ಪಶ್ಚಿಮ ಆಫ್ರಿಕಾದ ದೇಶವಾದ ಘಾನಾದ ಕಡಲತೀರಗಳು ಬಳಸಿದ ಬಟ್ಟೆಗಳಿಂದ ಮಲಿನಗೊಂಡಿದೆ. ಯುಕೆಯಲ್ಲಿ ಜನರು ಬಳಸಿ ಎಸೆದ ಬಟ್ಟೆಯು ಘಾನಾ ಕಡಲ ದಡಕ್ಕೆ ತಲುಪುತ್ತಿದೆ. ಇದೊಂದು ವಿಚಿತ್ರ ರೀತಿಯ ಬಿಕ್ಕಟ್ಟು ಸೃಷ್ಟಿಯಾಗಿದ್ದು, ಯುಕೆಯ ವೇಗದ ಫ್ಯಾಷನ್ ಉದ್ಯಮದಿಂದ ಸಮಸ್ಯೆ ಉದ್ಭವಿಸಿದೆ ಎಂದು ನಂಬಲಾಗಿದೆ.
ತಿರಸ್ಕರಿಸಿದ ಅಥವಾ ದಾನ ಮಾಡಿದ ನಂತರ ಬಟ್ಟೆಗಳನ್ನು ಹಡಗುಗಳಲ್ಲಿ ತುಂಬಿ ಇತರ ದೇಶಗಳಿಗೆ ಕಳುಹಿಸಲಾಗುತ್ತದೆ. ಆ ಉಡುಪುಗಳು ಸಾಮಾನ್ಯವಾಗಿ ಯಾರಾದರೂ ಧರಿಸಲು ಯೋಗ್ಯವಾದ ಗುಣಮಟ್ಟದಲ್ಲಿ ಇರುವುದು ಕಡಿಮೆ. ಆದ್ದರಿಂದ, ಅವುಗಳನ್ನು ಲ್ಯಾಂಡ್ ಫಿಲ್ ಸ್ಥಳಗಳು, ಕಡಲತೀರಗಳು ಮತ್ತು ನದಿಗಳಲ್ಲಿ ಎಸೆಯಲಾಗುತ್ತದೆ. ಇದು ಪರಿಸರವನ್ನು ಉಸಿರುಗಟ್ಟಿಸುತ್ತಿದೆ.
ಪದೇ ಪದೇ ಸಾವಿಗೆ ನಲುಗಿದ ಫ್ಯಾಮಿಲಿ: 8 ತಿಂಗಳಲ್ಲಿ ಒಂದೇ ಕುಟುಂಬದ ನಾಲ್ವರು ಸಾವು
ಘಾನಾದ ಅಕ್ರಾದಲ್ಲಿರುವ ಜೇಮ್ಸ್ಟೌನ್ ಸಮುದ್ರತೀರದಲ್ಲಿ ಇಂಥದ್ದೊಂದು ಸನ್ನಿವೇಶ ಕಂಡು ಬರುತ್ತಿದೆ. ಬಳಸಿದ ಬಟ್ಟೆಗಳ ರಾಶಿ ಸಮುದ್ರ ತಟವನ್ನೇ ಮುಚ್ಚಿದಂತಿರುವುದು ಫೋಟೋದಲ್ಲಿ ಕಾಣಿಸಿದೆ.
ಯುಕೆ ಮಾತ್ರವಲ್ಲದೆ ಯುರೋಪ್, ಆಸ್ಟ್ರೇಲಿಯಾ, ಉತ್ತರ ಅಮೇರಿಕಾ ಮತ್ತು ಆಸ್ಟ್ರೇಲಿಯಾದಿಂದ ಪ್ರತಿ ವರ್ಷವೂ 15 ಮಿಲಿಯನ್ ಟನ್ ಬಳಸಿದ ಉಡುಪುಗಳನ್ನು ಅಕ್ರಾಗೆ ಕಳುಹಿಸಲಾಗುತ್ತದೆ. ಅನಗತ್ಯ ವಸ್ತುಗಳ ಈ ಬೃಹತ್ ರಾಶಿಯಲ್ಲಿ ಯಾರೂ ಧರಿಸುವ ಸ್ಥಿತಿಯಲ್ಲಿ ಇಲ್ಲದವೇ ಹೆಚ್ಚಿರುತ್ತದೆ.
ಚಿಲಿಯ ಅಟಕಾಮಾ ಮರುಭೂಮಿಗೆ ಪ್ರತಿ ವರ್ಷ ಅಭಿವೃದ್ಧಿ ಹೊಂದಿದ ದೇಶಗಳಿಂದ ಸುಮಾರು 39,000 ಟನ್ಗಳಷ್ಟು ತ್ಯಾಜ್ಯ ರವಾನೆಯಾಗುತ್ತಿದೆ. ಮುಂದುವರಿದ ದೇಶದ ಸಮಸ್ಯೆ ವರ್ಗಾವಣೆಯಾಗುತ್ತಿದ್ದು, ಇದಕ್ಕೊಂದು ಸ್ಪಷ್ಟ ಪರಿಹಾರ ಕಾಣಿಸಿಲ್ಲವಾಗಿದೆ.