alex Certify ಬಾಲಿವುಡ್​ ಸಾಂಗ್​ ʼಚುಪ್ಕೆ ಸೇʼ ಹಾಡಿದ ಪಾವ್ರಿ ಗರ್ಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಲಿವುಡ್​ ಸಾಂಗ್​ ʼಚುಪ್ಕೆ ಸೇʼ ಹಾಡಿದ ಪಾವ್ರಿ ಗರ್ಲ್

ಪಾಕಿಸ್ತಾನಿ ಸಾಮಾಜಿಕ ಜಾಲತಾಣದ ಇನ್​ಫ್ಲುಯೆನ್ಸರ್​ ಎನಿಸಿಕೊಂಡ ದನನೀರ್​ ಮೊಬೀನ್​ ಮತ್ತೆ ಸುದ್ದಿಗೆ ಬಂದಿದ್ದಾರೆ. ಐದು ಸೆಕೆಂಡ್​ಗಳ ವಿಡಿಯೋ ‘ಪಾವ್ರಿ ಹೋ ರಹೀ ಹೆೈ’ ವೈರಲ್​ ಆದ ನಂತರ ರಾತ್ರೋರಾತ್ರಿ ಸಂಚಲನ ಮೂಡಿಸಿದ ‘ಪಾವ್ರಿ ಗರ್ಲ್​’ , ಈ ಬಾರಿ ಗಾಯನ ಕೌಶಲ್ಯಕ್ಕಾಗಿ ಮತ್ತೆ ಕಾಣಿಸಿಕೊಂಡಿದ್ದಾರೆ.

ಅವರು ಇತ್ತೀಚೆಗೆ ತಮ್ಮ ಖಾತೆಯಲ್ಲಿ ಹೊಸ ವಿಡಿಯೊ ಹಂಚಿಕೊಂಡಿದ್ದಾರೆ, ಅದರಲ್ಲಿ ತಮ್ಮ ಸುಮಧುರ ಧ್ವನಿಯಲ್ಲಿ ಬಾಲಿವುಡ್​ ಹಾಡನ್ನು ಹಾಡಿದ್ದು, ನೆಟ್ಟಿಗರ ಗಮನ ಸೆಳೆದಿದೆ. 2002 ರ ಚಲನಚಿತ್ರ ʼಸಾಥಿಯಾʼದಲ್ಲಿನ ಚುಪ್ಕೆ ಸೇ……. ಎಂಬ ಭಾವಪೂರ್ಣ ಹಾಡನ್ನು ಆಕೆ ಹಾಡಿದ್ದಾರೆ. ಈ ಹಾಡನ್ನು ಮೂಲತಃ ಸಾಧನಾ ಸರ್ಗಮ್​ ಹಾಡಿದ್ದಾರೆ.

ಚುಪ್ಕೆ ಸೆ…… ನಾನು ಈ ಹಾಡನ್ನು ಪೂರ್ಣವಾಗಿ ಇಷ್ಟಪಟ್ಟೆ ಮತ್ತು ಅದನ್ನು ಹಾಡಲು ಪ್ರಯತ್ನಿಸಲು ಬಯಸುತ್ತೇನೆ. ಮೂಲ ಗಾಯಕರು ಬೇಸರಿಸಬೇಡಿ ಎಂದು ಕೋರಿ ಪೋಸ್ಟ್​ ಮಾಡಿದ್ದಾರೆ.

ಅವರು ಪೋಸ್ಟ್​ ಹಂಚಿಕೊಂಡಾಗಿನಿಂದ ವಿಡಿಯೊ ವೈರಲ್​ ಆಗಿದ್ದು, ಆಕೆಯ ಮಧುರ ಧ್ವನಿಗೆ ಜನರು ಖುಷಿಪಟ್ಟಿದ್ದಾರೆ. ಕಾಮೆಂಟ್​ ವಿಭಾಗವು ಹೃದಯ ಮತ್ತು ಪ್ರೀತಿಯ ಎಮೋಜಿಗಳಿಂದ ತುಂಬಿದೆ.

20 ವರ್ಷದ ಪಾಕಿಸ್ತಾನಿ ಸಾಮಾಜಿಕ ಜಾಲತಾಣ ಇನ್​ಫ್ಲುಯೆನ್ಸರ್​ 2.4 ಮಿಲಿಯನ್​ಗಿಂತಲೂ ಹೆಚ್ಚು ಫಾಲೋಯರ್​ಗಳನ್ನು ಅನುಸರಿಸುತ್ತಿದ್ದಾರೆ. ಆಕೆ ಮಾನಸಿಕ ಆರೋಗ್ಯ ಸಮಸ್ಯೆಗಳ ಬಗ್ಗೆ ಮಾತನಾಡುವುದರ ಜೊತೆಗೆ ಇತ್ತೀಚಿನ ಮೇಕಪ್​ ಮತ್ತು ಫ್ಯಾಷನ್​ ಪ್ರವೃತ್ತಿಗಳು ಸೇರಿದಂತೆ ಹಲವಾರು ವಿಷಯಗಳ ಕುರಿತು ಕಂಟೆಂಟ್​ ಪ್ರಸ್ತುತಪಡಿಸುತ್ತಾರೆ. ಭಾರತ ಮತ್ತು ಪಾಕಿಸ್ತಾನ ಎರಡರಲ್ಲೂ ಸೂಪರ್​ ವೆೈರಲ್​ ಆದ ಪಾವ್ರಿ ವಿಡಿಯೋ ಆಕೆಯ ಖ್ಯಾತಿಗೆ ಕಾರಣವಾಗಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...