alex Certify ಶಾಶ್ವತವಾಗಿ ʼವರ್ಕ್‌ ಫ್ರಂ ಹೋಂʼ ಬಯಸುತ್ತಿದ್ದೀರಾ…? ಹಾಗಾದ್ರೆ ಇಲ್ಲಿದೆ ನಿಮಗೆ ಮುಖ್ಯ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಾಶ್ವತವಾಗಿ ʼವರ್ಕ್‌ ಫ್ರಂ ಹೋಂʼ ಬಯಸುತ್ತಿದ್ದೀರಾ…? ಹಾಗಾದ್ರೆ ಇಲ್ಲಿದೆ ನಿಮಗೆ ಮುಖ್ಯ ಮಾಹಿತಿ

ಕೋವಿಡ್-19 ಸೋಂಕು ಜಾಗತಿಕವಾಗಿ ವ್ಯಾಪಿಸುತ್ತಲೇ ತಮ್ಮ ಉದ್ಯೋಗಿಗಳನ್ನು ಅವರವರ ಮನೆಗಳಿಂದಲೇ ಕೆಲಸ ಮಾಡುವ ವ್ಯವಸ್ಥೆ ಮಾಡಿದ ಕಂಪನಿಗಳು ಇದೀಗ ಶಾಶ್ವತವಾಗಿ ಇದೇ ವ್ಯವಸ್ಥೆ ಮುಂದುವರೆಸುವ ಆಯ್ಕೆಗಳನ್ನು ನೀಡುವತ್ತ ಚಿಂತನೆ ಮಾಡುತ್ತಿವೆ.

ಒಮಿಕ್ರಾನ್ ಭೀತಿಯ ನಡುವೆ ಉದ್ಯೋಗಿಗಳು ಶಾಶ್ವತವಾಗಿ ಮನೆಗಳಿಂದಲೇ ಕೆಲಸ ಮಾಡುವ ಆಶಯ ವ್ಯಕ್ತಪಡಿಸುತ್ತಿದ್ದಾರೆ. ಒಂದು ವೇಳೆ ನೀವು ಮನೆಯಿಂದಲೇ ಕೆಲಸ ಮಾಡಲು ಇಚ್ಛಿಸಿದಲ್ಲಿ, ನಿಮ್ಮ ಸಂಬಳದ ರಚನೆಯಲ್ಲಿ ವ್ಯತ್ಯಯಗಳಾಗಬಹುದು — ಮನೆ ಬಾಡಿಗೆ ಭತ್ಯೆಯಂಥ ಕಾಂಪೋನೆಂಟ್‌ಗಳನ್ನು ಕಂಪನಿಗಳು ಕೊಡದೇ ಇರಬಹುದು.

ಕೆಲಸದ ನಿರೀಕ್ಷೆಯಲ್ಲಿದ್ದವರಿಗೆ ಇಲ್ಲಿದೆ ಸಿಹಿ ಸುದ್ದಿ

ಈ ವಿಚಾರವಾಗಿ ಕಾರ್ಮಿಕ ಸಚಿವಾಲಯ ಶೀಘ್ರವೇ ಮಹತ್ವದ ಘೋಷಣೆ ಮಾಡುವ ಸಾಧ್ಯತೆ ಇದೆ. ಶಾಶ್ವತವಾಗಿ ಮನೆಗಳಿಂದಲೇ ಕೆಲಸ ಮಾಡಲು ಇಚ್ಛಿಸುವ ನೌಕರರ ವೇತನಾ ರಚನೆಗಳಲ್ಲಿ ಕೆಲವೊಂದು ಮಾರ್ಪಡುಗಳನ್ನು ಮಾಡಲು ಕಾರ್ಮಿಕ ಸಚಿವಾಲಯವು ಕಂಪನಿಗಳಿಗೆ ಅವಕಾಶ ನೀಡುವ ಸಾಧ್ಯತೆ ಇದೆ.

ಹೀಗೆ ಆದಲ್ಲಿ ಉದ್ಯೋಗಿಗಳಿಗೆ ಮನೆ ಬಾಡಿಗೆ ಭತ್ಯೆಯಲ್ಲಿ ಇಳಿಕೆಯಾಗಿ, ವಿವಿಧ ವೆಚ್ಚಗಳ ಮರುಪಾವತಿ (ರೀಇಂಬರ್ಸ್‌ಮೆಂಟ್‌) ಹೆಚ್ಚಾಗಿ ಸಿಗುವ ಸಾಧ್ಯತೆ ಇದೆ. ಈ ವಿಚಾರವಾಗಿ ಎಲ್ಲಾ ಆಯ್ಕೆಗಳ ಪರಿಶೀಲನೆ ಮಾಡಿ ಕಾರ್ಮಿಕ ಸಚಿವಾಲಯ ನಿರ್ಣಯಕ್ಕೆ ಬರುವ ಸಾಧ್ಯತೆ ಇದೆ.

ಸದ್ಯದ ಮಟ್ಟಿಗೆ ಮನೆ ಬಾಡಿಗೆ ಭತ್ಯೆಯ ತೆರಿಗೆ ರೀಫಂಡ್‌ ಹೀಗಿದೆ — ಉದ್ಯೋಗದಾತನಿಂದ ಸ್ವೀಕರಿಸಿದ ಎಚ್‌ಆರ್‌ಎ, ಮೂಲ ವೇತನದ 50% + ತುಟ್ಟಿ ಭತ್ಯೆ (ಮೆಟ್ರೋ ನಗರಗಳಿಗೆ), ಮೆಟ್ರೋಯೇತರ ನಗರಗಳಿಗೆ 40%.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...