alex Certify ನಿಮ್ಮ ಹೆಸರಿಗೆ ಹೀಗೂ ಅರ್ಥವಿರಬಹುದು….! ಅರ್ಬನ್ ಡಿಕ್ಷನರಿಯಲ್ಲೊಮ್ಮೆ ಚೆಕ್‌ ಮಾಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿಮ್ಮ ಹೆಸರಿಗೆ ಹೀಗೂ ಅರ್ಥವಿರಬಹುದು….! ಅರ್ಬನ್ ಡಿಕ್ಷನರಿಯಲ್ಲೊಮ್ಮೆ ಚೆಕ್‌ ಮಾಡಿ

ನಿಮ್ಮ ಹೆಸರಿನ ಅರ್ಥವೇನು ? ಅರ್ಬನ್ ಡಿಕ್ಷನರಿ ಇದೀಗ ನಿಮ್ಮ ಹೆಸರಿನ ಅರ್ಥ ತಿಳಿಯಲು ನೆರವಾಗಲು ಮುಂದಾಗಿದೆ. ಈ ಶಬ್ದಕೋಶದ ಪೋರ್ಟಲ್‌ಗೆ ಭೇಟಿ ಕೊಟ್ಟು ತಮ್ಮ ಹೆಸರುಗಳ ಅರ್ಥ ತಿಳಿಯಲು ನೆಟ್ಟಿಗರು ಉತ್ಸುಕರಾಗಿದ್ದಾರೆ.

ಸಾರ್ವಜನಿಕರಿಂದ ನಿಧಿ ಸಂಗ್ರಹಿಸಿ ಸೃಷ್ಟಿಸಲಾದ ಈ ಡಿಜಿಟಲ್ ಗ್ರಂಥಾಲಯದಲ್ಲಿ ತಮ್ಮ ಹೆಸರುಗಳಿಗೆ ಅರ್ಥಗಳನ್ನೂ ಹುಡುಕಬಹುದು ಎಂದು ತಿಳಿದ ನೆಟ್ಟಿಗರು ಅರ್ಬನ್‌ ಡಿಕ್ಷನರಿಯನ್ನು ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಮಾಡಿಬಿಟ್ಟಿದ್ದಾರೆ.

ಅಷ್ಟಕ್ಕೂ ಈ ಹೆಸರುಗಳು ಡಿಕ್ಷನರಿ ಸೇರಿದ್ದಾದರೂ ಹೇಗೆ ? ಈ ಹೆಸರುಗಳ ಎಂಟ್ರಿಯನ್ನು ನೆಟ್ಟಿಗರೇ ಮಾಡಿದ್ದು, ಇವುಗಳ ಅರ್ಥವನ್ನು ಗಂಭೀರವಾಗಿ ತೆಗೆದುಕೊಳ್ಳಬೇಡಿ. ಆದರೂ ಸಹ ಹೆಸರುಗಳ ಅರ್ಥವನ್ನು ಈ ಡಿಜಿಟಲ್ ಗ್ರಂಥಾಲಯದಲ್ಲಿ ಹುಡುಕುವ ಟ್ರೆಂಡ್ ಸದ್ದು ಮಾಡುತ್ತಿದೆ.

ತಮ್ಮ ಹೆಸರಿಗೆ ಈ ಅರ್ಥವೂ ಇದೆ ಎಂದು ಅರಿತಾಗ ಮೊಗದಲ್ಲಿ ಮೂಡುವ ತಮ್ಮ ಪ್ರತಿಕ್ರಿಯೆಗಳನ್ನು ಜನರು ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡಿಕೊಂಡಿದ್ದಾರೆ.

ನೆಟ್‌ಫ್ಲಿಕ್ಸ್ ಇಂಡಿಯಾ ಸಹ ಈ ಬಗ್ಗೆ ಜೋಕ್ ಒಂದನ್ನು ಮಾಡಿ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು, ನೆಟ್ಟಿಗರು ಇದನ್ನು ಫಾಲೋ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...