alex Certify ಜಗತ್ತಿನ ಮೊದಲ ಖಾಸಗಿ ಲಕ್ಸುರಿ ರೈಲು ಅಭಿವೃದ್ಧಿಪಡಿಸುತ್ತಿರುವ ಫ್ರೆಂಚ್‌ ವಿನ್ಯಾಸಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜಗತ್ತಿನ ಮೊದಲ ಖಾಸಗಿ ಲಕ್ಸುರಿ ರೈಲು ಅಭಿವೃದ್ಧಿಪಡಿಸುತ್ತಿರುವ ಫ್ರೆಂಚ್‌ ವಿನ್ಯಾಸಕ

ಆಪಲ್ ಕಂಪನಿಯ ಸ್ಥಾಪಕ ಸ್ಟೀವ್‌ ಜಾಬ್ಸ್‌ರ ವೈಯಕ್ತಿಕ ನೌಕೆಯ ವಿನ್ಯಾಸ ಮಾಡಿಕೊಟ್ಟಿದ್ದ ಫ್ರೆಂಚ್ ವಿನ್ಯಾಸಕ ಥಿಯೆರಿ ಗಗೇನ್ ಇದೀಗ ’ಜಿ-ಟ್ರೇನ್’ ಹೆಸರಿನಲ್ಲಿ ಖಾಸಗಿ ಐಷಾರಾಮಿ ರೈಲೊಂದನ್ನು ವಿನ್ಯಾಸ ಮಾಡಿದ್ದಾರೆ.

1,300 ಅಡಿ ಉದ್ದವಿರಲಿರುವ ಈ ರೈಲು 14 ಕಾರುಗಳನ್ನು ಹೊಂದಲಿದ್ದು, ಅತ್ಯಾಧುನಿಕವಾದ ಸ್ಮಾರ್ಟ್ ಗಾಜಿನ ಹೊರಮೈ ಹೊಂದಿರಲಿದೆ. ರೈಲಿನಲ್ಲಿ ಒಮ್ಮೆಲೆ 18 ಅತಿಥಿಗಳು ಪ್ರಯಾಣಿಸಬಹುದಾಗಿದ್ದು, ಗಂಟೆಗೆ 160 ಕಿಮೀ ವೇಗದಲ್ಲಿ ಚಲಿಸಲಿದೆ. ಅಮೆರಿಕ ಹಾಗೂ ಯೂರೋಪ್‌ನ ಹಳಿಗಳ ಮೇಲೆ ಈ ರೈಲು ಸಂಚರಿಸಬಲ್ಲುದಾಗಿದೆ.

ಬಂಪರ್ ಸ್ಯಾಲರಿ: ಇಬ್ಬರಿಗೆ 75 ಲಕ್ಷ ರೂ., 81 ವಿದ್ಯಾರ್ಥಿಗಳಿಗೆ 25 ಲಕ್ಷ ರೂ. ವೇತನದ ಉದ್ಯೋಗ

ಈ ಲಕ್ಸುರಿ ರೈಲಿನ ನಿರ್ಮಾಣಕ್ಕೆ 350 ದಶಲಕ್ಷ ಅಮೆರಿಕನ್ ಡಾಲರ್‌ ಖರ್ಚಾಗಲಿದೆ.

ಸಕಲ ಅತ್ಯಾಧುನಿಕ ಸವಲತ್ತುಗಳಲ್ಲದೇ, ಪುಟ್ಟದೊಂದು ಉದ್ಯಾನ, ಅಲ್‌ಫ್ರೆಸ್ಕೋ ಟೆರೇಸ್‌ಗಳಂಥ ವಿಶಿಷ್ಟ ಫೀಚರ್‌ಗಳನ್ನು ಈ ರೈಲು ಹೊಂದಿರಲಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...