alex Certify `ಪಾನಿ ಪುರಿ’ ವಿಷ್ಯಕ್ಕೆ ಪತಿ-ಪತ್ನಿ ಮಧ್ಯೆ ನಡೀತು ಜಗಳ, ಕೊನೆಯಲ್ಲಿ ಪತ್ನಿ ಮಾಡಿದ್ದೇನು….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

`ಪಾನಿ ಪುರಿ’ ವಿಷ್ಯಕ್ಕೆ ಪತಿ-ಪತ್ನಿ ಮಧ್ಯೆ ನಡೀತು ಜಗಳ, ಕೊನೆಯಲ್ಲಿ ಪತ್ನಿ ಮಾಡಿದ್ದೇನು….?

ಮಹಾರಾಷ್ಟ್ರದ ಪುಣೆ ಜಿಲ್ಲೆಯಲ್ಲಿ ಪಾನಿ ಪುರಿ, ಮಹಿಳೆಯೊಬ್ಬಳ ಸಾವಿಗೆ ಕಾರಣವಾಗಿದೆ. 23 ವರ್ಷದ ಮಹಿಳೆ, ಗಂಡನ ಜೊತೆ ಜಗಳವಾಡಿ, ಆತ್ಮಹತ್ಯೆಗೆ ಶರಣಾಗಿದ್ದಾಳೆ. ಬುಧವಾರ ಪತಿ, ಪತ್ನಿಗೆ ತಿಳಿಸದೆ ಪಾನಿ ಪುರಿಯನ್ನು ಮನೆಗೆ ತಂದಿದ್ದಾನೆ. ಈಗಾಗಲೇ ಅಡುಗೆ ಮಾಡಿದ್ದ ಪತ್ನಿ, ಪಾನಿಪುರಿ ತಂದಿದ್ದಕ್ಕೆ ಕೋಪಗೊಂಡಿದ್ದಾಳೆ.

ಪ್ರತಿಕ್ಷಾ ಸರ್ವಾಡೆ 2019 ರಲ್ಲಿ ಗಹಿನಿನಾಥ್ ಸರ್ವಾಡೆ ಅವರನ್ನು ವಿವಾಹವಾಗಿದ್ದಳು. ಇಬ್ಬರ ಮಧ್ಯೆ ಆಗಾಗ ಜಗಳ ನಡೆಯುತ್ತಿತ್ತು. ಪಾನಿಪುರಿ ತಂದ ಮರುದಿನ, ಪ್ರತಿಕ್ಷಾ, ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ತಕ್ಷಣ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಮಹಿಳೆ ಸಾವನ್ನಪ್ಪಿದ್ದಾಳೆ.

ಆಕೆಗೆ 18 ತಿಂಗಳ ಮಗು ಇತ್ತಂತೆ. ಮಹಿಳೆ ಆತ್ಮಹತ್ಯೆಗೆ ಆಕೆ ಪತಿ ಕಾರಣವೆಂದು ತಂದೆ ಆರೋಪ ಮಾಡಿದ್ದರಂತೆ. ದೂರು ದಾಖಲಿಸಿಕೊಂಡು ವಿಚಾರಣೆ ನಡೆಸಿದ ಪೊಲೀಸರು ಪಾನಿ ಪುರಿ ಆತ್ಮಹತ್ಯೆಗೆ ಕಾರಣ ಎಂದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...