alex Certify ಈ ಯೋಜನೆಯಲ್ಲಿ ಪ್ರತಿ ತಿಂಗಳು 1 ರೂ. ಹೂಡಿ ಎರಡು ಲಕ್ಷ ವಿಮೆ ಪಡೆಯಿರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಯೋಜನೆಯಲ್ಲಿ ಪ್ರತಿ ತಿಂಗಳು 1 ರೂ. ಹೂಡಿ ಎರಡು ಲಕ್ಷ ವಿಮೆ ಪಡೆಯಿರಿ

ಸಾಮಾನ್ಯ ಜನರಿಗೆ ಆರ್ಥಿಕವಾಗಿ ನೆರವಾಗಲು ಅನೇಕ ಯೋಜನೆಗಳನ್ನು ಕೇಂದ್ರ ಸರ್ಕಾರ ನಡೆಸುತ್ತಾ ಬಂದಿದೆ. ಇವುಗಳಲ್ಲಿ ಒಂದು ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ.

ಪ್ರತಿ ತಿಂಗಳು ಬರೀ 1 ರೂ. ಅಥವಾ ವರ್ಷಕ್ಕೆ 12 ರೂ. ಹೂಡಿಕೆ ಮಾಡಿ ಎರಡು ಲಕ್ಷ ರೂಪಾಯಿಗಳ ಅಪಘಾತದ ವಿಮೆಗೆ ಅರ್ಹರಾಗುವಂತೆ ಮಾಡುತ್ತೆ ಈ ಯೋಜನೆ. ಬಹಳ ಕಡಿಮೆ ವೆಚ್ಚದಲ್ಲಿ ಜೀವ ವಿಮೆ ಒದಗಿಸುವ ಈ ಯೋಜನೆಯ ಕೆಲವೊಂದು ಕುತೂಹಲಕಾರಿ ಅಂಶಗಳು ಇಂತಿವೆ:

ಪ್ರತಿ ವರ್ಷದ ಮೇ 31ರಂದು ಪ್ರೀಮಿಯಂ ದುಡ್ಡನ್ನು ನಿಮ್ಮ ಬ್ಯಾಂಕ್ ಖಾತೆಯಿಂದ ಸ್ವಯಂ ಚಾಲಿತವಾಗಿ ಕಡಿತ ಮಾಡಲಾಗುತ್ತದೆ. ಇದಕ್ಕಾಗಿ ನಿಮ್ಮ ಬ್ಯಾಂಕ್ ಖಾತೆ ಖಾಲಿ ಇರದಂತೆ ನೋಡಿಕೊಳ್ಳಬೇಕು.

ಮಗಳ ಹುಟ್ಟುಹಬ್ಬದ ದಿನವೇ ದುಷ್ಕರ್ಮಿಗಳ ಗುಂಡಿಗೆ ಭಾರತೀಯ ಮೂಲದ ವ್ಯಕ್ತಿ ಬಲಿ

ಈ ವಿಮೆಗೆ ಚಂದಾದಾರರಾಗಲು ನೀವು 18-70 ವರ್ಷದೊಳಗಿನವರಾಗಿರಬೇಕು. ನಿಮ್ಮ ಬ್ಯಾಂಕ್ ಖಾತೆಯನ್ನೇ ಈ ಪಾಲಿಸಿಗೆ ಲಿಂಕ್‌ ಮಾಡಬಹುದಾಗಿದೆ. ವಿಮಾದಾರರಿಗೆ ಅಕಸ್ಮಾತ್‌ ಸಾವು ಅಥವಾ ಅಂಗವೈಕಲ್ಯ ಉಂಟಾದಲ್ಲಿ ಎರಡು ಲಕ್ಷ ರೂ.ಗಳ ಮೊತ್ತ ಖಾತ್ರಿಯಾಗಿ ನೀಡಲಾಗುತ್ತದೆ.

ಯಾವುದೇ ಬ್ಯಾಂಕ್ ಮೂಲಕ ನೀವು ಈ ಪಾಲಿಸಿಗೆ ಅರ್ಜಿ ಸಲ್ಲಿಸಬಹುದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...