alex Certify BIG NEWS: ಕೆಲಸ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ನಟಿಗೆ ಲೈಂಗಿಕ ಕಿರುಕುಳ; ರಾಪಿಡೋ ಬೈಕ್ ಚಾಲಕನ ವಿರುದ್ಧ ಕೇಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಕೆಲಸ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ನಟಿಗೆ ಲೈಂಗಿಕ ಕಿರುಕುಳ; ರಾಪಿಡೋ ಬೈಕ್ ಚಾಲಕನ ವಿರುದ್ಧ ಕೇಸ್

ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದ ನಟಿ ಕಮ್ ಮಾಡೆಲ್ ಒಬ್ಬರು ರಾಪಿಡೋ ಬೈಕ್ ನಲ್ಲಿ ಮನೆಗೆ ತೆರಳುವ ವೇಳೆ ಆತ ಅನುಚಿತವಾಗಿ ಸ್ಪರ್ಶಿಸಿ ಲೈಂಗಿಕ ಕಿರುಕುಳ ನೀಡಿರುವ ಘಟನೆ ನಡೆದಿದೆ. ಈ ಸಂಬಂಧ ಈಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಪ್ರಕರಣದ ವಿವರ: ಕಳೆದ ರಾತ್ರಿ 10.30 ರ ಸುಮಾರಿಗೆ ಈ ಘಟನೆ ನಡೆದಿದ್ದು, ಜಕ್ಕೂರಿನಿಂದ ಬಾಬುಸಾಬ್ ಪಾಳ್ಯಕ್ಕೆ ಹೋಗಲು ನಟಿ ಕ್ಯಾಬ್ ಬುಕ್ ಮಾಡಲು ಮುಂದಾಗಿದ್ದರು. ಆದರೆ ಕ್ಯಾಬ್ ಸಿಗದ ಕಾರಣ ರಾಪಿಡೋ ಬೈಕ್ ಬುಕ್ ಮಾಡಿದ್ದಾರೆ.

ಈ ವೇಳೆ ಬೈಕ್ ಚಾಲಕ ಮಂಜುನಾಥ್ ತಿಪ್ಪೇಸ್ವಾಮಿ ತನ್ನ ಫೋನ್ ಸರಿಯಾಗಿಲ್ಲದ ಕಾರಣ ನಿಮ್ಮ ಫೋನ್ನಲ್ಲಿ ಲೊಕೇಶನ್ ಹಾಕಿ ಎಂದಿದ್ದಾನೆ. ಅದರಂತೆ ಲೊಕೇಶನ್ ಹಾಕಿದ ವೇಳೆ ಇನ್ನೇನು ಸ್ಥಳ ತಲುಪಲು 10 ನಿಮಿಷವಿದೆ ಅನ್ನುವಷ್ಟರಲ್ಲಿ ಹಿಂದಿನಿಂದ ಅನುಚಿತವಾಗಿ ಸ್ಪರ್ಶಿಸಿದ್ದಾನೆ. ಇದರಿಂದ ಸಿಡಿದೆದ್ದ ಯುವತಿ ಆತನಿಗೆ ತರಾಟೆಗೆ ತೆಗೆದುಕೊಂಡಿದ್ದು, ಬಳಿಕ ಪೊಲೀಸರಿಗೆ ದೂರು ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...