alex Certify ಭಯಾನಕ ಕಾಯಿಲೆಯಿಂದ ಬಳಲುತ್ತಿದೆ ಈ 10 ತಿಂಗಳ ಕಂದಮ್ಮ: ಚಿಕಿತ್ಸೆಗೆ ಬೇಕು 16 ಕೋಟಿ ರೂ. | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಯಾನಕ ಕಾಯಿಲೆಯಿಂದ ಬಳಲುತ್ತಿದೆ ಈ 10 ತಿಂಗಳ ಕಂದಮ್ಮ: ಚಿಕಿತ್ಸೆಗೆ ಬೇಕು 16 ಕೋಟಿ ರೂ.

ಸ್ಪೈನಲ್​​ ಮಸ್ಕುಲಾರ್​ ಆಟ್ರೋಫಿ ಎಂಬ ವಿಚಿತ್ರ ಕಾಯಿಲೆಯಿಂದ ಬಳಲುತ್ತಿರುವ 10 ತಿಂಗಳ ಕಂದಮ್ಮನ ಚಿಕಿತ್ಸೆಗೆ ನೆರವಾಗುವಂತೆ ಪಾಟ್ನಾದ ದಂಪತಿಗಳು ಮನವಿ ಮಾಡಿದ್ದಾರೆ. ಆರ್ಥಿಕ ನೆರವಿಗಾಗಿ ಈ ದಂಪತಿ ಪ್ರಧಾನಿ ಮೋದಿ ಹಾಗೂ ಬಿಹಾರದ ಸಿಎಂ ನಿತೀಶ್​ ಕುಮಾರ್​ ಬಳಿಯೂ ಸಹಾಯ ಬೇಡಿದ್ದಾರೆ. ಈ ವಿಚಿತ್ರ ಕಾಯಿಲೆಯಿಂದ ಬಳಲುತ್ತಿರುವ ಮಗುವಿಗೆ ಇಂಜೆಕ್ಷನ್​ವೊಂದರ ಅಗತ್ಯವಿದ್ದು ಇದರ ಮೌಲ್ಯ ಬರೋಬ್ಬರಿ 16 ಕೋಟಿ ರೂಪಾಯಿ ಆಗಿದೆ.

ಪಾಟ್ನಾದ 10 ತಿಂಗಳ ಕಂದಮ್ಮ ಅಯಾಂಶ್​​​ ಸ್ಪೈನಲ್​​ ಆಟ್ರೋಫಿ ಟೈಪ್​ 1 ಎಂಬ ವಿರಳ ಕಾಯಿಲೆಯಿಂದ ಬಳಲುತ್ತಿದೆ. ಈ ವಿಚಿತ್ರ ಕಾಯಿಲೆಗೆ ಅಮೆರಿಕದಿಂದ ಆಮದು ಮಾಡಿಕೊಳ್ಳಬಹುದಾದ 16 ಕೋಟಿ ರೂಪಾಯಿ ಮೌಲ್ಯದ ಇಂಜೆಕ್ಷನ್​ ಒಂದೇ ಪರಿಹಾರವಾಗಿದೆ.

ಅಯಾಂಶ್​​ ಪೋಷಕರಾದ ಅಲೋಕ್​ ಕುಮಾರ್​ ಸಿಂಗ್​​ ಹಾಗೂ ನೇಗಾ ಸಿಂಗ್​ ಮಗುವಿನ ಚಿಕಿತ್ಸೆಗೆ ಆರ್ಥಿಕ ಸಂಗ್ರಹ ಕೋರಿ ದೇಣಿಗೆ ಸಂಗ್ರಹಿಸುತ್ತಿದ್ದಾರೆ. ಪೋಷಕರು ನೀಡಿರುವ ಮಾಹಿತಿಯ ಪ್ರಕಾರ ಅಯಾಂಶ್​​ಗೆ​ 2 ತಿಂಗಳ ಪ್ರಾಯದವನಾಗಿದ್ದಾಗಿನಿಂದಲೇ ಕಾಯಿಲೆಯ ಲಕ್ಷಣಗಳು ಗೋಚರಿಸುತ್ತಾ ಹೋದವು. ಆದರೆ ನಮಗೆ ಇದು ಇಂತಹ ಭಯಾನಕ ಕಾಯಿಲೆ ಇರಬಹುದು ಎಂಬ ಊಹೆಯೂ ಇರಲಿಲ್ಲ. ಆದರೆ ಇದೀಗ ಪುತ್ರನಿಗೆ ಇರುವ ಭಯಾನಕ ಕಾಯಿಲೆ ಬಗ್ಗೆ ತಿಳಿದು ಪೋಷಕರಿಗೆ ದಿಕ್ಕೇ ತೋಚದಂತಾಗಿದೆ.

ಎಸ್​ಎಂಎ ಅನ್ನೋದು ಇಂದು ಭಯಾನಕ ಕಾಯಿಲೆಯಾಗಿದ್ದು ಇದು ಮೆದಳು ಹಾಗೂ ಬೆನ್ನು ಮೂಳೆಯ ನರಕೋಶಗಳನ್ನು ನಾಶ ಮಾಡುತ್ತದೆ. ಈ ಕಾಯಿಲೆ ಹೊಂದಿರುವ ಕಂದಮ್ಮ ಸೂಕ್ತ ಚಿಕಿತ್ಸೆ ಸಿಗದೇ ಹೋದಲ್ಲಿ 2 ವರ್ಷಕ್ಕಿಂತ ಹೆಚ್ಚು ಕಾಲ ಬದುಕಲು ಸಾಧ್ಯವೇ ಇಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...