alex Certify ಈ ಯೋಜನೆಯಲ್ಲಿ ದಿನವೂ 95 ರೂ. ಠೇವಣಿ ಇಟ್ಟರೆ ಸಿಗುತ್ತೆ 14 ಲಕ್ಷ ರೂ. | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಯೋಜನೆಯಲ್ಲಿ ದಿನವೂ 95 ರೂ. ಠೇವಣಿ ಇಟ್ಟರೆ ಸಿಗುತ್ತೆ 14 ಲಕ್ಷ ರೂ.

ಬಡ ಮತ್ತು ಮಧ್ಯಮ ವರ್ಗಗಳ ಎಲ್ಲ ವಯಸ್ಕರಿಗೆ ಸುರಕ್ಷಿತ ಮತ್ತು ಗ್ಯಾರಂಟಿ ಹಿಂಪಾವತಿಯ ಉಳಿತಾಯ ಯೋಜನೆಗಳನ್ನು ದೇಶಾದ್ಯಂತ ನೀಡುತ್ತಿರುವುದು ಅಂಚೆ ಇಲಾಖೆ ಮಾತ್ರವೇ.

ಸದ್ಯದ ಸ್ಥಿತಿಯಲ್ಲಿ ನೌಕರರು, ಪಿಂಚಣಿದಾರರು , ಯುವಕರು ಕೂಡ ಆಶ್ರಯಿಸುತ್ತಿರುವುದು ಅಂಚೆ ಕಚೇರಿಯಲ್ಲಿನ ಯೋಜನೆಗಳನ್ನೇ ಎಂದರೆ ತಪ್ಪಿಲ್ಲ. ಅಂಥದ್ದೊಂದು ಉಳಿತಾಯ ಯೋಜನೆ 1995ರಿಂದ ಅಂಚೆ ಇಲಾಖೆಯಲ್ಲಿದೆ. ಅದರ ಹೆಸರು ‘ಗ್ರಾಮ ಸುಮಂಗಲ್‌ ಗ್ರಾಮೀಣ ಅಂಚೆ ಜೀವ ವಿಮೆ’ ಯೋಜನೆ.

17 ಕೋಟಿ ರೂ.ಲಾಟರಿ ಗೆದ್ದರೂ ಈಕೆ ಬದುಕುತ್ತಿರುವ ರೀತಿ ಎಲ್ಲರಿಗೂ ಮಾದರಿ

ಇದರ ಅಡಿಯಲ್ಲಿ ಹೂಡಿಕೆದಾರರಿಗೆ ಆರು ವಿವಿಧ ರೀತಿಯ ಯೋಜನೆಗಳು ಆಯ್ಕೆಗೆ ಸಿಗಲಿವೆ. ಇದರಲ್ಲಿ ಒಂದು ಯೋಜನೆ ಹೇಗಿದೆ ಎಂದರೆ, ನಿತ್ಯ 95 ರೂ. ಹೂಡಿಕೆ ಮಾಡಿದರೆ, ಮೆಚ್ಯುರಿಟಿ ಹೊತ್ತಿಗೆ ಬರೋಬ್ಬರಿ 14 ಲಕ್ಷ ರೂ. ಕೈ ಸೇರಲಿದೆ. ಜತೆಗೆ ಕನಿಷ್ಠ 10 ಲಕ್ಷ ರೂ. ಖಾತ್ರಿಯನ್ನು ಕೂಡ ಈ ಯೋಜನೆ ಅಡಿಯಲ್ಲಿ ನೀಡಲಾಗುತ್ತದೆ.

BIG NEWS: ಸಿಎಂ ಆಗುವುದು ಇರಲಿ; ಮೊದಲು ಚುನಾವಣೆ ಗೆಲ್ಲಲಿ; ಸಿದ್ದರಾಮಯ್ಯಗೆ ಸವಾಲು ಹಾಕಿದ ಈಶ್ವರಪ್ಪ

ಯಾರು ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು ಎಂದರೆ, 19 ವರ್ಷ ತುಂಬಿದ್ದು ಗರಿಷ್ಠ ವಯಸ್ಸು 45 ವರ್ಷಗಳಾಗಿರುವವರು. ಮೆಚ್ಯುರಿಟಿ ಅವಧಿಯನ್ನು 15 ವರ್ಷಗಳು ಮತ್ತು 20 ವರ್ಷಗಳ ನಡುವೆ ಆಯ್ಕೆ ಮಾಡಲು ಅವಕಾಶ ಇದೆ.

15 ವರ್ಷ ಯೋಜನೆಯಲ್ಲಿ 20-20% ಹಣ ವಾಪಸಾತಿ ಖಾತ್ರಿ ಇದೆ. ಆದರೆ 6 ಅಥವಾ 9 ಅಥವಾ 12 ವರ್ಷಗಳ ಹೂಡಿಕೆ ಅವಧಿ ಪೂರ್ಣಗೊಂಡ ನಂತರ ಮಾತ್ರವೇ.

ಅದೇ ರೀತಿ, 20 ವರ್ಷಗಳ ಪಾಲಿಸಿಯಲ್ಲಿ 8 ಅಥವಾ 12 ಅಥವಾ 16 ವರ್ಷಗಳ ಹೂಡಿಕೆ ಬಳಿಕ 20-20% ಹೂಡಿಕೆ ಮೊತ್ತಕ್ಕೆ ಖಾತ್ರಿ ನೀಡಲಾಗುತ್ತದೆ. ಉಳಿದ 40% ಹೂಡಿಕೆ ಮೊತ್ತವನ್ನು ಮೆಚ್ಯುರಿಟಿ ಅವಧಿ ಮುಗಿದ ಬಳಿಕ ಬೋನಸ್‌ ಎಂದು ನೀಡಲಾಗುತ್ತದೆ.

IOCL ನಿಂದ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ; ಅರ್ಜಿ ಸಲ್ಲಿಕೆ ಕುರಿತು ಇಲ್ಲಿದೆ ವಿವರ

ಇದೇ ಮಾದರಿ ಅನುಸರಿಸಿ 14 ಲಕ್ಷ ರೂ. ಪಡೆಯಬೇಕಾದಲ್ಲಿ, 25 ವರ್ಷದ ಯುವಕ 20 ವರ್ಷಗಳ ಪಾಲಿಸಿಯನ್ನು ಪಡೆಯಬೇಕು. ಅದರ ಅಡಿಯಲ್ಲಿ 7 ಲಕ್ಷ ರೂ. ಹಣಕ್ಕಂತೂ ಖಾತ್ರಿ ಇದೆ. ಹೂಡಿಕೆ ಮಾಡಿದವರು ತಿಂಗಳಿಗೆ 2853 ರೂ. ಪ್ರೀಮಿಯಮ್‌ ಪ್ರತಿ ತಿಂಗಳು ಪಾವತಿ ಮಾಡಬೇಕಾಗುತ್ತದೆ. ಅಂದರೆ ದಿನವೊಂದಕ್ಕೆ 95 ರೂ. ಮಾತ್ರವೇ ಕೂಡಿಟ್ಟರೆ ಸಾಕಾಗುತ್ತದೆ. ಈ ಯೋಜನೆ ಅಡಿಯಲ್ಲಿಪ್ರತಿ 1000 ರೂ. ಹೂಡಿಕೆಗೆ 48 ರೂ. ಬೋನಸ್‌ ಸಿಗಲಿದೆ. 20 ವರ್ಷಗಳಿಗೆ ಬರೋಬ್ಬರಿ 6.72 ಲಕ್ಷ ರೂ. ಬೋನಸ್‌ ಸಿಗಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...