alex Certify ಸ್ಟ್ರಾಬೆರಿ ಬಿರಿಯಾನಿ ಕಂಡು ನೆಟ್ಟಿಗರು ಕಂಗಾಲು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ಟ್ರಾಬೆರಿ ಬಿರಿಯಾನಿ ಕಂಡು ನೆಟ್ಟಿಗರು ಕಂಗಾಲು

Image result for pakistani-man-garnishes-biryani-with-strawberries-in-viral-post-internet-reactsವಿಚಿತ್ರವಾದ ತಿಂಡಿಗಳನ್ನ ತಯಾರಿಸುವ ವಿಡಿಯೋ ಹಾಗೂ ಫೋಟೋಗಳಿಗೆ ಇಂಟರ್ನೆಟ್​​ನಲ್ಲೇನು ಬರಗಾಲವಿಲ್ಲ. ಕೆಲ ದಿನಗಳ ಹಿಂದಷ್ಟೇ ವ್ಯಕ್ತಿಯೊಬ್ಬ ಮ್ಯಾಕ್​ ಡೊನಾಲ್ಡ್ ಚಿಕನ್​​ನಿಂದ ಐಸ್​ಕ್ರೀಂ ತಯಾರಿಸಿ ಸುದ್ದಿಯಾಗಿದ್ದ. ಇದೀಗ ಪಾಕಿಸ್ತಾನದ ವ್ಯಕ್ತಿಯೊಬ್ಬ ಬಿರಿಯಾನಿಗೆ ಸ್ಟ್ರಾಬೆರ್ರಿಗಳನ್ನ ಹಾಕೋ ಮೂಲಕ ನೆಟ್ಟಿಗರು ಮೂಗು ಮುರಿಯುವಂತೆ ಮಾಡಿದ್ದಾನೆ.
ಸ್ಟ್ರಾಬೆರ್ರಿಯನ್ನ ಹಾಕಲಾದ ಈ ಬಿರಿಯಾನಿ ತಿನಿಸಿಗೆ ಸ್ಟ್ರಾಬಿರಿಯಾನಿ ಎಂದು ನಾಮಕರಣ ಕೂಡ ಮಾಡಲಾಗಿದೆ.
ಅಂದಹಾಗೆ ಈ ಹೊಸ ಹಾಗೂ ವಿಚಿತ್ರ ಪ್ರಯತ್ನ ಮಾಡಿದ ವ್ಯಕ್ತಿಯನ್ನ ಇಸ್ಲಾಮಾಬಾದ್​ನ ಸಾದ್​ ಎಂದು ಗುರುತಿಸಲಾಗಿದೆ.
ಒಂದು ದೊಡ್ಡ ಪಾತ್ರೆಯಲ್ಲಿ ಬಿರಿಯಾನಿ ತಯಾರಿಸಿರುವ ಸಾದ್​ ಅದಕ್ಕೆ ಸ್ಟ್ರಾಬೆರ್ರಿಗಳಿಂದ ಅಲಂಕಾರ ಮಾಡಿದ್ದಾರೆ. ಆದರೆ ಬಿರಿಯಾನಿ ತಯಾರಿಸುವ ವೇಳೆ ಸ್ಟ್ರಾಬೆರ್ರಿ ಹಾಕಿದ್ದಾರಾ ಇಲ್ವಾ ಅನ್ನೋದಕ್ಕೆ ಸ್ಪಷ್ಟನೆ ಸಿಕ್ಕಿಲ್ಲ.

ನಿರುದ್ಯೋಗಿ ಕಾರ್ಮಿಕರಿಗೆ ಭರ್ಜರಿ ಗುಡ್ ನ್ಯೂಸ್: ನಗದು ಪರಿಹಾರ ಪಡೆಯಲು ಅವಕಾಶ

ಫೋಟೋವನ್ನ ಟ್ವಿಟರ್​ನಲ್ಲಿ ಶೇರ್​ ಮಾಡಿರುವ ಸಾದ್​ ಈ ಸ್ಟ್ರಾಬಿರಿಯಾನಿಯನ್ನ ನಾವಿಂದು ಮನೆಯಲ್ಲಿ ತಯಾರಿಸಿದ್ದೇವೆ. ಇದಕ್ಕೆ ದೇಸಿ ಟ್ವೀಟಿಗರು ಏನು ಹೇಳ್ತಾರೆ ಎಂಬ ಕುತೂಹಲವಿದೆ ಎಂದು ಶೀರ್ಷಿಕೆ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...