alex Certify ಅಂಚೆ ಕಚೇರಿ ಮಾಸಿಕ ಆದಾಯ ಸ್ಕೀಂ: ನಿಮಗೆ ತಿಳಿದಿರಲಿ ಈ ಮುಖ್ಯ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಂಚೆ ಕಚೇರಿ ಮಾಸಿಕ ಆದಾಯ ಸ್ಕೀಂ: ನಿಮಗೆ ತಿಳಿದಿರಲಿ ಈ ಮುಖ್ಯ ಮಾಹಿತಿ

ಬಹಳ ಜನಪ್ರಿಯವಾದ ಮಾಸಿಕ ಆದಾಯ ಸ್ಕೀಂನ (ಎಂಐಎಸ್‌) ಹೊಸ ಖಾತೆಯೊಂದನ್ನು ಹೊರ ತಂದಿರುವ ಅಂಚೆ ಕಚೇರಿ, ಆಕರ್ಷಕ ರಿಟರ್ನ್ಸ್ ಹಾಗೂ ಬಡ್ಡಿದರಗಳನ್ನು ಕೊಡಲಿದೆ.

ಹತ್ತು ವರ್ಷ ಮೇಲ್ಪಟ್ಟ ಯಾರಾದರೂ ಈ ಖಾತೆಯನ್ನು ಆರಂಭಿಸಬಹುದಾಗಿದ್ದು, ಅಪ್ರಾಪ್ತ ವಯಸ್ಸಿನವರ ಪರವಾಗಿ ಅವರ ಪೋಷಕರೂ ಸಹ ಈ ಖಾತೆಯನ್ನು ಆರಂಭಿಸಬಹುದಾಗಿದೆ. ಇದೇ ವೇಳೆ, ಮೂರು ವಯಸ್ಕರು ಜಂಟಿ ಖಾತೆಯನ್ನು ಆರಂಭಿಸಬಹುದಾಗಿದೆ.

* ಕನಿಷ್ಠ 1000 ರೂ.ಗಳಿಂದ ಈ ಎಂಐಎಸ್‌ ಖಾತೆಯ ಆರಂಭಿಸಬಹುದಾಗಿದೆ.

* ಗರಿಷ್ಠ 4.5 ಲಕ್ಷ ರೂಪಾಯಿಗಳವರೆಗೂ ಒಂದೇ ಖಾತೆಯಲ್ಲಿ ಇಡಬಹುದಾಗಿದ್ದು, ಜಂಟಿ ಖಾತೆಯಲ್ಲಿ ಒಂಬತ್ತು ಲಕ್ಷ ರೂಪಾಯಿಗಳವರೆಗೂ ಇಡಬಹುದಾಗಿದೆ.

* ಜಮಾ ಮಾಡಿದ ದಿನದಿಂದ ಒಂದು ವರ್ಷದವರೆಗೂ ನಿಮ್ಮ ಹಣವನ್ನು ಹಿಂಪಡೆಯುವಂತಿಲ್ಲ.

* ಒಂದು ವೇಳೆ ಒಂದು ವರ್ಷದ ಬಳಿಕ ಹಾಗೂ ಮೂರು ವರ್ಷಗಳ ಒಳಗೆ ನಿಮ್ಮ ಖಾತೆ ಮುಚ್ಚಲ್ಪಟ್ಟಲ್ಲಿ, ನಿಮ್ಮ ಅಸಲು ಮೊತ್ತದ 2% ದುಡ್ಡನ್ನು ಹಿಡಿದುಕೊಂಡು ಮಿಕ್ಕ ಹಣ ವಾಪಸ್ ಕೊಡಲಾಗುವುದು.

* ಮೆಚ್ಯೂರಿಟಿಗೂ ಮುನ್ನ ಖಾತೆದಾರರು ಮೃತಪಟ್ಟಲ್ಲಿ, ಖಾತೆಯನ್ನು ಮುಚ್ಚಿ, ದುಡ್ಡನ್ನು ನಾಮಿನಿಗಳು ಅಥವಾ ಅಧಿಕೃತ ವಾರಸುದಾರರಿಗೆ ಮರಳಿಸಲಾಗುವುದು.

* ರೀಫಂಡ್ ಮಾಡಲಾಗುವ ಹಣದ ಮೇಲೆ ಹಿಂದಿನ ತಿಂಗಳವರೆಗೂ ಬಡ್ಡಿ ಪಾವತಿ ಮಾಡಲಾಗುವುದು.

* ಎಂಐಎಸ್‌ ಮೇಲೆ ಜಮಾ ಆಗುವ ಬಡ್ಡಿಯು ಹೂಡಿಕೆದಾರರ ಕೈಗೆ ಬಂದ ಮೇಲೆ ತೆರಿಗೆಗೆ ಒಳಪಡುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...