alex Certify ಒಮಿಕ್ರಾನ್‌ ಎಫೆಕ್ಟ್: ಜನವರಿ 14ಕ್ಕೆ ರಿಲೀಸ್ ಆಗಲ್ಲ ಪ್ರಭಾಸ್ ಚಿತ್ರ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒಮಿಕ್ರಾನ್‌ ಎಫೆಕ್ಟ್: ಜನವರಿ 14ಕ್ಕೆ ರಿಲೀಸ್ ಆಗಲ್ಲ ಪ್ರಭಾಸ್ ಚಿತ್ರ..!

ಜನವರಿ 14ಕ್ಕೆ ʼರಾಧೆಶ್ಯಾಮ್ʼ ಚಿತ್ರ ಬಿಡುಗಡೆಯಾಗುತ್ತೆ ಎಂದು ಕಾದು ಕುಳಿತಿದ್ದ ಪ್ರಭಾಸ್ ಅಭಿಮಾನಿಗಳಿಗೆ ಚಿತ್ರತಂಡ ಶಾಕ್ ನೀಡಿದೆ. ದೇಶದಲ್ಲಿ ಹೆಚ್ಚುತ್ತಿರುವ ಕೋವಿಡ್ ಮತ್ತು ಒಮಿಕ್ರಾನ್ ಪ್ರಕರಣಗಳ ಕಾರಣ, ರಾಧೆಶ್ಯಾಮ್ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ. ಈ ಬಗ್ಗೆ ಚಿತ್ರತಂಡ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದು, ಚಿತ್ರ ಮುಂದೂಡಿಕೆಯಾಗಿರುವುದು ಖಚಿತವಾಗಿದೆ.

ಜರ್ಸಿ, RRR, ಚಿತ್ರಗಳು ಮುಂದೂಡಿಕೆಯಾದಂತೆ ʼರಾಧೆಶ್ಯಾಮ್ʼ ಚಿತ್ರ ಕೂಡ ಪೋಸ್ಟ್ ಪೋನ್ ಆಗತ್ತೆ ಅನ್ನೋ ಗಾಸಿಪ್ ಎಲ್ಲೆಡೆ ಹರಡಿತ್ತು. ಆದರೆ ಚಿತ್ರತಂಡ ಮಾತ್ರ ಈ ಬಗ್ಗೆ ಯಾವುದೇ ಮಾಹಿತಿ ನೀಡಿರಲಿಲ್ಲ‌.‌

ಈ ಚಿತ್ರದ ಪ್ರಚಾರಕರಾದ ವಂಶಿ-ಶೇಖರ್ ಚಿತ್ರದ ಬಿಡುಗಡೆ ದಿನಾಂಕದಲ್ಲಿ ಬದಲಾವಣೆ ಇಲ್ಲ, ಹೇಳಿರುವಂತೆ ಜನವರಿ 14ರಂದೆ ಚಿತ್ರ ಬಿಡುಗಡೆಯಾಗತ್ತೆ ಎಂದು ಟ್ವೀಟ್ ಮಾಡಿ ಅಭಿಮಾನಿಗಳಿಗೆ ಸಂತಸ ನೀಡಿದ್ರು.

ಆದರೆ ಈ ಸಂತಸದ ಸುದ್ದಿ ಎರಡೇ ದಿನಗಳಲ್ಲಿ ಹುಸಿಯಾಗಿದ್ದು, ರಾಧೆಶ್ಯಾಮ್ ಚಿತ್ರ ಕೂಡ ಮುಂದೂಡಿಕೆಯಾಗಿದೆ.

ಯುವಿಕ್ರಿಯೇಷನ್ಸ್ ತನ್ನ ಅಧಿಕೃತ ಸೋಷಿಯಲ್ ಹ್ಯಾಂಡಲ್ ನಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದು, ನಾವು ರಾಧೆಶ್ಯಾಮನ ದರ್ಶನ ನೀಡಲು ನಮ್ಮ ಶಕ್ತಿಮೀರಿ ಪ್ರಯತ್ನಿಸುತ್ತಿದ್ದೇವೆ. ಹೆಚ್ಚುತ್ತಿರುವ ಒಮಿಕ್ರಾನ್ ಪ್ರಕರಣಗಳನ್ನ ಗಮನದಲ್ಲಿಟ್ಟುಕೊಂಡು ನೋಡಿದಾಗ ನಮ್ಮ ಪ್ರೀತಿಯ ಕಥೆಯನ್ನ ಹಿರಿತೆರೆಯಲ್ಲಿ ನೋಡಲು ಕಾಯಲೇಬೇಕಾದ ಪರಿಸ್ಥಿತಿ ಸೃಷ್ಟಿಯಾಗಿದೆ. ರಾಧೆಶ್ಯಾಮ್ ಪ್ರೀತಿ ಮತ್ತು ವಿಧಿಯ ಕಥೆ, ನಿಮ್ಮ ಪ್ರೀತಿ ನಮ್ಮನ್ನ ಈ ಕಷ್ಟಕಾಲದಿಂದ ಹೊರ ಬರಲು ಸಹಾಯ ಮಾಡುತ್ತದೆ ಎಂಬುದೇ ನಮ್ಮ ನಂಬಿಕೆ. ಆದಷ್ಟು ಬೇಗ ಸಿನಿಮಾತೆರೆಗಳಲ್ಲಿ ಸಿಗೋಣ ಎಂದು ಪೋಸ್ಟ್ ಮಾಡಿದ್ದು ಚಿತ್ರ ಪೋಸ್ಟ್ ಪೋನ್ ಆಗಿರುವುದನ್ನ ಖಚಿತಪಡಿಸಿದ್ದಾರೆ.

ಪ್ರಭಾಸ್ ಹಾಗೂ ಪೂಜಾ ಹೆಗ್ಡೆ ಮೊದಲ ಬಾರಿ ಸ್ಕ್ರೀನ್ ಶೇರ್ ಮಾಡಿಕೊಂಡಿದ್ದು, ರಾಧೆ ಶ್ಯಾಮ್ ಚಿತ್ರವನ್ನ ರಾಧಾಕೃಷ್ಣ ಕುಮಾರ್ ನಿರ್ದೇಶಿಸಿದ್ದಾರೆ.‌

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...