alex Certify ಯಾವ ದೇಶ ಹೊಂದಿದೆ ವಿಶ್ವದ ಪ್ರಬಲ ಪಾಸ್‌ಪೋರ್ಟ್ ? ಇಲ್ಲಿದೆ ಟಾಪ್‌ 10 ಪಟ್ಟಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಯಾವ ದೇಶ ಹೊಂದಿದೆ ವಿಶ್ವದ ಪ್ರಬಲ ಪಾಸ್‌ಪೋರ್ಟ್ ? ಇಲ್ಲಿದೆ ಟಾಪ್‌ 10 ಪಟ್ಟಿ

ಜಗತ್ತಿನಲ್ಲಿ ಅತ್ಯಂತ ಪ್ರಬಲ ಪಾಸ್ ಪಾರ್ಟ್ ಹೊಂದಿರುವ ದೇಶ ಯಾವುದು, ಯಾವ ದೇಶದ ಪಾಸ್ ಪೋರ್ಟ್ ದುರ್ಬಲ ಎಂದು ತಿಳಿಯುವ ಪ್ರಮುಖ ಹೆನ್ರಿ ಪಾಸ್‌ಪೋರ್ಟ್ ಸೂಚ್ಯಂಕ ಇತ್ತೀಚಿಗೆ ಬಿಡುಗಡೆಯಾಗಿದೆ. ಇದರಲ್ಲಿ 199 ವಿಭಿನ್ನ ಪಾಸ್‌ಪೋರ್ಟ್‌ಗಳು ಮತ್ತು 227 ಪ್ರಯಾಣದ ಸ್ಥಳಗಳು ಸೇರಿವೆ. 2023ರ ಹೆನ್ರಿ ಪಾಸ್‌ಪೋರ್ಟ್ ಸೂಚ್ಯಂಕ ವರದಿ ಪ್ರಕಾರ ಈ ಬಾರಿ ಪ್ರಬಲ ಪಾಸ್ ಪೋರ್ಟನ್ನ ಸಿಂಗಾಪುರ ಹೊಂದಿದ್ದು ಐದು ವರ್ಷಗಳಿಂದ ಈ ಸ್ಥಾನದಲ್ಲಿದ್ದ ಜಪಾನನ್ನು ಮೂರನೇ ಸ್ಥಾನಕ್ಕೆ ತಳ್ಳಿದೆ.

ಸಿಂಗಾಪುರವು ಈಗ ಹೆನ್ರಿ ಪಾಸ್‌ಪೋರ್ಟ್ ಸೂಚ್ಯಂಕ 2023 Q3 ನಲ್ಲಿ ಅಗ್ರ ಸ್ಥಾನವನ್ನು ಪಡೆದುಕೊಂಡಿದೆ. ಇದು ಪ್ರಪಂಚದಾದ್ಯಂತ 227 ದೇಶಗಳಲ್ಲಿ 192 ದೇಶಗಳಿಗೆ ವೀಸಾ ಮುಕ್ತ ಪ್ರವೇಶವನ್ನು ಒದಗಿಸುತ್ತದೆ. ಅಗ್ರಸ್ಥಾನವನ್ನು ಈ ಹಿಂದೆ ಜಪಾನ್ ಐದು ವರ್ಷಗಳ ಕಾಲ ಆಕ್ರಮಿಸಿಕೊಂಡಿತ್ತು. ಎರಡನೇ ಸ್ಥಾನವನ್ನು ಜರ್ಮನಿ, ಇಟಲಿ ಮತ್ತು ಸ್ಪೇನ್ ಆಕ್ರಮಿಸಿಕೊಂಡಿವೆ. ಈ ದೇಶಗಳು 190 ದೇಶಗಳಿಗೆ ಮುಕ್ತ ಪ್ರವೇಶವನ್ನು ಒದಗಿಸುತ್ತದೆ. ಜಪಾನ್, ಆಸ್ಟ್ರಿಯಾ, ಫಿನ್ ಲ್ಯಾಂಡ್ ಮತ್ತು ಫ್ರಾನ್ಸ್ 189 ದೇಶಗಳಿಗೆ ವೀಸಾ ಮುಕ್ತ ಪ್ರವೇಶ ನೀಡುವುದರೊಂದಿಗೆ ಮೂರನೇ ಸ್ಥಾನವನ್ನು ಪಡೆದುಕೊಂಡಿವೆ.

ಯುನೈಟೆಡ್ ಕಿಂಗ್ ಡಮ್ ಈ ಬಾರಿ ಎರಡು ಸ್ಥಾನ ಮೇಲಕ್ಕೇರಿದ್ದು ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿದೆ. ಮತ್ತೊಂದೆಡೆ ಯುನೈಟೆಡ್ ಸ್ಟೇಟ್ಸ್ 184 ದೇಶಗಳಿಗೆ ಪ್ರವೇಶದೊಂದಿಗೆ ಎಂಟನೇ ಸ್ಥಾನದಲ್ಲಿದೆ. ಕಳೆದ ಬಾರಿ 6 ನೇ ಸ್ಥಾನದಲ್ಲಿದ್ದ ಯುಎಸ್ ಒಂದು ದಶಕದಿಂದ ತನ್ನ ಕುಸಿತವನ್ನು ಮುಂದುವರೆಸಿದೆ.

ಅಫ್ಘಾನಿಸ್ತಾನವು 27 ಸ್ಕೋರ್‌ನೊಂದಿಗೆ ವಿಶ್ವದ ದುರ್ಬಲ ಪಾಸ್‌ಪೋರ್ಟ್‌ ಆಗಿದ್ದು ಅತ್ಯಂತ ಕೆಳಭಾಗದ ಸ್ಥಾನದಲ್ಲಿದೆ. ದುರ್ಬಲ ಪಾಸ್ ಪೋರ್ಟ್ ಹೊಂದಿರುವ ಇರಾಕ್ ಮತ್ತು ಸಿರಿಯಾ 29 ಮತ್ತು 30 ಅಂಕಗಳೊಂದಿಗೆ ಕ್ರಮವಾಗಿ ಎರಡನೇ ಮತ್ತು ಮೂರನೇ ಕಡಿಮೆ ಸ್ಥಾನದಲ್ಲಿವೆ.

ಹೆನ್ಲಿ ಪಾಸ್‌ಪೋರ್ಟ್ ಸೂಚ್ಯಂಕ 2023 ರಲ್ಲಿ ಅಗ್ರ ಹತ್ತು ದೇಶಗಳ ಪಟ್ಟಿ

1. ಸಿಂಗಾಪುರ

2. ಜರ್ಮನಿ, ಇಟಲಿ ಮತ್ತು ಸ್ಪೇನ್

3. ಆಸ್ಟ್ರಿಯಾ, ಫಿನ್ಲ್ಯಾಂಡ್, ಫ್ರಾನ್ಸ್, ಸ್ಪೇನ್, ಲಕ್ಸೆಂಬರ್ಗ್, ದಕ್ಷಿಣ ಕೊರಿಯಾ ಮತ್ತು ಸ್ವೀಡನ್

4. ಡೆನ್ಮಾರ್ಕ್, ಐರ್ಲೆಂಡ್, ನೆದರ್ಲ್ಯಾಂಡ್ಸ್ ಮತ್ತು ಯುನೈಟೆಡ್ ಕಿಂಗ್ ಡಮ್

5. ಬೆಲ್ಜಿಯಂ, ಜೆಕ್ ರಿಪಬ್ಲಿಕ್, ಮಾಲ್ಟಾ, ನ್ಯೂಜಿಲ್ಯಾಂಡ್, ನಾರ್ವೆ, ಪೋರ್ಚುಗಲ್ ಮತ್ತು ಸ್ವಿಟ್ಜರ್ಲೆಂಡ್

6. ಆಸ್ಟ್ರೇಲಿಯಾ, ಹಂಗೇರಿ ಮತ್ತು ಪೋಲೆಂಡ್

7. ಕೆನಡಾ ಮತ್ತು ಗ್ರೀಸ್

8. ಲಿಥುವೇನಿಯಾ ಮತ್ತು ಯುನೈಟೆಡ್ ಸ್ಟೇಟ್ಸ್

9. ಲಾಟ್ವಿಯಾ, ಸ್ಲೋವಾಕಿಯಾ ಮತ್ತು ಸ್ಲೊವೇನಿಯಾ

10. ಎಸ್ಟೋನಿಯಾ ಮತ್ತು ಐಸ್ಲ್ಯಾಂಡ್

ಹೆನ್ಲಿ ಪಾಸ್‌ಪೋರ್ಟ್ ಸೂಚ್ಯಂಕದಲ್ಲಿ ಭಾರತದ ಸ್ಥಾನವೆಷ್ಟು ?

ಭಾರತವು, ಟೋಗೊ ಮತ್ತು ಸೆನೆಗಲ್ ಜೊತೆಗೆ 80 ನೇ ಸ್ಥಾನದಲ್ಲಿದೆ. ಕಳೆದ ಬಾರಿಗಿಂತ ಈ ವರ್ಷ 5 ಸ್ಥಾನ ಮೇಲೇರಿದೆ. ಭಾರತವು ಈಗ ವಿಶ್ವದ 57 ದೇಶಗಳಿಗೆ ವೀಸಾ-ಮುಕ್ತ ಪ್ರವೇಶವನ್ನು ಒದಗಿಸುತ್ತದೆ. 2022 ರ ಶ್ರೇಯಾಂಕದಲ್ಲಿ ಭಾರತವು 87 ನೇ ಸ್ಥಾನದಲ್ಲಿತ್ತು. ಕಳೆದ ವರ್ಷದಿಂದ ಏಳು ಸ್ಥಾನಗಳ ಗಮನಾರ್ಹ ಸುಧಾರಣೆಯನ್ನು ಕಂಡಿದೆ. ವರದಿಯ ಪ್ರಕಾರ ಭಾರತವು ಭೂತಾನ್, ಮಾಲ್ಡೀವ್ಸ್ ಮತ್ತು ನೇಪಾಳ ಸೇರಿದಂತೆ 57 ದೇಶದಳಿಗೆ ವೀಸಾ ಮುಕ್ತ ಪ್ರವೇಶವನ್ನು ಒದಗಿಸುತ್ತದೆ. 170 ಕ್ಕೂ ಹೆಚ್ಚು ಇತರ ದೇಶಗಳನ್ನು ಪ್ರವೇಶಿಸಲು ವೀಸಾ ಪ್ರವೇಶದ ಅಗತ್ಯವಿದೆ.

ಹೆನ್ರಿ ಪಾಸ್‌ಪೋರ್ಟ್ ಸೂಚ್ಯಂಕ ಎಂದರೇನು ?

ಹೆನ್ರಿ ಪಾಸ್‌ಪೋರ್ಟ್ ಸೂಚ್ಯಂಕವು ಇಂಟರ್‌ನ್ಯಾಶನಲ್ ಏರ್ ಟ್ರಾನ್ಸ್ ಪೋರ್ಟ್ ಅಸೋಸಿಯೇಷನ್ (IATA) ಯ ವಿಶೇಷ ಮತ್ತು ಅಧಿಕೃತ ಡೇಟಾವನ್ನು ಆಧರಿಸಿದೆ. ಇದು ವಿಶ್ವದ ಅತಿದೊಡ್ಡ ಮತ್ತು ನಿಖರವಾದ ಪ್ರಯಾಣದ ಮಾಹಿತಿಯ ಡೇಟಾಬೇಸ್ ಅನ್ನು ನಿರ್ವಹಿಸುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...