alex Certify ಪೆಟ್ರೋಲ್ ಪಂಪ್ ಬಳಿ ಸಿಗರೇಟ್ ಸೇದಿದವನಿಗೆ ಮಾಲೀಕ ಮಾಡಿದ್ದೇನು…? ಹಳೆ ವಿಡಿಯೋ ಮತ್ತೆ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪೆಟ್ರೋಲ್ ಪಂಪ್ ಬಳಿ ಸಿಗರೇಟ್ ಸೇದಿದವನಿಗೆ ಮಾಲೀಕ ಮಾಡಿದ್ದೇನು…? ಹಳೆ ವಿಡಿಯೋ ಮತ್ತೆ ವೈರಲ್

ಕೆಲವು ಬೇಜವಾಬ್ದಾರಿ ಇರುವ ಜನರೇ ಹಾಗೆ ಎಲ್ಲಿ ಏನು ಮಾಡಬಾರದೋ ಅಂಥ ಕೆಲಸವನ್ನೇ ಮಾಡುತ್ತಾರೆ. ಆದರೆ ಇಂಥವರು ಮಾಡುವ ಕೆಲಸವನ್ನು ಸಹಿಸದೆ ವ್ಯಕ್ತಿಯೊಬ್ಬರು ಧೈರ್ಯವಾಗಿ ಎದುರಿಸಿರುವ ಘಟನೆಯು ಎಲ್ಲರಿಗೂ ಸ್ಪೂರ್ತಿದಾಯಕವಾಗಿದೆ.

ಅರೇ ಇದೇನು ಹೇಳುತ್ತಿದ್ದಾರೆ ಇವರು ಅಂತಾ ಅನ್ಕೋಬೇಡಿ, ಅದೇನೆಂದು ಈ ಸ್ಟೋರಿ ಓದಿ. ಹೌದು, ಪೆಟ್ರೋಲ್ ಪಂಪ್ ಒಂದರಲ್ಲಿ ಕಾರಿನಲ್ಲಿದ್ದ ವ್ಯಕ್ತಿ ಸಿಗರೇಟ್ ಸೇದುವುದನ್ನು ಗಮನಿಸಿದ ಪೆಟ್ರೋಲ್ ಪಂಪ್ ಮಾಲೀಕ, ಸಿಗರೇಟ್ ಸೇದಬೇಡಿ ಎಂದು ಕೇಳಿಕೊಂಡಿದ್ದಾರೆ.

ಸ್ಕ್ಯಾನಿಂಗ್ ನಲ್ಲಿ ಕಳ್ಳನ ಅಸಲಿಯತ್ತು ಬಯಲು

ಆದರೆ ಇವರ ಮಾತನ್ನು ಕಿವಿಗೆ ಹಾಕಿಕೊಳ್ಳದ ಆ ಭೂಪ ತನ್ನ ಪಾಡಿಗೆ ಸಿಗರೇಟು ಸೇದಿದ್ದಾನೆ. ಇದರಿಂದ ವಿಚಲಿತರಾದ ಮಾಲೀಕರು, ಕೂಡಲೇ ಧೂಮಪಾನ ಮಾಡುತ್ತಿರುವ ವ್ಯಕ್ತಿಯ ಬಳಿ ಬಂದು ಸುರಕ್ಷತಾ ಅಗ್ನಿಶಾಮಕವನ್ನು ತೆರೆಯುವ ಮುಖಾಂತರ ಆತನಿಗೆ ತಕ್ಕ ಪಾಠ ಕಲಿಸಿದ್ದಾರೆ. ಇದರಿಂದ ಸುತ್ತಲೂ ಮೋಡ ತುಂಬಿಕೊಂಡಂತೆ ಭಾಸವಾಗಿದೆ. ಸದ್ಯ ಈ ಹಳೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು, ಪೆಟ್ರೋಲ್ ಪಂಪ್ ಮಾಲೀಕರ ಬಗ್ಗೆ ನೆಟ್ಟಿಗರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...