alex Certify ಜನವರಿಯಲ್ಲಿ ‘ಕೊರೊನಾ ಸ್ಪೋಟ’ ಸಾಧ್ಯತೆ : ಬೆಂಗಳೂರಿನಲ್ಲಿ 4 ಚಿತಾಗಾರ ಮೀಸಲು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜನವರಿಯಲ್ಲಿ ‘ಕೊರೊನಾ ಸ್ಪೋಟ’ ಸಾಧ್ಯತೆ : ಬೆಂಗಳೂರಿನಲ್ಲಿ 4 ಚಿತಾಗಾರ ಮೀಸಲು

ಬೆಂಗಳೂರು: ಜನವರಿಯಲ್ಲಿ ‘ಕೊರೊನಾ ಸ್ಪೋಟ’ ಗೊಳ್ಳುವ ಸಾಧ್ಯತೆಯಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದು, ಈ ಹಿನ್ನೆಲೆ ರಾಜ್ಯ ಸರ್ಕಾರದಿಂದ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ.

ಒಂದು ವೇಳೆ ತಜ್ಞರು ಹೇಳಿದಂತೆ ಜನವರಿಯಲ್ಲಿ ಕೊರೊನಾ ಸ್ಪೋಟವಾದರೆ, ಹಿಂದೆ ಆದಂತೆ ದೊಡ್ಡ ಪ್ರಮಾಣದಲ್ಲಿ ಸಾವು ಸಂಭವಿಸಿದರೆ, ಕಳೆದ ಬಾರಿ ಉಂಟಾದ ಚಿತಾಗಾರ ಸಮಸ್ಯೆ ಈ ಬಾರಿ ಆಗಬಾರದು ಎಂದು 4 ಚಿತಾಗಾರಗಳನ್ನು ಮೀಸಲಿಡಲಾಗಿದೆ.

ಹೌದು, ಕೊರೊನಾ ಸೋಂಕಿನಿಂದ ಸಾವನ್ನಪ್ಪಿದವರನ್ನು ಗೌರವಯುತವಾಗಿ ಅಂತ್ಯಸಂಸ್ಕಾರ ಮಾಡಲು ಬಿಬಿಎಂಪಿ ಮುಂದಾಗಿದ್ದು, ಅದಕ್ಕಾಗಿ ಪ್ರತ್ಯೇಕ ಚಿತಾಗಾರಗಳನ್ನು ಮೀಸಲಿಡುತ್ತಿದೆ.  ಬೆಂಗಳೂರಿನ ಬನಶಂಕರಿ ಚಿತಾಗಾರ, ಮೇಡಿ ಅಗ್ರಹಾರ. ಹೆಬ್ಬಾಳ, ಸುಮ್ಮನಹಳ್ಳಿ ಚಿತಾಗಾರವನ್ನು ಕೋವಿಡ್ ನಿಂದ ಮೃತಪಟ್ಟವರಿಗೆ ಮೀಸಲಿಡಲು ನಿರ್ಧರಿಸಲಾಗಿದೆ. ಕಳೆದ ಬಾರಿ ಮಹಾಮಾರಿ ಕೋವಿಡ್ ನಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಮೃತಪಟ್ಟಿದ್ದರು, ಅಂತ್ಯಸಂಸ್ಕಾರಕ್ಕಾಗಿ ಚಿತಾಗಾರದಲ್ಲಿ ಆಂಬುಲೆನ್ಸ್ ಗಳು ಸಾಲುಗಟ್ಟಿ ನಿಂತಿದ್ದವು. ಮೃತಪಟ್ಟ ಕುಟುಂಬ ಸದಸ್ಯರ ಅಂತ್ಯಸಂಸ್ಕಾರ ಮಾಡಲು ಜನರು ಚಿತಾಗಾರಕ್ಕಾಗಿ ಅಲೆದಾಡಿದ್ದರು. ಇಂತಹ ಸಂದರ್ಭ ಮತ್ತೆ ಬರಬಾರದು ಎಂದು ಸರ್ಕಾರ ಮುನ್ನೆಚ್ಚರಿಕೆ ಕ್ರಮವಾಗಿ ಚಿತಾಗಾರವನ್ನು ಮೀಸಲಿಟ್ಟಿದೆ.

ರಾಜ್ಯದಲ್ಲಿ ನಿನ್ನೆ ಹೊಸದಾಗಿ 24 ಜನರಿಗೆ ಕೊರೋನಾ ಸೋಂಕು ತಗುಲಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 105ಕ್ಕೆ ಏರಿಕೆಯಾಗಿದೆ. 11 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಕೇರಳ ಸೇರಿ ದೇಶದ ಅನೇಕ ರಾಜ್ಯಗಳಲ್ಲಿ ಕೊರೋನಾ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯಿಂದ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...