alex Certify IOCL ನಿಂದ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ; ಅರ್ಜಿ ಸಲ್ಲಿಕೆ ಕುರಿತು ಇಲ್ಲಿದೆ ವಿವರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

IOCL ನಿಂದ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ; ಅರ್ಜಿ ಸಲ್ಲಿಕೆ ಕುರಿತು ಇಲ್ಲಿದೆ ವಿವರ

ದಿ ಇಂಡಿಯನ್​​ ಆಯಿಲ್​ ಕಾರ್ಪೋರೇಷನ್​​ ನಿಗಮವು ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಒಟ್ಟು 71 ಹುದ್ದೆಗಳಿಗೆ ಐಒಸಿಎಲ್​ನಿಂದ ಅರ್ಜಿ ಆಹ್ವಾನಿಸಲಾಗಿದೆ.

ಅಕ್ಟೋಬರ್​ 1ರಿಂದಲೇ ಅರ್ಜಿ ಸ್ವೀಕಾರ ಪ್ರಕ್ರಿಯೆಯು ಆರಂಭಗೊಂಡಿದ್ದು ಅರ್ಜಿ ಸಲ್ಲಿಸಲು ಅಕ್ಟೋಬರ್​ 22 ಕೊನೆಯ ದಿನಾಂಕವಾಗಿದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು iocl.com ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಮೊಬೈಲ್ ಕಳೆದುಕೊಂಡವರಿಗೆ ಗುಡ್ ನ್ಯೂಸ್: ಪತ್ತೆಗೆ ನೆರವಾಗುತ್ತೆ ಈ ಆಪ್

ಒಟ್ಟು ಹುದ್ದೆ : 71

ಕಾಯ್ದಿರಿಸದ ವರ್ಗ : 28 ಹುದ್ದೆಗಳು

ಎಸ್ಸಿ ವರ್ಗ : 10 ಹುದ್ದೆಗಳು

ಎಸ್ಟಿ ವರ್ಗ : 7 ಹುದ್ದೆಗಳು

ಒಬಿಸಿ ವರ್ಗ : 19 ಹುದ್ದೆಗಳು

PwBD ವರ್ಗ : 6 ಹುದ್ದೆಗಳು

EWS ವರ್ಗ : 7 ಹುದ್ದೆಗಳು

ಬಡವರಿಗೆ ಬಿಗ್ ಶಾಕ್: ಬಿಪಿಎಲ್ ಕಾರ್ಡ್ ಬದಲಾಗಿ ಪಿಂಚಣಿ ಸ್ಥಗಿತ

ಅರ್ಜಿ ಸಲ್ಲಿಸುವವರು 30 ವರ್ಷ ಮೀರಿರಬಾರದು.

ಲಿಖಿತ ಪರೀಕ್ಷೆ, ಗುಂಪು ಚರ್ಚೆ/ ಟಾಸ್ಜ್​​ ಹಾಗೂ ವೈಯಕ್ತಿಕ ಸಂದರ್ಶನಗಳ ಆಧಾರದ ಅಡಿಯಲ್ಲಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಯಲಿದೆ.

ಅರ್ಜಿ ಸಲ್ಲಿಸುವ ವಿಧಾನ :

1 : ಐಓಸಿಎಲ್​ ಅಧಿಕೃತ ವೆಬ್​ಸೈಟ್​ iocl.comಗೆ ಭೇಟಿ ನೀಡಿ.

2. ಹೋಮ್​ಪೇಜ್​ನಲ್ಲಿ ವಾಟ್ಸ್​ ನ್ಯೂ ಟ್ಯಾಬ್​ ಮೇಲೆ ಕ್ಲಿಕ್​ ಮಾಡಿ.

3. Recruitment of Assistant Quality Control Officers – 2021 ಆಯ್ಕೆ ಮೇಲೆ ಕ್ಲಿಕ್​ ಮಾಡಿ.

4. ಅಪ್ಲೈ ಆನ್​ಲೈನ್​ ಆಯ್ಕೆ ಕ್ಲಿಕ್ಕಿಸಿ.

ಜೇಬಿನಿಂದ ʼನಾಣ್ಯʼ ಬಿದ್ರೆ ಏನರ್ಥ ಗೊತ್ತಾ….?

5. ಕೇಳಲಾಗುವ ಮಾಹಿತಿಯನ್ನು ತುಂಬಬೇಕು.

6. ಅರ್ಜಿಯನ್ನು ತುಂಬಬೇಕು.

7. ಅರ್ಜಿ ಶುಲ್ಕವನ್ನು ಪಾವತಿಸಿ ಬಳಿಕ ಸಬ್​ಮಿಟ್​ ಆಯ್ಕೆ ಮೇಲೆ ಕ್ಲಿಕ್​ ಮಾಡಿ.

8. ಈ ಅರ್ಜಿಯನ್ನು ಭವಿಷ್ಯದ ಬಳಕೆಗಾಗಿ ಡೌನ್​ಲೋಡ್​ ಮಾಡಿಟ್ಟುಕೊಳ್ಳಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...