ಪಕ್ಷದ ನಾಯಕರೊಂದಿಗೆ ಚರ್ಚಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...