alex Certify ನೆಲಮಾಳಿಗೆಯಲ್ಲಿನ ವಿಸ್ಕಿ ಬಾಟಲಿಯಲ್ಲಿ 135 ವರ್ಷ ಹಳೆಯದಾದ ಮಾತ್ರೆ ಗೋಚರ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೆಲಮಾಳಿಗೆಯಲ್ಲಿನ ವಿಸ್ಕಿ ಬಾಟಲಿಯಲ್ಲಿ 135 ವರ್ಷ ಹಳೆಯದಾದ ಮಾತ್ರೆ ಗೋಚರ….!

ಎಡಿನ್‌ಬರ್ಗ್: ಮಹಿಳೆಯೊಬ್ಬರ ನೆಲಮಾಳಿಗೆಯಲ್ಲಿ 135 ವರ್ಷಗಳಷ್ಟು ಹಳೆಯದಾದ ಅತಿ ಉದ್ದದ ಮಾತ್ರೆಯೊಂದು ಸಿಕ್ಕಿದ್ದು, ಇದಕ್ಕೆ ಖುದ್ದು ಮಹಿಳೆ ಅಚ್ಚರಿಗೊಳಗಾಗಿದ್ದಾರೆ. ಎಡಿನ್‌ಬರ್ಗ್ ನಿವಾಸಿ ಎಲಿದ್ ಸ್ಟಿಂಪ್ಸನ್ ಅವರು ಪುರಾತನ ಟಿಪ್ಪಣಿಯಲ್ಲಿ ಸೂಕ್ಷ್ಮವಾಗಿ ಕೆತ್ತಲಾದ ಸಂದೇಶಗಳನ್ನು ಒಳಗೊಂಡಿರುವ ಮಾತ್ರೆಯನ್ನು ನೋಡಿದ್ದಾರೆ. ಅದು ಖಾಲಿ ವಿಸ್ಕಿ ಬಾಟಲಿಯೊಳಗೆ ಸುತ್ತಿಕೊಂಡು ನೆಲದ ಕೆಳಗೆ ಮರೆಮಾಡಿ ಇಡಲಾಗಿತ್ತು.

ವಿಕ್ಟೋರಿಯನ್ ಯುಗದ ಬಾಟಲಿ ಇದಾಗಿದ್ದು, ಆಕೆಯ ಪ್ಲಂಬರ್ ಪೀಟರ್ ಅಲನ್ ಅವರಿಗೆ ಇದು ಸಿಕ್ಕಿದೆ. ಮನೆಯಲ್ಲಿ ಕೆಲಸ ಮಾಡುವಾಗ ನೆಲದಲ್ಲಿ ರಂಧ್ರವೊಂದನ್ನು ನೋಡಿದ್ದರು. ಅದರ ಆಳಕ್ಕೆ ಹೋದಾಗ ಇವು ಸಿಕ್ಕಿವೆ.

“ಕೋಣೆಯು 10 ಅಡಿಯಿಂದ 15 ಅಡಿಗಳಷ್ಟು ಕೆಳಗೆ ಇವು ಕಂಡುಬಂದಿವೆ. ನಾನು ಬಾಟಲಿಯ ಸುತ್ತಲೂ ನಿಖರವಾಗಿ ಕತ್ತರಿಸಿದ್ದೆ. ಆಗ ಇವು ಗೋಚರಿಸಿವೆ. ನಮ್ಮ ಮನೆಯಲ್ಲಿ ಇದು ಸಿಕ್ಕಿರುವುದಕ್ಕೆ ತುಂಬಾ ಅಚ್ಚರಿಯಾಗುತ್ತಿದೆ, ನಾನು ಅದನ್ನು ಸಂಪೂರ್ಣವಾಗಿ ನಂಬಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ ಮಹಿಳೆ.
ಬಾಟಲಿ ಒಳಗೆ ಇದು ಇರುವ ಕಾರಣ, ಮಾತ್ರೆಯ ಮೇಲಿರುವ ಐತಿಹಾಸಿಕ ಸಂದೇಶವನ್ನು ಹಾಗೇ ಇರಿಸಿಕೊಳ್ಳಲು ಗಾಜು ಒಡೆಯುವುದು ಅವರ ಏಕೈಕ ಆಯ್ಕೆಯಾಗಿದೆ ಎಂದು ಅವರು ಹೇಳಿದ್ದಾರೆ. ಈ ಬಗ್ಗೆ ಕಮೆಂಟಿಗರು ತಮ್ಮದೇ ಆದ ರೀತಿಯಲ್ಲಿ ಹಲವು ವಿಧನಾದ ಕಮೆಂಟ್​ ಮಾಡುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...