alex Certify ʼನಾಟು ನಾಟುʼಗೆ ಹೆಜ್ಜೆ ಹಾಕಿದ ಸೂತ್ರದ ಗೊಂಬೆ; ಸುಂದರ ವಿಡಿಯೋ ಶೇರ್‌ ಮಾಡಿದ ಆನಂದ್ ಮಹೀಂದ್ರಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼನಾಟು ನಾಟುʼಗೆ ಹೆಜ್ಜೆ ಹಾಕಿದ ಸೂತ್ರದ ಗೊಂಬೆ; ಸುಂದರ ವಿಡಿಯೋ ಶೇರ್‌ ಮಾಡಿದ ಆನಂದ್ ಮಹೀಂದ್ರಾ

ಆರ್‌ಆರ್‌ಆರ್‌ ಚಿತ್ರದ ನಾಟು ನಾಟು ಹಾಡು ಅದ್ಯಾವ ಮಟ್ಟಿಗೆ ಟ್ರೆಂಡ್ ಆಗುತ್ತಿದೆಯೆಂದರೆ, ಆಸ್ಕರ್‌ ಪ್ರಶಸ್ತಿ ಬಂದಾಗಿನಿಂದ ಈ ಹಾಡು ಗೂಗಲ್ ಸರ್ಚ್‌ನಲ್ಲಿ ಅಕ್ಷರಶಃ ಧೂಳೆಬ್ಬಿಸುತ್ತಿದೆ. ಆನ್ಲೈನ್ ಕಂಟೆಂಟ್ ಸೃಷ್ಟಿಕರ್ತರು ಇದೇ ಹಾಡಿನ ಮೇಲೆ ಸಾಕಷ್ಟು ಬಗೆಯಲ್ಲಿ ಕಂಟೆಂಟ್ ಮಾಡುತ್ತಿದ್ದಾರೆ.

ಮಹೀಂದ್ರಾ ಸಮೂಹದ ಚೇರ್ಮನ್ ಆನಂದ್ ಮಹೀಂದ್ರಾ ಸಹ ಈ ನಾಟು ನಾಟು ಹಾಡಿಗೆ ಫಿದಾ ಆದವರಲ್ಲಿ ಒಬ್ಬರು. ರಾಮ್ ಚರಣ್ ತೇಜಾರಿಂದ ಖುದ್ದು ಈ ಹಾಡಿಗೆ ನೃತ್ಯ ಮಾಡುವುದನ್ನು ಕಲಿಯುತ್ತಿರುವ ತಮ್ಮದೇ ವಿಡಿಯೋ ಶೇರ್‌ ಮಾಡಿರುವ ಮಹೀಂದ್ರಾ, ಈ ಬಾರಿ ಎಂಎಂ ಕೀರವಾಣಿಯವರ ನಾಟು ನಾಟು ಅದ್ಯಾವ ಮಟ್ಟದಲ್ಲಿ ಜಾಗತಿಕ ಮಟ್ಟದಲ್ಲಿ ಹವಾ ಎಬ್ಬಿಸಿದೆ ಎಂದು ತೋರುವ ವಿಡಿಯೋವೊಂದನ್ನು ಶೇರ್‌ ಮಾಡಿದ್ದಾರೆ.

ಇಡೀ ಜಗತ್ತು ನಾಟು ನಾಟು ನೃತ್ಯವನ್ನು ಅನುಕರಣೆ ಮಾಡಲು ನೋಡುತ್ತಿರುವ ಈ ಅವಧಿಯಲ್ಲಿ, ಸೂತ್ರದ ಗೊಂಬೆಯೊಂದು ಇದೇ ಹಾಡಿನ ಸ್ಟೆಪ್‌ಗಳನ್ನು ಹೇಗೆ ಅದ್ಭುತವಾಗಿ ಹಾಕುತ್ತಿದೆ ಎಂದು ತೋರುವ ವಿಡಿಯೋವೊಂದನ್ನು ಮಹೀಂದ್ರಾ ಟ್ವಿಟರ್‌ನಲ್ಲಿ ಹಾಕಿದ್ದಾರೆ.

“ಓಕೆ ನಾಟು ನಾಟು ಮೇಲಿನ ಒಂದು ಕೊನೆಯ ಟ್ವಿಟ್ ಇದು ಎಂದು ಮಾತು ಕೊಡುತ್ತೇನೆ. ಆದರೆ ಈ ವಿಡಿಯೋ ಶೇರ್‌ ಮಾಡದೇ ಇರಲು ಆಗಲಿಲ್ಲ. ಈ ಹಾಡು ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿದ್ದು, ಇಡೀ ಜಗತ್ತನ್ನು ಕುಣಿಸುತ್ತಿದೆ ಎಂಬುದಕ್ಕೆ ಮತ್ತೊಂದು ಅಸಲೀ ಸಾಕ್ಷಿ,” ಎಂದು ಆನಂದ್ ಮಹಿಂದ್ರಾ ಈ ವಿಡಿಯೋಗೆ ಕ್ಯಾಪ್ಷನ್ ಹಾಕಿ ಶೇರ್‌ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...