alex Certify ಶಾರ್ಕ್ ಜೊತೆ ಮುಖಾಮುಖಿ: ರಮಣಿಯ ಫೋಟೋ ಸೆರೆಹಿಡಿದ ಪೋಸ್ಟ್‌ಮನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಾರ್ಕ್ ಜೊತೆ ಮುಖಾಮುಖಿ: ರಮಣಿಯ ಫೋಟೋ ಸೆರೆಹಿಡಿದ ಪೋಸ್ಟ್‌ಮನ್

ಸಾಗರದೊಳಗೆ ಜಿಗಿದು ದೈತ್ಯ ಶಾರ್ಕ್‌ಗಳ ಫೋಟೋ ತೆಗೆಯುವುದು ಏನಿದ್ದರೂ ತಜ್ಞರಿಂದಲೇ ಆಗಬೇಕಾದ ಕೆಲಸ. ಜಗತ್ತಿನಲ್ಲಿ ಬೆರಳೆಣಿಕೆಯಷ್ಟು ಛಾಯಾಗ್ರಾಹಕರಿಗೆ ಮಾತ್ರವೇ ಸಾಧ್ಯವಾಗುವ ಕೆಲಸ ಇದು.

ಬ್ರಿಟನ್‌ನ ಕಾರ್ನ್‌‌ವಾಲ್‌ ಕರಾವಳಿ ತೀರದಲ್ಲಿ ಸ್ನಾರ್ಕೆಲಿಂಗ್ ಮಾಡುತ್ತಿದ್ದ ಪೋಸ್ಟ್‌ಮನ್ ಒಬ್ಬರು ದೈತ್ಯ ಶಾರ್ಕ್ ಒಂದರ ಜೊತೆಗೆ ಮುಖಾಮುಖಿ ಆಗಿದ್ದಾರೆ. ಈ ವೇಳೆ ಗಾಬರಿಗೊಳಗಾಗದೇ ಶಾರ್ಕ್‌ನ ಒಂದಷ್ಟು ಅದ್ಭುತ ಫೋಟೋಗಳನ್ನು ಸೆರೆ ಹಿಡಿದಿದ್ದಾರೆ ಮಾರ್ಟಿನ್ ಯೆಲ್ಲಂಡ್.

ಟೆಕ್ನಾಲಾಜಿಯಲ್ಲಿ ಬಳಸಲಾಗುವ ಈ ಪದಗಳ ಫುಲ್ಫಾರ್ಮ್ ನಿಮಗೆ ಗೊತ್ತಾ….? ಇಲ್ಲಿದೆ ಒಂದಷ್ಟು ಮಾಹಿತಿ

ವನ್ಯಜೀವಿ ಛಾಯಾಗ್ರಹಣದ ಹವ್ಯಾಸ ಇಟ್ಟುಕೊಂಡಿರುವ ಮಾರ್ಟಿನ್‌, ತಮಗೆ ಇದೊಂದು ಸ್ಮರಣೀಯ ಅನುಭವ ಎಂದು ಹೇಳಿಕೊಂಡಿದ್ದಾರೆ.

“ಶಾರ್ಕ್‌ಗಳು ಬಹಳ ಕುತೂಹಲ ಇದ್ದರೂ ಸಹ ಯಾವುದೇ ಹಂತದಲ್ಲಿ ಆಕ್ರಮಣಕಾರಿಯಾಗಿ ವರ್ತಿಸಲಿಲ್ಲ. ಅಷ್ಟು ಹತ್ತಿರದಿಂದ ಶಾರ್ಕ್‌‌ಗಳನ್ನು ನೋಡಿದ್ದು ನನ್ನ ಜೀವನದಲ್ಲಿ ನಾನು ಮಾಡಿದ ಅತಿ ದೊಡ್ಡ ಕೆಲಸಗಳಲ್ಲಿ ಒಂದು. ನನಗೆ ಈ ಅನುಭವ ಅದೆಷ್ಟು ಖುಷಿ ಕೊಟ್ಟಿದೆ ಎಂದರೆ ಮುಂದಿನ ವಾರವೂ ಇಲ್ಲಿಗೆ ಬರಲು ಟಿಕೆಟ್ ಬುಕಿಂಗ್ ಮಾಡಿದ್ದೇನೆ,” ಎಂದು ಮಾರ್ಟಿನ್ ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...