alex Certify ವಿಚ್ಚೇದನ ಪಡೆಯುತ್ತಿದ್ದಾರಾ ಪ್ರಿಯಾಂಕಾ – ನಿಕ್​ ದಂಪತಿ……? ಸ್ನೇಹಿತೆ ನೀಡಿದ್ದಾಳೆ ಈ ಮಾಹಿತಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಚ್ಚೇದನ ಪಡೆಯುತ್ತಿದ್ದಾರಾ ಪ್ರಿಯಾಂಕಾ – ನಿಕ್​ ದಂಪತಿ……? ಸ್ನೇಹಿತೆ ನೀಡಿದ್ದಾಳೆ ಈ ಮಾಹಿತಿ….!

ಸೆಲೆಬ್ರಿಟಿಗಳು ಸೋಶಿಯಲ್​ ಮೀಡಿಯಾದಲ್ಲಿ ತಮ್ಮ ಪತಿಯ ಹೆಸರು ಅಥವಾ ಅವರ ಮನೆತನದ ಹೆಸರನ್ನು ತೆಗೆದು ಹಾಕಿದ್ರು ಅಂದರೆ ಏನೋ ಮಿಸ್​ ಹೊಡೆದಿದೆ ಎಂದು ಭಾವಿಸವವರೇ ಹೆಚ್ಚು. ಕೆಲ ದಿನಗಳ ಹಿಂದಷ್ಟೇ ವಿಚ್ಛೇದನ ಪಡೆದ ಸಮಂತಾ ಪ್ರಭು ಹಾಗೂ ನಾಗ ಚೈತನ್ಯ ವಿಚಾರದಲ್ಲಿಯೂ ಇದೇ ಮಾತು ಸತ್ಯವಾಗಿತ್ತು. ಅದೇ ರೀತಿ ಬಾಲಿವುಡ್​ ನಟಿ ಪ್ರಿಯಾಂಕಾ ಚೋಪ್ರಾ ಕೂಡ ತಮ್ಮ ಸೋಶಿಯಲ್​ ಮೀಡಿಯಾ ಖಾತೆಗಳಲ್ಲಿ ಪತಿ ನಿಕ್​ ಜೋನಾಸ್​ ಹೆಸರನ್ನು ತೆಗೆದು ಹಾಕಿದ್ದು ಅಭಿಮಾನಿಗಳು ತಲೆಕೆರೆದುಕೊಂಡಿದ್ದಾರೆ.

ನಿನ್ನೆಯಷ್ಟೇ ಪ್ರಿಯಾಂಕಾ ಚೋಪ್ರಾ ತಮ್ಮ ಇನ್​ಸ್ಟಾಗ್ರಾಂ ಹಾಗೂ ಟ್ವಿಟರ್​ ಪ್ರೊಫೈಲ್​​ಗಳಲ್ಲಿ ಜೋನಾಸ್​ ಹೆಸರನ್ನು ತೆಗೆದು ಹಾಕಿದ್ದಾರೆ. ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಪ್ರಿಯಾಂಕ ಸ್ನೇಹಿತೆಯೊಬ್ಬರು ವಿಚ್ಛೇದನದ ಸುದ್ದಿ ಸತ್ಯಕ್ಕೆ ದೂರವಾಗಿದೆ. ತಮ್ಮ ಮುಂದಿನ ಯೋಜನೆಯೊಂದಿಗೆ ಕೇವಲ ಪ್ರಿಯಾಂಕಾ ಹೆಸರನ್ನು ಮಾತ್ರ ಬಳಸುವ ಬಗ್ಗೆ ಯೋಚಿಸಿದ್ದಾರೆ. ಹೀಗಾಗಿ ಡಿವೋರ್ಸ್​ ಸುದ್ದಿಗೆ ಕಿವಿಗೊಡಬೇಡಿ ಎಂದು ಹೇಳಿದ್ದಾರೆ.

ತಮ್ಮ ಕೊನೆಯ ಹೆಸರನ್ನು ಅಳಿಸಿದ ಬಳಿಕ ಸೋಶಿಯಲ್​ ಮೀಡಿಯಾದಲ್ಲಿ ಪ್ರಿಯಾಂಕಾ – ನಿಕ್​​ ಡಿವೋರ್ಸ್​ ವಿಚ್ಛೇದನದ ಸುದ್ದಿ ಸಿಕ್ಕಾಪಟ್ಟೆ ವೈರಲ್​ ಆಗಿತ್ತು. ಸದ್ಯ ಈ ಎಲ್ಲಾ ವದಂತಿಗಳಿಗೆ ತೆರೆ ಬಿದ್ದಂತಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...