alex Certify ಕೃಷಿಕರಿಗೆ ಮುಖ್ಯ ಮಾಹಿತಿ: ಸಂಜೆ 6 ರಿಂದ ರಾತ್ರಿ 10 ರ ವರೆಗೆ ನೀರಾವರಿ ಪಂಪ್ ಸೆಟ್ ಬಳಸದಿರಲು ಹೆಸ್ಕಾಂ ಸೂಚನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೃಷಿಕರಿಗೆ ಮುಖ್ಯ ಮಾಹಿತಿ: ಸಂಜೆ 6 ರಿಂದ ರಾತ್ರಿ 10 ರ ವರೆಗೆ ನೀರಾವರಿ ಪಂಪ್ ಸೆಟ್ ಬಳಸದಿರಲು ಹೆಸ್ಕಾಂ ಸೂಚನೆ

ಧಾರವಾಡ: ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ವ್ಯಾಪ್ತಿಯ ಧಾರವಾಡ, ಗದಗ, ಹಾವೇರಿ, ಬೆಳಗಾವಿ, ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿರುವ ತೋಟದ ಮನೆಗಳಿಗೆ 1836 ನೀರಾವರಿ ಪಂಪ್‍ಸೆಟ್ ಫೀಡರಗಳಿವೆ. ನೀರಾವರಿ ಪಂಪ್‍ಸೆಟ್‍ಗಳಿಗೆ 7 ಗಂಟೆಗಳ ಕಾಲ 3 ಫೇಸ್ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ.

ನೀರಾವರಿ ಪಂಪ್‍ಸೆಟ್ ಫೀಡರ್ ಗಳ ಮೇಲೆ 1,29,234 ತೋಟದ ಮನೆಗಳಿವೆ. ಈ ತೋಟದ ಮನೆಗಳಿಗೆ ಗೃಹಬಳಕೆಗಾಗಿ ಸಾಯಂಕಾಲ 6 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ open delta ಸಿಂಗಲ್ ಫೇಸ್ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ.

ಈ ಅವಧಿಯಲ್ಲಿ ಕೆಲವು ಗ್ರಾಹಕರು capacitor(converter)ಗಳನ್ನು ಬಳಸಿ ನೀರಾವರಿ ಪಂಪ್‍ಸೆಟ್‍ಗಳನ್ನು ಆರಂಭಿಸಿಕೊಂಡರೆ ಫೀಡರ್ ಗಳು ಹೆಚ್ಚಿನ ವಿದ್ಯುತ್ ಹೊರೆಯಿಂದಾಗಿ ವಿದ್ಯುತ್ ಅಡಚಣೆಯಾಗುವ ಸಾಧ್ಯತೆಯಿರುತ್ತದೆ. ಸಾಯಂಕಾಲ 6 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ವಿದ್ಯುತ್ ಪೂರೈಕೆ ಅವಧಿಯಲ್ಲಿ ಗ್ರಾಹಕರು ನೀರಾವರಿ ಪಂಪ್‍ಸೆಟ್‍ಗಳನ್ನು ಉಪಯೋಗಿಸಬಾರದು. ಈ ಅವಧಿಯಲ್ಲಿ ತೋಟದ ಮನೆಗಳಿಗೆ ಕೇವಲ ಗೃಹಬಳಕೆಗಾಗಿ ಮಾತ್ರ ವಿದ್ಯುತ್ತನ್ನು ಉಪಯೋಗಿಸಿಕೊಳ್ಳಬೇಕೆಂದು ಹೆಸ್ಕಾಂ ಗ್ರಾಹಕರಲ್ಲಿ ವಿನಂತಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...