alex Certify ಜಾಲತಾಣದಲ್ಲಿ ಮೈಸೂರು ವಿದ್ಯಾರ್ಥಿನಿ ಫಾಲೋ ಮಾಡಿದ ಮೋದಿ, ಸಂತಸ ಹಂಚಿಕೊಂಡ ಎಬಿವಿಪಿ ಕಾರ್ಯದರ್ಶಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜಾಲತಾಣದಲ್ಲಿ ಮೈಸೂರು ವಿದ್ಯಾರ್ಥಿನಿ ಫಾಲೋ ಮಾಡಿದ ಮೋದಿ, ಸಂತಸ ಹಂಚಿಕೊಂಡ ಎಬಿವಿಪಿ ಕಾರ್ಯದರ್ಶಿ

ಸಾಮಾಜಿಕ ಜಾಲತಾಣ ಟ್ವಿಟ್ಟರ್ ಖಾತೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮೈಸೂರು ವಿದ್ಯಾರ್ಥಿನಿ ಖಾತೆಯನ್ನು ಫಾಲೋ ಮಾಡುತ್ತಿದ್ದಾರೆ.

ಎಬಿವಿಪಿ ಮೈಸೂರು ನಗರ ಕಾರ್ಯದರ್ಶಿ ಪ್ರಜ್ಞಾ ಕಶ್ಯಪ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ಪ್ರಧಾನಿ ಮೋದಿ ಅವರು ನನ್ನನ್ನು ಟ್ವಿಟರ್ ಖಾತೆಯಲ್ಲಿ ಜನವರಿ 1ರಿಂದ ಫಾಲೋ ಮಾಡುತ್ತಿದ್ದು, ನನ್ನ ಸಂತೋಷವನ್ನು ವ್ಯಕ್ತಪಡಿಸಲು ಪದಗಳೇ ಇಲ್ಲ. ಇದೊಂದು ಗೌರವಾನ್ವಿತ ಪ್ರಧಾನಿಗಳು ಟ್ವಿಟರ್ ನಲ್ಲಿ ಫಾಲೋ ಮಾಡಿದ್ದು, ಅವರ ಪ್ರೋತ್ಸಾಹಕ್ಕೆ ಧನ್ಯವಾದಗಳು ಎಂದು ಟ್ವೀಟ್ ಮಾಡಿದ್ದಾರೆ.

ಪ್ರಧಾನಿಯವರು 2430 ಮಂದಿಯನ್ನು ಫಾಲೋ ಮಾಡುತ್ತಿದ್ದು, ಅದರಲ್ಲಿ ಪ್ರಜ್ಞಾ ಕಶ್ಯಪ್ ಅವರ ಖಾತೆ ಕೂಡ ಒಂದಾಗಿದೆ. ಮೋದಿಯವರಿಗೆ ಟ್ವಿಟರ್ ಖಾತೆಯಲ್ಲಿ 73.9 ಮಿಲಿಯನ್ ಫಾಲೋಯರ್ಸ್ ಗಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...