alex Certify ಬೆಂಗಳೂರಲ್ಲಿ ಟ್ರಾಫಿಕ್ ಸಮಸ್ಯೆಗೆ ಕೈಗನ್ನಡಿ; ರಾಪಿಡೋ ಬೈಕ್ ಮೇಲೆ ಕುಳಿತೇ ಲ್ಯಾಪ್ ಟಾಪ್ ನಲ್ಲಿ ಕೆಲಸ ಶುರುಮಾಡಿದ ಮಹಿಳೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಂಗಳೂರಲ್ಲಿ ಟ್ರಾಫಿಕ್ ಸಮಸ್ಯೆಗೆ ಕೈಗನ್ನಡಿ; ರಾಪಿಡೋ ಬೈಕ್ ಮೇಲೆ ಕುಳಿತೇ ಲ್ಯಾಪ್ ಟಾಪ್ ನಲ್ಲಿ ಕೆಲಸ ಶುರುಮಾಡಿದ ಮಹಿಳೆ

ಬೆಂಗಳೂರಿನಲ್ಲಿ ಪ್ರತಿದಿನ ಕೆಲಸಕ್ಕೆ ಹೊರಡುವವರಿಗೆ ಟ್ರಾಫಿಕ್ ಕಿರಿಕಿರಿ ದೊಡ್ಡ ಸಮಸ್ಯೆಯಾಗಿ ಕಾಡುತ್ತದೆ. ಕೆಲವೊಮ್ಮೆ ಭಾರೀ ಮಳೆ, ರಸ್ತೆಯಲ್ಲಿ ಮರಬಿದ್ದ ಘಟನೆಗಳಿಂದ ಬದಲಿ ಮಾರ್ಗದಲ್ಲಿ ಹೋಗುವವರಿಗೆ ಗಮ್ಯಸ್ಥಾನ ತಲುಪುವುದು ದೊಡ್ಡ ಸಾಹಸವೇ ಸರಿ. ಹೀಗೆ ಭಾರೀ ಟ್ರಾಫಿಕ್ ನಲ್ಲಿ ಸಿಲುಕಿದ ಮಹಿಳೆಯೊಬ್ಬರು ರಾಪಿಡೋ ಬೈಕ್ ಮೇಲೆ ಕುಳಿತೇ ಲ್ಯಾಪ್ ಟ್ಯಾಪ್ ತೆಗೆದು ಕಚೇರಿ ಕೆಲಸ ಶುರು ಮಾಡಿದರು. ಟ್ವಿಟರ್‌ನಲ್ಲಿ ಹಂಚಿಕೊಂಡ ಈ ಫೋಟೋ ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ಕನ್ನಡಿ ಹಿಡಿದಿದೆ. ‘ಪೀಕ್ ಬೆಂಗಳೂರು ಕ್ಷಣ’ ಎಂದು ಟ್ವಿಟರ್ ನಲ್ಲಿ ಫೋಟೋ ಹಂಚಿಕೊಳ್ಳಲಾಗಿದೆ.

ಫೋಟೋವನ್ನು ಕೋರಮಂಗಲ-ಅಗರ-ಹೊರವರ್ತುಲ ರಸ್ತೆಯ ಉದ್ದಕ್ಕೂ ತೆಗೆಯಲಾಗಿದೆ. ಈ ಮಾರ್ಗವು ಭಾರೀ ಟ್ರಾಫಿಕ್ ನಿಂದ ಸದಾ ಸುದ್ದಿಯಲ್ಲಿರುತ್ತದೆ. ಹೊರ ವರ್ತುಲ ರಸ್ತೆಯ ಇಬ್ಬಲೂರು ಬಳಿಯ ಸರ್ವಿಸ್ ರಸ್ತೆಯ ಮಿಲಿಟರಿ ಗೇಟ್ ಬಳಿ ಮರವೊಂದು ಉರುಳಿ ಬಿದ್ದಿದ್ದರಿಂದ ಮಂಗಳವಾರ ಸಂಚಾರ ದಟ್ಟಣೆ ಉಂಟಾಗಿತ್ತು. ಹೀಗಾಗಿ ವಾಹನ ಸವಾರರು ಟ್ರಾಫಿಕ್ ನಿಂದ ಭಾರೀ ಕಿರಿಕಿರಿ ಅನುಭವಿಸಿದ್ದರು.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...