alex Certify 17 ಕೋಟಿ ರೂ.ಲಾಟರಿ ಗೆದ್ದರೂ ಈಕೆ ಬದುಕುತ್ತಿರುವ ರೀತಿ ಎಲ್ಲರಿಗೂ ಮಾದರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

17 ಕೋಟಿ ರೂ.ಲಾಟರಿ ಗೆದ್ದರೂ ಈಕೆ ಬದುಕುತ್ತಿರುವ ರೀತಿ ಎಲ್ಲರಿಗೂ ಮಾದರಿ

ಹಣ ಕಂಡ್ರೆ ಹೆಣವೂ ಬಾಯ್ಬಿಡುತ್ತೆ ಎಂಬ ಮಾತಿದೆ. ಹಣ ಯಾರಿಗೆ ಬೇಡ. ಅಲ್ಪನಿಗೆ ಐಶ್ವರ್ಯ ಬಂದ್ರೆ ಮಧ್ಯರಾತ್ರಿಯಲ್ಲಿ ಕೊಡೆ ಹಿಡಿದ ಎನ್ನುವ ಮಾತಿದೆ. ದಿಢೀರ್ ಶ್ರೀಮಂತರಾಗುವ ಜನರಿಗೆ ಕಷ್ಟ ಗೊತ್ತಿರುವುದಿಲ್ಲ. ಕೈಗೆ ಹಣ ಸಿಗ್ತಿದ್ದಂತೆ ಐಷಾರಾಮಿ ಜೀವನ ಶುರು ಮಾಡ್ತಾರೆ. ಬಂದ ಹಣವನ್ನು ಕೆಲವೇ ದಿನಗಳಲ್ಲಿ ಖಾಲಿ ಮಾಡಿ, ಬೀದಿಗೆ ಬಿದ್ದವರು ಸಾಕಷ್ಟು ಮಂದಿ. ಆದ್ರೆ ಲಾಟರಿಯಲ್ಲಿ 17 ಕೋಟಿ ಬಂದ್ರೂ, ಸಾಮಾನ್ಯರಂತೆ ಜೀವನ ನಡೆಸುತ್ತಿರುವ ಜೋಡಿಯೊಂದು ಇಲ್ಲಿದೆ.

ಇಂಗ್ಲೆಂಡಿನ ಸೌತ್ ಯಾರ್ಕ್ಷೈರ್ ನ 51 ವರ್ಷದ ತ್ರಿಶ್ ಎಮ್ಸನ್ ಮತ್ತು ಆಕೆಯ ಪತಿ ಗ್ರಹಾಂ ನಾರ್ಟನ್, 17 ಕೋಟಿ ರೂಪಾಯಿಯ ಲಾಟರಿ ಗೆದದ್ದಿದ್ದಾರೆ. 2003 ರಲ್ಲಿ ಬಂದ ಲಾಟರಿ ಫಲಿತಾಂಶ ನೋಡಿ ಅವರು ದಂಗಾಗಿದ್ದರು. ಕೈನಲ್ಲಿ 17 ಲಕ್ಷ ಹಣವಿದೆ. ಇನ್ನೇಕೆ ಕೆಲಸ ಎಂದು ಅವರು ಕುಳಿತಿಲ್ಲ. ಜನಸಾಮಾನ್ಯರಂತೆ ಈಗ್ಲೂ ಕೆಲಸ ಮಾಡ್ತಿದ್ದಾರೆ. ಲಾಟರಿ ಗೆದ್ದು 18 ವರ್ಷವಾದ್ರೂ ಅವರ ಜೀವನ ಶೈಲಿ ಬದಲಾಗಿಲ್ಲ.

ಚರ್ಮದ ಆರೈಕೆಗೆ ಬೆಸ್ಟ್ ಬೇವು-ಅಲೋವೆರಾ

ತ್ರಿಶ್ ಈಗಲೂ ಶಾಲಾ ಮಕ್ಕಳಿಗೆ ಆಹಾರ ಒದಗಿಸಲು ಕೆಲಸ ಮಾಡುತ್ತಾಳೆ. ಆಕೆಯ ಪತಿ ಬ್ಯೂಟಿಷಿಯನ್ ಕೆಲಸ ಮಾಡುತ್ತಾನೆ. ಇಬ್ಬರೂ ತಮ್ಮ 17 ವರ್ಷದ ಮಗ ಬೆಂಜಮಿನ್ ನನ್ನು ಖಾಸಗಿ ಶಾಲೆಗೆ ಕಳುಹಿಸಿಲ್ಲ. ಆತನಿಗೆ ಹಣದ ಮಹತ್ವ ತಿಳಿಯಲಿ ಎಂಬ ಕಾರಣಕ್ಕೆ ಪಾಕೆಟ್ ಮನಿ ಕೂಡ ನೀಡ್ತಿಲ್ಲ.

ಶ್ರೀಮಂತರಾಗಿರುವುದು ಎಂದರೆ ಒಳ್ಳೆಯ ವ್ಯಕ್ತಿಯಾಗದಿರುವುದು ಎಂದಲ್ಲ. ಎಂದಿಗೂ ನಮ್ಮ ಬಳಿ ಹಣವಿದೆ ಎಂಬುದನ್ನು ತೋರಿಸಲು ನಾವು ಇಷ್ಟಪಡುವುದಿಲ್ಲ ಎಂದಿದ್ದಾಳೆ. ಲಾಟರಿ ಗೆಲ್ಲುವ 5 ವರ್ಷಗಳ ಮೊದಲು, ಇಬ್ಬರೂ ಮಗು ಬಯಸಿದ್ದರಂತೆ. ಆದರೆ ಗರ್ಭ ಧರಿಸಲು ಸಾಧ್ಯವಾಗಿರಲಿಲ್ಲವಂತೆ. ಲಾಟರಿ ಗೆದ್ದ ನಂತ್ರ ಅದೃಷ್ಟ ಕೈಹಿಡಿದಿದೆ. ಕೆಲವೇ ತಿಂಗಳಲ್ಲಿ ಅವಳು ಗರ್ಭಿಣಿಯಾಗಿದ್ದಳಂತೆ.

ಇಬ್ಬರೂ ಸರಳವಾದ ಜೀವನ ನಡೆಸುತ್ತಾರೆ. ಸೂಪರ್ ಮಾರ್ಕೆಟ್ ನಲ್ಲಿ ಶಾಪಿಂಗ್ ಮಾಡ್ತಾರೆ. ಅನವಶ್ಯಕ ಖರ್ಚು ಮಾಡುವುದಿಲ್ಲ ಎಂದವರು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...