alex Certify ಆರ್ಥಿಕವಾಗಿ ಸ್ವಾತಂತ್ರ್ಯರಾಗಲು ಮಹಿಳೆಯರಿಗೆ ಇಲ್ಲಿದೆ ಟಿಪ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆರ್ಥಿಕವಾಗಿ ಸ್ವಾತಂತ್ರ್ಯರಾಗಲು ಮಹಿಳೆಯರಿಗೆ ಇಲ್ಲಿದೆ ಟಿಪ್ಸ್

ಉಳಿತಾಯ, ಹೂಡಿಕೆ ಪ್ರತಿಯೊಬ್ಬರಿಗೂ ಅತ್ಯಗತ್ಯ. ಹೂಡಿಕೆ ವಿಷ್ಯದಲ್ಲಿ ಮಹಿಳೆಯರು ಹಿಂದಿದ್ದಾರೆ. ಬಂಗಾರ ಖರೀದಿ ಬಿಟ್ಟರೆ ಉಳಿತಾಯ ಖಾತೆಯಲ್ಲಿ, ಷೇರು ಮಾರುಕಟ್ಟೆಯಲ್ಲಿ ಅಥವಾ ಮ್ಯೂಚುವಲ್‌ ಫಂಡ್‌ ನಲ್ಲಿ ಹಣ ಹೂಡಿಕೆ ಮಾಡುವ ಮಹಿಳೆಯರ ಸಂಖ್ಯೆ ಬಹಳ ಕಡಿಮೆ. ಮಾರ್ಚ್ 8 ರಂದು ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಗುತ್ತದೆ. ಈ ಸುಸಂದರ್ಭದಲ್ಲಿ  ಮಹಿಳೆಯರು ಆರ್ಥಿಕ ಸ್ವಾತಂತ್ರ್ಯವನ್ನು ಒದಗಿಸುವ ಹೂಡಿಕೆ ಬಗ್ಗೆ ತಿಳಿಯುವ ಅಗತ್ಯವಿದೆ.

  1. ಸಾರ್ವಜನಿಕ ಭವಿಷ್ಯ ನಿಧಿ : ಸಾರ್ವಜನಿಕ ಭವಿಷ್ಯ ನಿಧಿ ಯೋಜನೆಯು ಅತ್ಯಂತ ಜನಪ್ರಿಯ ಹೂಡಿಕೆ ಯೋಜನೆಯಾಗಿದೆ. 15 ವರ್ಷಗಳವರೆಗೆ ವಾರ್ಷಿಕ 50 ಲಕ್ಷ ರೂಪಾಯಿವರೆಗೆ ಹೂಡಿಕೆ ಮಾಡಬಹುದು. ಇದರಲ್ಲಿ ಶೇಕಡಾ 7.1ರ ದರದಲ್ಲಿ ಬಡ್ಡಿ ಸಿಗ್ತಿದೆ.
  2. ರಾಷ್ಟ್ರೀಯ ಪಿಂಚಣಿ ಯೋಜನೆ : ರಾಷ್ಟ್ರೀಯ ಪಿಂಚಣಿ ಯೋಜನೆಯಲ್ಲೂ ಮಹಿಳೆಯರು ಹೂಡಿಕೆ ಮಾಡಬಹುದು. ಇದು ಭದ್ರ ಹಾಗೂ ಉತ್ತಮ ಹೂಡಿಕೆ ಯೋಜನೆಯಾಗಿದೆ.
  3. ಮ್ಯೂಚುವಲ್ ಫಂಡ್‌ : ಮ್ಯೂಚುವಲ್ ಫಂಡ್‌ಗಳು ಅತ್ಯುತ್ತಮ ಹೂಡಿಕೆ ಆಯ್ಕೆಯಾಗಿದೆ. ಮಹಿಳೆಯರು ಈಕ್ವಿಟಿ, ಸಾಲ ಅಥವಾ ಮ್ಯೂಚುವಲ್ ಫಂಡ್‌ಗಳ ಹೈಬ್ರಿಡ್ ಫಂಡ್‌ಗಳಲ್ಲಿ ಹೂಡಿಕೆ ಮಾಡಬಹುದು.
  4. ಜೀವ ವಿಮಾ ಪಾಲಿಸಿ : ಭಾರತೀಯ ಜೀವ ವಿಮಾ ನಿಗಮವು ಮಹಿಳೆಯರ ಅಗತ್ಯಗಳಿಗೆ ಅನುಗುಣವಾಗಿ ಕಾಲಕಾಲಕ್ಕೆ ಅನೇಕ ಯೋಜನೆಗಳನ್ನು ಪ್ರಾರಂಭಿಸುತ್ತದೆ. ಮಹಿಳೆಯರು ತಮ್ಮ ಭವಿಷ್ಯ ಭದ್ರಗೊಳಿಸಲು ಇದ್ರಲ್ಲಿ ಹಣ ಹೂಡಿಕೆ ಮಾಡಬಹುದು.
  5. ಆರೋಗ್ಯ ವಿಮೆ : ಈಗಿನ ಪರಿಸ್ಥಿತಿಯಲ್ಲಿ ಆರೋಗ್ಯ ವಿಮೆ ಅತ್ಯಗತ್ಯವಾಗಿದೆ. ಅಂತರಾಷ್ಟ್ರೀಯ ಮಹಿಳಾ ದಿನದ ಸಂದರ್ಭದಲ್ಲಿ ಮಹಿಳೆಯರು ಆರೋಗ್ಯ ವಿಮೆಯನ್ನು ಖರೀದಿಸುವ ಮೂಲಕ ವೈದ್ಯಕೀಯ ಚಿಕಿತ್ಸಾ ಹಣದ ಚಿಂತೆಯಿಂದ ಮುಕ್ತವಾಗಬಹುದು.
  6. ಸ್ಥಿರ ಠೇವಣಿ ಯೋಜನೆ : ಅನೇಕ ಬ್ಯಾಂಕ್‌ ಗಳು ಸ್ಥಿರ ಠೇವಣಿ ಯೋಜನೆಯನ್ನು ಹೊಂದಿವೆ. ಉತ್ತಮ ಬಡ್ಡಿ ನೀಡುವ ಹಾಗೂ ಭದ್ರತೆಯುಳ್ಳ ಬ್ಯಾಂಕ್‌ ನಲ್ಲಿ ಮಹಿಳೆಯರು ಸ್ಥಿರ ಠೇವಣಿ ಮಾಡಿ ಲಾಭಗಳಿಸಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...