alex Certify ಪೊಲೀಸರಿಗೆ ಸಿಹಿ ಸುದ್ದಿ, ಹುಟ್ಟುಹಬ್ಬದ ದಿನ ರಜೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪೊಲೀಸರಿಗೆ ಸಿಹಿ ಸುದ್ದಿ, ಹುಟ್ಟುಹಬ್ಬದ ದಿನ ರಜೆ

ಬೆಂಗಳೂರು: ಹುಟ್ಟುಹಬ್ಬದ ದಿನ ಪೊಲೀಸರಿಗೆ ರಜೆ ನೀಡಲಾಗುವುದು. ರಾಜಧಾನಿ ಬೆಂಗಳೂರಿನ ಪೊಲೀಸರಿಗೆ ಪೋಲಿಸ್ ಆಯುಕ್ತ ಬಿ. ದಯಾನಂದ್ ಶುಭ ಸುದ್ದಿ ನೀಡಿದ್ದಾರೆ. ತಮ್ಮ ಹುಟ್ಟಿದ ಹಬ್ಬದ ದಿನವೂ ಕುಟುಂಬದವರೊಂದಿಗೆ ಸಮಯ ಕಳೆಯಲಾಗದೆ ಪರದಾಡುತ್ತಿದ್ದ ಪೊಲೀಸರಿಗೆ ಸಿಹಿ ಸುದ್ದಿ ನೀಡಿದ್ದಾರೆ.

ಬೆಂಗಳೂರಿನ ಪೊಲೀಸರಿಗೆ ಇನ್ನು ಮುಂದೆ ಹುಟ್ಟುಹಬ್ಬದ ದಿನ ರಜೆ ನೀಡಲಾಗುವುದು. ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಹುಟ್ಟುಹಬ್ಬ ಆಚರಿಸಿಕೊಳ್ಳಲು ಒಂದು ದಿನ ರಜೆ ನೀಡುವ ನಿರ್ಧಾರ ಕೈಗೊಂಡಿದ್ದಾರೆ.

ಆಗಸ್ಟ್ 1 ರಿಂದ ಜಾರಿಗೆ ಬರುವಂತೆ ಬೆಂಗಳೂರಿನ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗೆ ಜನ್ಮದಿನಕ್ಕೆ ಶುಭಾಶಯ ಪತ್ರ ಜೊತೆಗೆ ಒಂದು ದಿನ ರಜೆ ನೀಡಲು ತೀರ್ಮಾನ ಕೈಗೊಂಡಿದ್ದಾರೆ. ತಿಂಗಳವಾರು ಪೊಲೀಸರ ಜನ್ಮದಿನ ಇರುವ ಪಟ್ಟಿಯನ್ನು ಕಚೇರಿ ಅಧಿಕಾರಿಗಳು ಸಿದ್ಧಪಡಿಸುತ್ತಿದ್ದಾರೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...